ಭಾರೀ ಮಳೆಯಿಂದ ಉಡುಪಿಯ ತಗ್ಗು ಪ್ರದೇಶಗಳು ಜಲಾವೃತ
ಉಡುಪಿ: ಎರಡು ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಉಡುಪಿಯ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಉಡುಪಿ ನಗರದ ಮೂಡನಿಡುಂಬೂರು ಬ್ರಹ್ಮ ಬೈದರ್ಕಳ ಗರಡಿ ಮತ್ತು ಬನ್ನಂಜೆ ಶಿರಿಬೀಡು ವಾರ್ಡ್‌ನಲ್ಲಿವ ಗರಡಿಗೆ ವಿಪರೀತ ಮಳೆಯಿಂದಾಗಿ ನೀರು ನುಗ್ಗಿದೆ. ಸಾಕಷ್ಟು ಮನೆಗಳ ಅಂಗಳದವರೆಗೂ ನೀರು ನುಗ್ಗಿದ್ದು, ಹರಿಯುವ ನೀರಿನಲ್ಲಿ ಕಾರ್ಮಿಕರು ನಡೆದಾಡಲು ಹರಸಾಹಸ ಪಡುವಂತಾಗಿದೆ. ಇಂದ್ರಾಣಿ ನದಿ ಇದೀಗ ನೆರೆಯಿಂದ ಕಾಲುವೆಯಂತಾಗಿದೆ. ಪರಿಸರದಲ್ಲಿ ಹೊಸ ಕಟ್ಟಡ ನಿರ್ಮಾಣದಿಂದ ಈ ಬಾರಿ ನೆರೆ ಹೆಚ್ಚಿದೆ. ಆದ್ದರಿಂದ ಉಡುಪಿ ಜಿಲ್ಲೆಯ ಕಲ್ಸಂಕ, ಮಠದಬೆಟ್ಟು, ನಿಟ್ಟೂರು, ಬೈಲಕೆರೆ, ಬನ್ನಂಜೆ, ಶಿರಿಬಿಡು, ಮೂಡ ನಿಡಂಬೂರು ಭಾಗಗಳಲ್ಲಿ ಕೃತಕ ನೆರೆಯ ಆತಂಕ ಮನೆಮಾಡಿದೆ.