Home Posts tagged #v4stream (Page 278)

ಕೊಂಚಾಡಿ ರಸ್ತೆಯಲ್ಲಿ ಗಲೀಜು ನೀರು: ಪಾಲಿಕೆಯ ಶವ ನೇತು ಹಾಕಿ ಚಳುವಳಿ

ಕೊಂಚಾಡಿಯ ಕೆನರಾ ಅಪಾರ್ಟ್ಮೆಂಟ್ ನವರು ಸಾರ್ವಜನಿಕ ರಸ್ತೆಗೆ ಮಲ ಮಿಶ್ರಿತ ಗಲೀಜು ನೀರನ್ನು ಬಿಡುತ್ತಿರುವ ಬಗ್ಗೆ ಹಲವಾರು ಬಾರಿ ದೂರು, ಮನವಿಗಳನ್ನು ನೀಡಿದರು, ಕ್ರಮ ಕೈಗೊಳ್ಳದ ನಗರ ಪಾಲಿಕೆಯ ವಿರುದ್ಧ ಪ್ರತಿಭಟನಾ ಕಾರ್ಯಕ್ರಮ ನಡೆಸಿದ ನಂತರವೂ ಮತ್ತದೇ ರೀತಿಯಲ್ಲಿ ಗಲೀಜು ನೀರು ಸಾರ್ವಜನಿಕ ರಸ್ತೆಗೆ ಬಿಡುತ್ತಿರುವ ವಿರುದ್ಧ ಇಲ್ಲಿನ ಜನಪರ ಸಂಘಟನೆಗಳು ನಗರ

ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ : ಡಿ.ವಿ.ಸದಾನಂದಗೌಡ

ಬೆಂಗಳೂರು: ರಾಜ್ಯದ ಜನರ ಬೆಂಬಲ ಹಾಗೂ ಪ್ರಧಾನಿ ಭೇಟಿ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರೊಂದಿಗಿನ ಸಾಮರಸ್ಯ ನೋಡಿದರೆ ಸದ್ಯಕ್ಕೆ ಬದಲಾವಣೆ ಇಲ್ಲ ಎಂದೆನಿಸುತ್ತದೆ. ಆದರೆ, ಮುಂದಿನದು ಬಿಜೆಪಿ ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಎಂದರೆ ಹೀಗೆ ದಿನಕ್ಕೊಂದು ತಿರುವುಗಳು ಸಣ್ಣಪುಟ್ಟ ವ್ಯತ್ಯಾಸಗಳು ಆಗುತ್ತಿರುತ್ತವೆ. ನನಗೆ ತಿಳಿದ

ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ವಿಚಾರಿಸಿ ಪೂಜಾರಿ ಕಣ್ಣೀರು

ಕಾಂಗ್ರೆಸ್ ಹಿರಿಯ ಮುಖಂಡ ಅಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಿ, ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಕಣ್ಣೀರು ಹಾಕಿದ್ದಾರೆ. ಅಸ್ಕರ್ ಫೆರ್ನಾಂಡಿಸ್ ಅವರು ಯೋಗ ಮಾಡುವ ವೇಳೆ ಜಾರಿ ಬಿದ್ದು ಗಾಯಗೊಂಡು ಮಂಗಳೂರಿನ ಯೆನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಕಾಂಗ್ರೆಸ್‌ನ ಹಲವು ಮುಖಂಡರು ಅಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ಜನಾರ್ದನ ಪೂಜಾರಿ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ

ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ವಿಚಾರಿಸಿದ ಎಂ.ಬಿ ಪಾಟೀಲ್

ಕಾಂಗ್ರೆಸ್ ಹಿರಿಯ ಮುಖಂಡ ಅಸ್ಕರ್ ಫೆರ್ನಾಂಡಿಸ್ ಯೋಗ ಮಾಡುವ ವೇಳೆ ಜಾರಿ ಬಿದ್ದು ಗಾಯಗೊಂಡು ಮಂಗಳೂರಿನ ಯೆನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.ಬುಧವಾರದಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಅಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯವನ್ನು ವಿಚಾರಿಸಿದರು. ತದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಸ್ಕರ್ ಅವರಿಗೆ ಸದ್ಯ ಪರಿಣಿತ ತಜ್ಞ ವೈದ್ಯರ ತಂಡ ಚಿಕಿತ್ಸೆ ಕೊಡ್ತಾ ಇದ್ದಾರೆ.ಮಣಿಪಾಲ್ ವೈದ್ಯರು

ಗಂಗೊಳ್ಳಿ : ಅಕ್ರಮ ಗೋಸಾಗಾಟ ಓಮ್ನಿ ಸಹಿತ ನಾಲ್ವರ ಬಂಧನ

ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗೋಸಾಗಾಟ ನಡೆಯುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಈಸುಬು ಬ್ಯಾರಿ, ಮಹಮ್ಮದ್ ಮಸೂದ್, ಅಬ್ದುಲ್ ಸಮದ್ ಮತ್ತು ಭದ್ರ ಪೂಜಾರಿ ಬಂಧಿತರು. ಮೋವಾಡಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗುತ್ತಿದ್ದಾಗ ಗಂಗೊಳ್ಳಿ ಠಾಣಾ ಪಿ. ಎಸ್. ಐ ನಂಜಾನಾಯ್ಕ ತಂಡ ಕಾರ್ಯಾಚರಣೆ ನಡೆಸಿ

