ಹಾಸನ: ಕಾಡಾನೆ ಸೆರೆಗೆ ಆಪರೇಷನ್ ಆರಂಭ
ಹಾಸನ ಜಿಲ್ಲೆಯಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳ ಸೆರೆಗೆ ಆಪರೇಷನ್ ಆರಂಭವಾಗಿದೆ. 8 ಸಾಕು ಆನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಡಿಸೆಂಬರ್ 4ರಂದು ಕಾಡಾನೆ ಕಾರ್ಯಾಚರಣೆ ವೇಳೆ ಬಲಿಯಾಗಿದ್ದ ದಸರಾ ಆನೆ ಅರ್ಜುನ ಬಲಿ ಪಡೆದ ಆನೆಯನ್ನು ಸೆರೆ ಹಿಡಿಯಲು ಜನರು ಒತ್ತಾಯಿಸಿದ್ದಾರೆ. ಇಂದಿನಿಂದ ಅಭಿಮನ್ಯ ನೇತೃತ್ವದಲ್ಲಿ ಕಾರ್ಯಾಚರಣೆಯ ನಡೆಯಲಿದೆ.
ಬೇಲೂರು ತಾಲೂಕಿನ ಬಿಕ್ಕೋಡು ಸಮೀಪದ ತಾತ್ಕಾಲಿಕ ಆನೆ ಶಿಬಿರಕ್ಕೆ ಸಾಕಾನೆಗಳನ್ನು ತರಲಾಗಿದೆ. ಅಭಿಮನ್ಯು, ಪ್ರಶಾಂತ, ಹರ್ಷ, ಅಶ್ವತ್ತಾಮ, ಸುಘ್ರೀವ ಧನಂಜಯ, ಭೀಮ, ಮಹೇಂದ್ರ ಆನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಲಿದೆ.