ಉಡುಪಿ ಪರ್ಯಾಯ ಮಹೋತ್ಸವ: ಹೊರೆಕಾಣಿಕೆ ಮೆರವಣಿಗೆ
ಭಾರತೀಯ ಪರಂಪರೆ, ಮಾಧ್ವ ತತ್ವವನ್ನು ಜಗತ್ತಿಗೆ ಸಾರಿದ ಹಾಗೂ ಗೀತಾಸಾರವನ್ನು ವಿಶ್ವಕ್ಕೆ ಪಸರಿಸಲು ಕಾರಣವಾಗಿರುವ ಉಡುಪಿ ಅಷ್ಠಮಠಗಳ ಪೈಕಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಯವರ ಪರ್ಯಾಯ ಪೀಠಾರೋಹಣ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಹೊರೆಕಾಣಿಕೆ ಮೆರವಣಿಗೆ ನಡೆಯಿತು. ವಿವಿಧೆಡೆಗಳಿಂದ ಆಗಮಿಸಿದ್ದ ಹೊರೆಕಾಣಿಕೆಯನ್ನು ಮೆರವಣಿಗೆಯ ಮೂಲಕ ಮಠಕ್ಕೆ ಅಗಮಿಸಿತ್ತು. ಈ ಸಂದರ್ಭ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.