ಕುಳಾಯಿ : ಸರ ಕಸಿದು ಕಳ್ಳ ಪರಾರಿ : ಸಿಸಿ ಟಿವಿಯಲ್ಲಿ ಸೆರೆ

ಸುರತ್ಕಲ್‍ನ ಕುಳಾಯಿ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ನಡೆದಿದೆ. ಕೃತ್ಯ ಎಸಗಿ ಕಳ್ಳ ಓಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕುಳಾಯಿ ನಿವಾಸಿ ಬಾಲಕೃಷ್ಣ ಪುರೋಹಿತ್ ಅವರ ಮನೆಗೆ ಕಳ್ಳನೋರ್ವ ನುಗ್ಗಿ ಅವರ ಪತ್ನಿ ಸುಮತಿ ಬಾಲಕೃಷ್ಣ ಆಚಾರ್ಯ ಅವರ ಕುತ್ತಿಗೆಯಿಂದ ನಾಲ್ಕು ಪವನ್ ಚಿನ್ನದ ಕರಿಮಣಿಯನ್ನು ಸೆಳೆದು ಪರಾರಿಯಾದ ಘಟನೆ ನಡೆದಿದೆ.ಇಬ್ಬರು ಯುವಕರು ಮಧ್ಯಾಹ್ನ ಮನೆಗೆ ಆಗಮಿಸಿ

ಉಡುಪಿಯಲ್ಲಿ ಕೃಷಿಯತ್ತ ಮುಖಮಾಡಿದ ಯುವ ಜನಾಂಗ

ಯುವ ಜನಾಂಗ ಮತ್ತೆ ಕೃಷಿಯತ್ತ ಮುಖ ಮಾಡಿದೆ ಅನ್ನೋದಕ್ಕೆ ಈ ಸ್ಟೋರಿಯೇ ಸಾಕ್ಷಿ ಹಡಿಲು ಬಿದ್ದಿರುವ ಭೂಮಿಯನ್ನು ಮತ್ತೆ ಹಸನಾಗಿಸಲು ಇಲ್ಲೊಂದು ಯುವಕರ ಗುಂಪು ಮುಂದಾಗಿದೆ. ಹೀಗೆ..ಭತ್ತದ ಪೈರು ಹಿಡ್ಕೊಂಡು ಗದ್ದೆಗಿಳಿದ ಯುವಕರು, ಉಡುಪಿಯ ಮೂಡುಪೆರಂಪಳ್ಳಿ ಶೀಂಭ್ರಾ ಎಂಬಲ್ಲಿನ ಯುವಕರು.ತನ್ನೂರಲ್ಲಿ ಬೇಸಾಯನೇ ಮಾಡದೇ ಹಡಿಲು ಬಿದ್ದಿದ್ದ ಭೂಮಿಯನ್ನ ಕೃಷಿ ಮಾಡಲು ಮುಂದಾಗಿರುವ ವಿದ್ಯಾವಂತ ಯುವಕರು. ಮೂಡು ಪೆರಂಪಳ್ಳಿಯ ಹಲವು ಎಕ್ರೆ ಕೃಷಿ ಭೂಮಿ ಬೇಸಾಯನೇ ಮಾಡದೇ

ಮಳೆ ನೀರಿಗೆ ಸಮರ್ಪಕ ವ್ಯವಸ್ಥೆವಿಲ್ಲದೇ ಕೃಷಿಗೆ ತೊಂದರೆ: ಶಾಸಕ ಡಾ.ವೈ.ಭರತ್ ಶೆಟ್ಟಿ ಭೇಟಿ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಮಯದಲ್ಲಿ ಅರ್ಕುಳಬೈಲ್‌ನಿಂದ ಹರಿದು ಹೋಗುವ ನೀರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ ಆಗುವುದನ್ನ ಮನಗಂಡ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ನೀರು ಹರಿದು ಹೋಗುವ ಮೋರಿಗಳು ಮಣ್ಣಿನಿಂದ ತುಂಬಿದ ಕಾರಣ ಕೃಷಿ ಭೂಮಿಯಲ್ಲಿ ನೀರು ತುಂಬಿ ಕೃಷಿಗೆ ತೊಂದರೆ ಆಗಿರುವುದರಿಂದ ಅಧಿಕಾರಿಗಳೊಂದಿಗೆ ಭೇಟಿ ಕೊಟ್ಟರು. ಇನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ

ಸುಬ್ರಹ್ಮಣ್ಯದಲ್ಲಿ ಸರಕಾರಿ ಬಸ್-ಕಾರು ಮಧ್ಯೆ ಅಪಘಾತ

ಕಡಬ: ಸರಕಾರಿ ಬಸ್ ಹಾಗೂ ಕಾರೊಂದರ ಮಧ್ಯೆ ಅಪಘಾತ ಸಂಭವಿಸಿದ ಘಟನೆ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕೈಕಂಬ ಬಳಿ ನಡೆದಿದೆ. ಸುಬ್ರಹ್ಮಣ್ಯದಿಂದ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ಹಾಸನದವರಿದ್ದ ಕಾರು ಕೈಕಂಬ ಬಳಿ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಹಾಸನದ ಚಾಲಕ ಪುಟ್ಟರಾಜು, ಜಯಂತಿ, ಲೀಲಾ ಎಂಬವರು ಸಣ್ಣ ಪುಟ್ಟ

ಉಳ್ಳಾಲದ ಕೇಂದ್ರ ಜುಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ

ದೇಶದಾದ್ಯಂತ ಇಂದು ಮುಸ್ಲಿಮರು ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಮಂಗಳೂರಿನ ಉಳ್ಲಾಲದ ಕೇಂದ್ರ ಜುಮಾ ಮಸೀದಿಯಲ್ಲಿ ಈದ್ ನಮಾಝ್ ನಿರ್ವಹಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಹಸ್ತಲಾಘವ, ಆಲಿಂಗನ ಇಲ್ಲದೇ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.