ಪಿಯು ಕಾಲೇಜು ಬೇಕೆಂದು ಪ್ರಧಾನಿ ಗೆ ರಕ್ತದಲ್ಲಿ ಪತ್ರ

ವಿಜಯಪುರ;ತನ್ನೂರಿಗೆ ಪಿಯು ಕಾಲೇಜು ಬೇಕೆಂದು 5 ವರ್ಷಗಳಿಂದ ಹೋರಾಡಿದ್ದ ಯುವಕ ಕೊನೆಗೆ ರಕ್ತದಲ್ಲಿ ಸರಕಾರಕ್ಕೆ ಪತ್ರ ಬರೆದಿದ್ದಾನೆ.ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ನಿವಾಸಿ ವಿಜಯರಂಜನ ಜೋಶಿ ಸ್ವಂತ ಊರಿನಲ್ಲಿ ಸರಕಾರಿ ಪಿಯು ಕಾಲೇಜು ಆರಂಭಿಸುವಂತೆ ಆಗ್ರಹಿಸಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿದ್ದರು. ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದರು ಆದರೆ ಯಾವುದೇ ಪ್ರಯೋಜನ ವಾಗಿರಲಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಅವ್ರು ಸಿಎಂ ಆಗಿದ್ದಾಗಲೂ ಮನವಿ ಮಾಡಿದ್ರು.ಪ್ರಧಾನಿ ನರೇಂದ್ರ ಮೋದಿ ಅವರಿಗೂ 2019ರಲ್ಲಿ ರಕ್ತದಲ್ಲಿ ಪತ್ರ ಬರೆದು ಆಗ್ರಹಿಸಿದ್ದರು.ಇದರ ಬೆನ್ನಲ್ಲೆ ಮೋದಿ ಕಚೇರಿಯಿಂದ ಪ್ರತಿಕ್ರಿಯೆ ಬಂದಿತ್ತು. ಇದಾದ ಬಳಿಕ ಈಗ ನಾಲತವಾಡ ಪಟ್ಟಣಕ್ಕೆ ಸರ್ಕಾರಿ ಕಾಲೇಜು ಮಂಜೂರಾಗಿದೆ.ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಸರಕಾರಿ ಪಿಯು ಕಾಲೇಜು ಆರಂಭಕ್ಕೆ ಕರ್ನಾಟಕ ಸರಕಾರ ಹಸಿರು ನಿಶಾನೆ ತೋರಿಸಿದೆ.ಇದರಿಂದ ಯುವಕನನ್ನು ಉತ್ಸಾಹ ಮತ್ತು ಸಂತೋಷ ಮೂಡಿದೆ.

Related Posts

Leave a Reply

Your email address will not be published.