ರಾಮಶಂಕರ್ ಮಗಳು ರುಚಿ ಸಿಂಗ್ ಯಶಸ್ಸು|ಐಪಿಎಸ್ ಅಧಿಕಾರಿಯಾಗಲು ಬಂದ ಮಗಳು | ಇನ್ಸ್‌ಪೆಕ್ಟರ್ ತಂದೆಯಿಂದ ಸೆಲ್ಯೂಟ್ ವಂದನೆ

ಪೋಲೀಸ್ ಇನ್ಸ್‌ಪೆಕ್ಟರ್ ಆಗಿರುವ ರಾಮಶಂಕರ್ ಸಿಂಗ್ ಅವರ ಮಗಳು ಐಪಿಎಸ್ ಪಾಸಾಗಿ ಬಂದುದನ್ನು ಕಂಡು ಮಗಳಿಗೆ ಧನ್ಯತೆಯಿಂದ ಸೆಲ್ಯೂಟ್ ಹೊಡೆದಿದ್ದಾರೆ.


ಬಿಹಾರ ರಾಜ್ಯದ ಬೇಗುಸರಾಯ್ ಜಿಲ್ಲೆಯ ಮತಿಹನಿ ಹೋಬಳಿಯ ಮಹೇಂದ್ರಪುರ ಗ್ರಾಮದವರು ರಾಮಶಂಕರ್ ಸಿಂಗ್. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅವರ ಮಗಳು ರುಚಿ ಸಿಂಗ್ 171 ನೇ ರ್‍ಯಾಂಕ್ ಪಡೆದು ಐಪಿಎಸ್- ಇಂಡಿಯನ್ ಪೋಲೀಸ್ ಸರ್ವಿಸ್ ಸೇವೆಗೆ ಬಂದಿದ್ದಾರೆ. ಆಕೆಯ ಯಶಸ್ಸನ್ನು ಕಂಡು ಇಡೀ ಗ್ರಾಮವು ತುದಿ ಕಾಲಿನಲ್ಲಿ ನಿಂತಿತ್ತು; ಆಕೆಯ ಬರುವಿಕೆಗಾಗಿ ಕಾಯುತ್ತಿತ್ತು. ಊರಿಗೆಲ್ಲ ಸಿಹಿ ಹಂಚಿ, ಅಂತಿಮವಾಗಿ ಊರ ಮಗಳಿಗೂ ವಿಶೇಷವಾಗಿ ಸಿಹಿ ಇಡಲಾಗಿತ್ತು.


ಊರಿಗೆ ಬಂದ ಐಪಿಎಸ್ ಮಗಳಿಗೆ ಮೊದಲು ಸಲ್ಲಿಕೆಯಾದುದು ಇನ್ಸ್‌ಪೆಕ್ಟರ್ ತಂದೆಯ ಸೆಲ್ಯೂಟ್. ಆಮೇಲೆ ಊರವರ ಸಿಹಿ ತಿನಿಸು ಮತ್ತು ಸಿಹಿ ಮಾತಿನ ಉಘೇ. ಬೇಗುಸರಾಯ್‌ನಲ್ಲಿ 10 ಪಾಸಾದ ರುಚಿ, ದಿಲ್ಲಿಯಲ್ಲಿ 2017ರಲ್ಲಿ 12ನೇ ತರಗತಿ ಪಾಸಾದರು. ದಿಲ್ಲಿಯ ಸಂತ ಸ್ಟೀಪನ್ಸ್ ಕಾಲೇಜಿನಲ್ಲಿ ಪದವಿ ಪಡೆದು, ಬಿಹಾರದ ಲಕಿಸರಾಯ್ ಡಿಪಿಆರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಐಪಿಎಸ್ ಪಾಸಾಗಿದ್ದಾರೆ. 2025ರ ಯುಪಿಎಸ್‌ಸಿ ಫಲಿತಾಂಶ ಈಗ ಪ್ರಕಟವಾಗಿದೆ. 9658 ಮಂದಿ ಐಎಎಸ್, ಐಪಿಎಸ್, ಐಎಫ್‌ಎಸ್ ಇತರ ಕೇಂದ್ರೀಯ ಸೇವೆಗಳಿಗೆ ಆಯ್ಕೆಯಾಗಿದ್ದಾರೆ.

Related Posts

Leave a Reply

Your email address will not be published.