Home Posts tagged #vittal (Page 4)

ಬುಡೋಕನ್ ಕರಾಟೆ ಚಾಂಪಿಯನ್‌ಶಿಪ್ : ವಿಠಲ ಸುವರ್ಣ ರಂಗ ಮಂದಿರದ ವಿಧ್ಯಾರ್ಥಿಗಳಿಗೆ ಪ್ರಶಸ್ತಿ

ಫೆಬ್ರವರಿ 18 ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದ ರಾಜ್ಯಮಟ್ಟದ ಮೊದಲ ಬುಡೋಕನ್ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ವಿಟ್ಲದ ಕಳೆದ 30 ವರ್ಷಗಳಿಂದ ವಿಠಲ ಸುವರ್ಣ ರಂಗ ಮಂದಿರದಲ್ಲಿ ತರಬೇತಿ ನೀಡುತ್ತಿರುವ ಕರಾಟೆ ಶಿಕ್ಷಕರಾದ ಸೆನ್ಸಾಯಿ ಮಾಧವ ಅಳಿಕೆ ಇವರ ವಿಧ್ಯಾರ್ಥಿಗಳು ಭಾಗವಹಿಸಿದ್ದಾರೆ.ವಿಜೇತ ಮಕ್ಕಳ ಹೆಸರು ಈ ಕೆಳಗಿನಂತಿವೆ, ವಿಟ್ಲ ಜೇಸೀಸ್ ಸ್ಕೂಲ್

ಸಾಲೆತ್ತೂರು: ಬೆಂಕಿಗಾಹುತಿಯಾದ ಲಾರಿ – ಅಪಾರ ನಷ್ಟ

ವಿಟ್ಲ: ಸಾಲೆತ್ತೂರು ಸಮೀಪದ ಮೆದು ಎಂಬಲ್ಲಿನ ಪೆಟ್ರೋಲ್ ಬಂಕ್ ಎದುರುಗಡೆ ನಿಲ್ಲಿಸಿದ್ದ ಬಾರೀ ಗಾತ್ರದ ಲಾರಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಲಾರಿಯ ಮುಂದಿನ ಭಾಗ ಸಂಪೂರ್ಣ ಸುಟ್ಟು ಕರಕಲಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಪೆಟ್ರೋಲ್ ಬಂಕಿನ ಎದುರು ಈ ಘಟನೆ ನಡೆದಿದ್ದು, ಈ ಸಂದರ್ಬದಲ್ಲಿ ಸ್ಥಳೀಯರು ಹರಸಾಹಸಪಟ್ಟು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಬಂಟ್ವಾಳ ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ತಳಕ್ಕಾಗಮಿಸಿದ್ದಾರೆ.

ಮಾಣಿ : ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಪೂರ್ಣ ಸುಟ್ಟು ಕರಕಲಾದ ಮನೆ

ವಿಟ್ಲ: ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಪರಿಣಾಮ ಮನೆ ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಮಾಣಿ ಸಮೀಪ ನಡೆದಿದೆ. ಘಟನೆಯಿಂದ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಮಾಣಿ ಗ್ರಾಮದ ಕಾಪಿಕಾಡು ದೀಪಾ ಎಂಬವರ ಮನೆ ಬೆಂಕಿಗಾಹುತಿಯಾಗಿದೆ. ದೀಪ ಅವರು ಮನೆಯಲ್ಲಿ ಒಬ್ಬರೆ ಇದ್ದಾಗ ಈ ಘಟನೆ ಸಂಭವಿಸಿದ್ದು, ಬೆಂಕಿ ಕಾಣಿಸುತ್ತಿದ್ದಂತೆ ಅವರು ಹೊರಗಡೆ ಓಡಿ ಹೋಗಿದ್ದಾರೆ. ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಇದರ ಶಬ್ದದಿಂದ ಮಾಣಿ ಜನತೆ ಬೆಚ್ಚಿ

ವಿಟ್ಲ : ಬಾಲಕಿಗೆ ಬೈಕ್ ಢಿಕ್ಕಿ ಗಂಭೀರ ಗಾಯ

ವಿಟ್ಲ: ರಸ್ತೆ ಬದಿ ನಿಂತಿದ್ದ ಶಾಲಾ ಬಾಲಕಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಗಂಭೀರ ಗಾಯಗೊಂಡ ಘಟನೆ ವಿಟ್ಲದ ಒಕ್ಕೆತ್ತೂರು ಎಂಬಲ್ಲಿ ಸಂಭವಿಸಿದೆ. ವಿಟ್ಲ ಒಕ್ಕೆತ್ತೂರು ನಿವಾಸಿ ಬಶೀರ್ ಅವರ ಪುತ್ರಿ ಫಾತಿಮತ್ ನಿದಾ ಗಾಯಗೊಂಡ ವಿದ್ಯಾರ್ಥಿನಿಯಾಗಿದ್ದು, ಈಕೆ ವಿಟ್ಲ ಸರಕಾರಿ ಮಾದರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿಯಾಗಿದ್ದು, ಶಾಲೆಗೆ ಹೋಗಲು ಒಕ್ಕೆತ್ತೂರಿನಲ್ಲಿ ಆಟೋ ರಿಕ್ಷಾಕ್ಕೆ ಕಾಯುತ್ತಿದ್ದಾಗ ವಿಟ್ಲ ಕಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದು

