ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿಯಿಂದ ಸಂಸದರ ಭೇಟಿ

ಉಳ್ಳಾಲ : ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿಯ ಸದಸ್ಯರು ಸೋಮವಾರದಂದು ಸಂಸದ ನಳೀನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ತೊಕ್ಕೊಟ್ಟು – ತಲಪಾಡಿ ಹೆದ್ದಾರಿಯಲ್ಲಿ ಕಾಪಿಕಾಡ್ ಅವೈಜ್ಞಾನಿಕ ಯೂ ಟರ್ನ್ ನಿಂದಾಗಿ ಪ್ರತಿ ನಿತ್ಯ ಅಪಘಾತ ನಡೆಯುತ್ತಿದ್ದು , ಇಲ್ಲಿನ ಅಪಘಾತ ನಿಯಂತ್ರಿಸುವ ಸಲುವಾಗಿ ಅಂಬಿಕಾರೋಡ್ ನಲ್ಲಿ ಯೂ ಟರ್ನ್ ತೆರೆಯುವಂತೆ ಮನವಿ ಮಾಡಲಾಯಿತು.

ತೊಕ್ಕೊಟ್ಟುನಿಂದ ಕುಂಪಲ ಬೈಪಾಸ್ ತನಕ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸಂತೆ ಕೂಡ ಸಮಿತಿ ಆಗ್ರಹಿಸಿದೆ.ಮನವಿಗೆ ಸ್ಪಂದಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಮಂಗಳವಾರದಂದು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ಜಿಲ್ಲಾಧಿಕಾರಿ ಹಾಗೂ ತೊಕ್ಕೊಟ್ಡು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿ ಸದಸ್ಯರ ಸಮ್ಮುಖದಲ್ಲಿ ಸಭೆ ಆಯೋಜಿಸುವುದಾಗಿ ಭರವಸೆ ನೀಡಿದರು.

ಸಂಸದರನ್ನು ಭೇಟಿ ಮಾಡಿದ ನಿಯೋಗದಲ್ಲಿ ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್ , ಗೌರವ ಸಲಹೆಗಾರ ಸತೀಶ್ ಕುಂಪಲ , ಉಳ್ಳಾಲ ನಗರಸಭಾ ಸದಸ್ಯೆ ಭವಾನಿ , ಕೆ.ಡಿ.ಪಿ ಸದಸ್ಯ ಪ್ರಶಾಂತ್ ಕಾಪಿಕಾಡ್, ನಗರ ಸಭಾ ನಾಮನಿರ್ದೇಶಿತ ಸದಸ್ಯ ಗಣೇಶ್ ಕಾಪಿಕಾಡ್ , ಹೋರಾಟ ಸಮಿತಿ ಉಪಾಧ್ಯಕ್ಷರಾದ ರಘುರಾಮ ಶೆಟ್ಟಿ , ದಿನೇಶ್ ರೈ ಕಳ್ಳಿಗೆ ,ಗೋಪಿನಾಥ್ ಕಾಪಿಕಾಡ್ , ಸದಸ್ಯರಾದ ಜನಾರ್ದನ್ , ಲಾಜರ್ , ಪವಿತಾ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.