Home Posts tagged #v4stream (Page 283)

ಕುತ್ಲೂರು ಸರಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣಾ ಕಾರ್ಯಕ್ರಮ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ಈ ಹಿಂದೆ ದ.ಕ. ಜಿಲ್ಲಾ ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿರುವ ಬೆಳ್ತಂಗಡಿ ತಾಲೂಕಿನ ಕುತ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಶನಿವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು.

ಬಕ್ರೀದ್ ಆಚರಣೆ ಹಿನ್ನೆಲೆ: ಮುಂಜಾಗ್ರತಾ ಕ್ರಮವಾಗಿ ಚೆಕ್ ಪೋಸ್ಟ್: ಪೊಲೀಸ್ ಕಮಿಷನರ್ ಶಶಿಕುಮಾರ್

ಜು.21ರಂದು ಆಚರಿಸುವ ಬಕ್ರೀದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮತ್ತು ಮುಂಜಾಗರೂಕತಾ ಕ್ರಮವಾಗಿ ಪೊಲೀಸ್ ಕಮೀಷನರ್ ವ್ಯಾಪ್ತಿಯಲ್ಲಿ 25ಕ್ಕೂ ಅಧಿಕ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ. ಕಮಿಷನರೇಟ್ ವ್ಯಾಪ್ತಿಯ ಪ್ರತಿಯೊಂದು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲದೆ ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಗಡಿ ಭಾಗಗಳಲ್ಲಿ ಕೂಡಾ ಚೆಕ್ ಪೋಸ್ಟ್ ತೆರೆದು ಶಾಂತಿಯುತವಾಗಿ

ಮೂರನೇ ಅಲೆ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪ

ಮಂಗಳೂರು: ದೇಶದಾದ್ಯಂತ ಇಲ್ಲಿಯ ತನಕ 2 ಲಸಿಕೆ ಪಡೆದವರು ಕೇವಲ 7.78 ಕೋಟಿ ಜನ ಹಾಗೂ ಮೊದಲ ಲಸಿಕೆ ಪಡೆದವರು 14 ಕೋಟಿ (ಶೇ.10) ಜನರು ಮಾತ್ರ ಇಲ್ಲಿಯ ತನಕ ಕೇವಲ ಶೇ.15 ರಷ್ಟು ಜನರು ಮಾತ್ರ ಲಸಿಕೆ ಪಡೆದಿದ್ದು, ಈಗಾಗಲೇ 3ನೇ ಕೋವಿಡ್ ಅಲೆ ಪ್ರರಂಭವಾಗಿದ್ದು, ಲಸಿಕೆ ಪ್ರಾರಂಭವಾಗಿ 7 ತಿಂಗಳು ಕಳೆದರೂ ಸರ್ಕಾರ 3ನೇ ಅಲೆ ತಡೆಯಲು ಮುಂಜಾಗೃತ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಎಂಎಲ್‍ಸಿ ಹರೀಶ್ […]

ನಳಿನ್ ಕುಮಾರ್ ಕಟೀಲ್‍ಗೆ ಕಾಂಗ್ರೆಸ್‍ನಲ್ಲಿ ಸಿಎಂ ಘೋಷಿಸಿಸುವ ನೈತಿಕತೆ ಇಲ್ಲ : ಹರೀಶ್ ಕುಮಾರ್

ಮಂಗಳೂರು: ಕಾಂಗ್ರೆಸ್‍ನಲ್ಲಿ 2023ಕ್ಕೆ ದಲಿತ ಸಿಎಂ ಅಭ್ಯರ್ಥಿಯಾಗಿ ಮಲ್ಲಿಕಾಜುನ ಖರ್ಗೆ ಅವರನ್ನು ಘೋಷಿಸಿ ಎಂಬ ಹೇಳಿಕೆಯನ್ನು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕಾಂಗ್ರೆಸ್‍ನಲ್ಲಿ ಯಾರನ್ನು ಸಿಎಂ ಆಗಿ ಘೋಷಿಸಬೇಕು ಎಂದು ಹೇಳುವ ನೈತಿಕತೆ ಇಲ್ಲ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಎಂಎಲ್‍ಸಿ ಹರೀಶ್ ಕುಮಾರ್ ತಿಳಿಸಿದರು. ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಕಾಂಗ್ರೆಸ್‍ನಲ್ಲಿ ಎಲ್ಲಾ ವರ್ಗದವರಿಗೂ

ಉಚ್ಚಿಲ ಬಡಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೃತಕ ನೆರೆ: ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ

ಕಳೆದ ನಾಲ್ಕು ವರ್ಷಗಳಿಂದ ಉಚ್ಚಿಲ ಬಡ ಗ್ರಾ.ಪಂ. ವ್ಯಾಪ್ತಿಯ ಭಾರತ್ ನಗರದ ಹನ್ನೆರಡು ಮನೆಗಳಿರುವ ಪ್ರದೇಶ ಸುತ್ತಲೂ ಮಳೆ ನೀರು ನಿಂತು ಕೃತಕ ದ್ವೀಪ ನಿರ್ಮಾಣಗೊಂಡಿದ್ದರೂ ಈ ಭಾಗದ ಶಾಸಕರಾಗಲೀ ಗ್ರಾ.ಪಂ. ಆಗಲಿ ಸ್ಪಂದಿಸುತ್ತಿಲ್ಲ ಎಂಬುದಾಗಿ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಇಲ್ಲಿಯ ಸಮಸ್ಯೆಯ ಬಗ್ಗೆ ಮಾದ್ಯಮಕ್ಕೆ ಮಾಹಿತಿ ನೀಡಿದ ದಿವ್ಯ ಎಂಬವರು, ಮಕ್ಕಳು, ಹಿರಿಯರು, ಅನಾರೋಗ್ಯ ಪೀಡಿತರು ವಾಸ ಮಾಡುವ ಬಡ ಎರ್ಮಾಳು ಭರತ್ ನಗರ ನಿವಾಸಿಗಳಾದ ನಾವು ಮಳೆ ಬಂದರೆ

ಮುಂಬೈಯಲ್ಲಿ ವರುಣನ ಆರ್ಭಟ: ರಸ್ತೆ, ರೈಲು ನಿಲ್ದಾಣಗಳಲ್ಲಿ ಪ್ರವಾಹ ಪರಿಸ್ಥಿತಿ

ಮುಂಬೈ: ಗುರುವಾರ ರಾತ್ರಿ ಮತ್ತು ಇಂದು ಬೆಳಗ್ಗೆ ಮುಂಬೈನ ಹಲವು ಏರಿಯಾಗಳಲ್ಲಿ ಸುರಿದ ಭಾರಿ ಮಳೆಗೆ ವಾಣಿಜ್ಯ ನಗರಿಯ ರಸ್ತೆಗಳಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ನಗರ ಸಾರಿಗೆ ಜತೆಗೆ ಸ್ಥಳೀಯ ರೈಲು ಕೂಡ ವಿಳಂಬವಾಗಿದೆ. ಗಾಂಧಿ ಮಾರ್ಕೆಟ್​ ಏರಿಯಾ, ಹಿಂದ್​ಮಟ ಜಂಕ್ಷನ್​ ಮತ್ತು ದಹಿಸರ್​ ಸಬ್​ವೇ ಸೇರಿದಂತೆ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ಸಿಯಾನ್​, ಬಾಂದ್ರಾ, ಅಂಧೇರಿ ಮತ್ತು ಸ್ಯಾಂತಕ್ರುಸ್​ ಏರಿಯಾಗಳು ಸಹ ಜಲಾವೃತಗೊಂಡಿವೆ. ಮಾಧ್ಯಮಗಳಲ್ಲಿ