ವಿಟ್ಲ: ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾದ್ರೂ ಕಾಮಗಾರಿ ನಡೆಸಿಲ್ಲ

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಗಾಂಧಿನಗರ ಮಾಳಮೂಲೆ ಸಂಪರ್ಕ ರಸ್ತೆಯಲ್ಲಿರುವ ತೋಡಿಗೆ ಸೇತುವೆಗೆ ಅನುದಾನ ಬಿಡುಗಡೆಯಾದರೂ ಇದುವರೆಗೂ ಕಾಮಗಾರಿ ನಡೆಸಿಲ್ಲ ಎಂದು ಗ್ರಾಮಸ್ಥರು ಪಂಚಾಯತ್‍ಗೆ ಭೇಟಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು.ಇಲ್ಲಿಗೆ ಸೇತುವೆ ಮಂಜೂರಾಗಿದ್ದು, ಇದರಲ್ಲಿ ರಾಜಕೀಯ ಮಾಡಲಾಗುತ್ತಿದೆ. ಮಳೆಗಾಲದ ಮೊದಲು ಅದನ್ನು ಪೂರ್ಣ ಮಾಡಬೇಕೆಂದು ಬಂಟ್ವಾಳ ತಹಸೀಲ್ದಾರ ಡಾ. ಸ್ಮಿತಾ ರಾಮ್ ಅವರಿಗೆ ಸ್ಥಳೀಯ ಫಲಾನುಭವಿಗಳು ಮನವಿ

ವಿಟ್ಲ : ಹೊಂಡದಲ್ಲಿ ಮೃತದೇಹ ಹಾಗೂ ಮೊಬೈಲ್ ಪತ್ತೆ

ವಿಟ್ಲ: ಪುಣಚ ಗ್ರಾಮದ ನೆಲ್ಲಿಗುಡ್ಡೆ ಜರಿಮೂಲೆ ಸಮೀಪ ಹೊಂಡದಲ್ಲಿ ಮೃತದೇಹ ಹಾಗೂ ಮೊಬೈಲ್ ಪತ್ತೆಯಾದ ಘಟನೆ ನಡೆದಿದೆ. ಸೊಪ್ಪು ಸೌದೆ ತರಲು ಗುಡ್ಡಕ್ಕೆ ಹೋದ ಸ್ಥಳೀಯ ನಿವಾಸಿಗಳಿಗೆ ಮೊಬೈಲ್ ಪತ್ತೆಯಾಗಿದೆ. ಇದನ್ನು ಗಮನಿಸಿ ಅಕ್ಕಪಕ್ಕದ ನೋಡಿದಾಗ ಮೃತದೇಹ ಪತ್ತೆಯಾಗಿದ್ದು, ಭಯಗೊಂಡು ಓಡಿಹೋಗಿದ್ದಾರೆನ್ನಲಾಗಿದೆ. ಪಕ್ಕದಲ್ಲಿರುವ ಮರದಲ್ಲಿ ಬಳ್ಳಿಯೊಂದು ನೇತಾಡುತ್ತಿದ್ದು, ಮೃತದೇಹ ನೆಲದಲ್ಲಿ ಬಿದ್ದುಕೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ

ವಿದ್ಯುತ್ ಶಾಕ್ ತಗುಲಿ ಬಾಲಕ ಸಾವು

ವಿಟ್ಲ: ವಿದ್ಯುತ್ ಶಾಕ್ ತಗುಲಿ ಬಾಲಕನೋರ್ವ ಮೃತಪಟ್ಟ ಘಟನೆ ಮಂಜೇಶ್ವರ ತಾಲೂಕಿನ ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಯನಡ್ಕದ ಸಾಯ ಎಂಬಲ್ಲಿ ನಡೆದಿದೆ. ನಾರಾಯಣ ನಾಯ್ಕ ಅವರ ಪುತ್ರ ಜತೇಶ್ (7 ವ) ಮೃತ ಬಾಲಕ. ವ್ಯಕ್ತಿಯೋರ್ವರು ಹಂದಿ ಹಿಡಿಯಲು ಅಕ್ರಮವಾಗಿ ಗದ್ದೆಯಲ್ಲಿ ವಿದ್ಯುತ್ ಅಳವಡಿಸುರುವುದೇ ಘಟನೆಗೆ ಕಾರಣವೆಂದು ಆರೋಪಿಸಿರುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೆÇಲೀಸರು ಸೂಕ್ತ ಕ್ರಮಕೈಗೊಳ್ಳಬೇಕೆಂದು ನಾಗರಿಕರು

