ಉಡುಪಿ: ಹುಬ್ಬಳ್ಳಿಯಲ್ಲಿ ಬಂಧಿಸಿದ ಕರಸೇವಕರನ್ನು ಬಿಡುಗಡೆಗೊಳಿಸುವಂತೆ ಆಗ್ರಹ
ಉಡುಪಿ: ಹುಬ್ಬಳ್ಳಿ ಯಲ್ಲಿ ಬಂಧಿಸಿದ ಕರಸೇವಕರನ್ನು ಕೂಡಲೇ ಬಿಡುಗಡೆ ಗೊಳಿಸುವಂತೆ ಅಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಉಡುಪಿ ಪೊಲೀಸ್ ಉಪಾಧೀಕ್ಷಕರ ಕಛೇರಿ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಹುಬ್ಬಳ್ಳಿ ಯಲ್ಲಿ ಬಂಧಿಸಿದ ಶ್ರೀಕಾಂತ್ ಪೂಜಾರಿ ಅವರನ್ನು ತಕ್ಷಣ ಬಿಡುಗಡೆ ಗೊಳ್ಳಿಸಬೇಕು ಇಲ್ಲವೇ ನಮ್ಮನ್ನು ಕೂಡ ಬಂಧಿಸಿ ಎಂದು ಒತ್ತಾಯಿಸಿದರು.
ದೇಶದಲ್ಲಿ ರಾಮ ಮಂದಿರ ಉದ್ಘಾಟನೆಯ ಸಂಭ್ರಮ ಮನೆ ಮಾಡಿದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ೩೦ ವರ್ಷ ಹಳೆಯ ಕೇಸ್ ನ್ನು ಅನಗತ್ಯವಾಗಿ ಕೆದಕುತ್ತಿದೆ. ಇಂದು ಕಾರ್ಯಕರ್ತನನ್ನು ಬಂಧಿಸುವ ಮೂಲಕ ಹಿಂದೂಗಳ ಭಾವನೆ ಗಳಿಗೆ ದಕ್ಕೆ ತರುವ ಜೊತೆಗೆ ಹಿಂದೂಗಳನ್ನು ದಮನ ಮಾಡಲು ಹೊರಟಿರುವುದು ಖಂಡಿನೀಯ ಎಂದರು. ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಹಿಂದೂ ಕಾರ್ಯಕರ್ತರು ತಕ್ಷಣ ಬಂಧಿತರನ್ನು ಬಿಡುಗಡೆಗೊಳಿಸಬೇಕು ಇಲ್ಲವಾದ್ರೆ ರಾಜ್ಯವ್ಯಾಪಿ ರಸ್ತೆ ಇಳಿದು ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.