ಯುವ ಜನತೆಯ ಮನಗೆದ್ದ ನಟಿ ಸುಶ್ಮಿತಾ ರಾಮ್‍ಕಳ

ಪ್ರಸುತ್ತ ದಿನಗಳಲ್ಲಿ ಸಿನಿಮಾ, ಧಾರಾವಾಹಿ, ಮಾಡೆಲಿಂಗ್ ಹೀಗೆ ಮುಂತಾದ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು, ಅದರ ಮೂಲಕ ಮಿಂಚಬೇಕು ಎಂಬ ಆಸೆ, ಕನಸನ್ನು ಕಾಣುವ ಅದೆಷ್ಟೋ ಜನರನ್ನು ನಾವು ಕಾಣಬಹುದು. ಇಂತಹ ಸಾಧನೆ ಮಾಡಬೇಕಾದರೆ ಕಲೆ ಎಂಬುದು ತುಂಬಾನೇ ಮುಖ್ಯ. ನಾನು ನಟ- ನಟಿಯಾಗಬೇಕು ಎನ್ನುವ ಕನಸು ಕಾಣುವ ಪ್ರತಿಯೊಬ್ಬರಲ್ಲಿಯೂ ಕಲೆ ಎಂಬುದು ಇದ್ದೆ ಇರುತ್ತದೆ. ಅಂತವರಲ್ಲಿ “ಸುಶ್ಮಿತಾ ರಾಮ್‍ಕಳ” ಒಬ್ಬರು. ರಾಮಕೃಷ್ಣ. ಪಿ ಹಾಗೂ ಕಲಾವತಿಯವರ ಪ್ರೀತಿಯ

ದೇರೆಬೈಲ್‌ನ 23ನೇ ಪೂರ್ವ ವಾರ್ಡಿನ ಸಮಸ್ಯೆಗಳ ಬಗ್ಗೆ ಮೇಯರ್ ಪ್ರೇಮಾನಂದ ಶೆಟ್ಟಿ ಪರಿಶೀಲನೆ

ಮಂಗಳೂರು ಮಹಾನಗರ ಪಾಲಿಕೆಯ ದೇರೆಬೈಲ್‌ನ 23ನೇ ಪೂರ್ವ ವಾರ್ಡಿನ ಸಮಸ್ಯೆಗಳ ಬಗ್ಗೆ ಮೇಯರ್ ಪ್ರೇಮಾನಂದ ಶೆಟ್ಟಿ ಸೇರಿದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಇನ್ನು ಲ್ಯಾಂಡ್ ಲಿಂಕ್‌ನ ಲೇಹೌಟ್‌ನಲ್ಲಿರುವ ಸಣ್ಣ ಉದ್ಯವನ ಹಾಗೂ ಡ್ರೈನೇಜ್ ಸಮಸ್ಯೆ ಮೇಯರ್ ಅವರು ಅಧಿಕಾರಿಗಳ ಜೊತೆಯಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಮೇಯರ್ , ಪಾಲಿಕೆಯ ವಿಶೇಷ ಅನುದಾನ ಮುಖಾಂತರ ಪಾರ್ಕ್‌ನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಲಾಂಡ್ ಲಿಂಕ್ಸ್ ನಲ್ಲಿರುವ

ಮಳೆಯಿಂದ ಹಾನಿಯಾಗಿರುವ ಪ್ರದೇಶಕ್ಕೆ ಮೇಯರ್ ಪ್ರೇಮಾನಂದ್ ಶೆಟ್ಟಿ ಭೇಟಿ, ಪರಿಶೀಲನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಮಳೆ ಸುರಿದ ಪರಿಣಾಮ ಹಲವೆಡೆ ಹಾನಿ ಸಂಭವಿಸಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ನಗರದ ದೇರೆಬೈಲ್‌ನಲ್ಲಿ ವಾರ್ಡಿನ ಆಕಾಶಭವನದಲ್ಲಿ ಗುಡ್ಡ ಕುಸಿತ ಪ್ರದೇಶಕ್ಕೆ ಮೇಯರ್ ಪ್ರೇಮಾನಂದ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.ಈ ವೇಳೆ ಮಾತನಾಡಿದ ಮೇಯರ್, ಪಾಲಿಕೆ ವ್ಯಾಪ್ತಿಯಲ್ಲಿ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.