ಕಡಬ: ಡಿ.23ರಂದು ಕುಟ್ರುಪ್ಪಾಡಿ ಮುಳಿಮಜಲಿನಲ್ಲಿ ಕಬಡ್ಡಿ ಪಂದ್ಯಾಟ

ದ.ಕ, ಜಿಲ್ಲಾ ಹಾಗೂ ಕಡಬ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಹಾಗೂ ಕೇಪು ಕುಟ್ರುಪ್ಪಾಡಿ ಐಡಿಯಲ್ ಪ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ, ಟೀಮ್ ಸಾರಂಗ್ ಸಾರಥ್ಯದಲ್ಲಿ ಮ್ಯಾಟ್ ಅಂಕಣದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ಡಿ.23ನೇ ಕಡಬ ಗ್ರಾಮದ ಮುಳಿಮಜಲು ಎಂಬಲ್ಲಿ ಸಂಜೆ ನಡೆಯಲಿದೆ ಎಂದು  ಟೀಮ್‌ಸಾರಂಗ್ ಮುಖಂಡ ಹರೀಶ್ ರೈ ಮೈಲೇರಿ ತಿಳಿಸಿದರು. ಅವರು ಕಡಬ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಕಳೆದ ಹದಿನೈದು ವರ್ಷಗಳಿಂದ ಸಮಾಜ ಸೇವಾ ಚಟವಟಿಕೆಯ ಉದೇಶವನ್ನಿಟ್ಟುಕೊಂಡು ಕಾರ್ಯಾಚರಿಸುತ್ತಿರುವ ಐಡಿಯಲ್ ಫ್ರೆಂಡ್ಸ್ ಕ್ಲಬ್ ಈ ಬಾರಿ ರಾಜ್ಯ ಅಂತ್‌ರಾಜ್ಯಗಳಿಂದ ಕಬಡ್ಡಿ ತಂಡಗಳನ್ನು ಆಹ್ವಾನಿಸಿ ಪಂದ್ಯಾಟವನ್ನು ನಡೆಸಲಿದೆ. ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

Related Posts

Leave a Reply

Your email address will not be published.