ವಿಟ್ಲ: ಪೆಟ್ರೋಲ್ ಸುರಿದು ಯುವಕನ ಹತ್ಯೆ

ವಿಟ್ಲ: ಪೆಟ್ರೋಲ್ ಸುರಿದು ಯುವಕನನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದ ವ್ಯಕ್ತಿಯೋರ್ವನನ್ನು ವಿಟ್ಲ ಪೋಲೀಸರು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೋಳಂತೂರು ನಿವಾಸಿ ಅದ್ದು ಯಾನೆ ಅದ್ರಾಮ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಬಂಟ್ವಾಳ-ವಿಟ್ಲ ಠಾಣಾ ವ್ಯಾಪ್ತಿಯ ಗಡಿ ಭಾಗದ ಸುರಿಬೈಲು ನಿವಾಸಿ ಸಪ್ಪಿ (ಸಮಾದ್) (19) ಮೃತ ಯುವಕ. ಅದ್ರಾಮ ಸಲಿಂಗಕಾಮಿಯಾಗಿದ್ದು, ಮಂಚಿ-ಇರಾ-ಮುಡಿಪು ರಸ್ತೆಯ ನಿರ್ಜನ ಪ್ರದೇಶದ ಗುಡ್ಡದಲ್ಲಿ

ಕೇರಳದಲ್ಲಿ ರೈಲಿನಿಂದ ಬಿದ್ದು ವಿಟ್ಲದ ಯುವಕ ಮೃತ್ಯು

ವಿಟ್ಲ: ಕೇರಳದಲ್ಲಿ ನಡೆದ ರೈಲು ಅಪಘಾತದಲ್ಲಿ ವಿಟ್ಲ ಸಮೀಪದ ಕಡಂಬು ಎಂಬಲ್ಲಿಯ ಯುವಕ ಮೃತಪಟ್ಟಿದ್ದಾರೆ.ವಿಟ್ಲ ಸಮೀಪದ ಕಡಂಬು ನಿವಾಸಿ ಪಿಲಿವಲಚ್ಚಿಲ್ ನಿವಾಸಿ ಅಶ್ರಫ್ ಉಸ್ಮಾನ್ ಅವರ ಪುತ್ರ ಮಹಮ್ಮದ್ ಅನಾಸ್(19) ಮೃತಪಟ್ಟ ಯುವಕ. ಈತ ಎಸಿ ಮೆಕಾನಿಕ್ ಆಗಿದ್ದು, ಎಸಿ ಟ್ರೈನಿಂಗ್ ಗಾಗಿ ಕೇರಳದ ಕೊಚ್ಚಿಗೆ ತೆರಳಿದ್ದರು. ತನ್ನ ಕೆಲಸ ಕಾರ್ಯ ಮುಗಿಸಿ, ಊರಿಗೆ ಟೈನ್ ನಲ್ಲಿ ಹಿಂತಿರುಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊರಗಡೆ ಎಸೆಯಲ್ಪಟ್ಟು, ಸ್ಥಳದಲ್ಲೇ

ವಿಟ್ಲ :ಜಲ್ಲಿ ಸಾಗಾಟದ ಲಾರಿ ಪಲ್ಟಿ,ಇರ್ವರಿಗೆ ಗಾಯ

ವಿಟ್ಲ: ಜಲ್ಲಿ ಸಾಗಾಟ ಲಾರಿಯೊಂದು ಪಲ್ಟಿಯಾಗಿ ಚಾಲಕನಿಗೆ ಗಾಯವಾದ ಘಟನೆ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ನಡೆದಿದೆ. ಘಟನೆಯಿಂದಾಗಿ ಟಿಪ್ಪರ್ ಚಾಲಕನಿಗೆ ಗಾಯವಾಗಿದ್ದು ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆಯಿಂದಾಗಿ ಅಲ್ಪ ಹೊತ್ತು ರಸ್ತೆ ಸಂಚಾರ ವ್ಯತ್ಯಯವಾಗಿದೆ. ಟಿಪ್ಪರ್ ಪಲ್ಟಿಯಾಗಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲೆಲ್ಲಾ ಜಲ್ಲಿಕಲ್ಲುಗಳು ಚೆಲ್ಲಿ ಹೋಗಿದ್ದು ಬಳಿಕ ಅದನ್ನು ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಆರಂಭಗೊಂಡಿತು. ಹೊಯ್ಸಳ