ರಾಜಧಾನಿ ಇಲ್ಲದ ದೇಶ ಯಾವುದು?

ಶಾಂತ ಮಹಾಸಾಗರದ ನವುರು ದೇಶವು ಅಧಿಕೃತ ರಾಜಧಾನಿ ನಗರ ಹೊಂದಿಲ್ಲ; ಯೇರೆನ್ ಜಿಲ್ಲೆಯಿಂದ ಆಡಳಿತ ನಡೆಸಲಾಗುತ್ತದೆ. 21 ಚದರ ಕಿಲೋಮೀಟರ್ ವಿಸ್ತೀರ್ಣದ ನವುರು ದೇಶವು ಜಗತ್ತಿನ ಮೂರನೆಯ ಅತಿ ಪುಟ್ಟ ದೇಶವಾಗಿದೆ. ಜನಸಂಖ್ಯೆ ರೀತಿಯಲ್ಲಿ ಎರಡನೆಯ ಸ್ಥಾನದಲ್ಲಿರುವ ಈ ದೇಶದಲ್ಲಿ 12,000 ಜನರು ಇದ್ದಾರೆ.

ಸರಕಾರಿ ಕಚೇರಿಗಳು, ಅಧ್ಯಕ್ಷರ ನಿವಾಸ, ಸಂಸತ್ತು ಎಲ್ಲವೂ ಯೇರೆನ್ ಜಿಲ್ಲೆಯಲ್ಲಿ ಇದ್ದು, ಅದು ಆಡಳಿತ ಕೇಂದ್ರ ಎನಿಸಿದೆ. ಈ ಪುಟ್ಟ ದ್ವೀಪ ದೇಶವನ್ನು ಹಿಂದೆ ಪ್ಲೆಸೆಂಟ್ ಐಲ್ಯಾಂಡ್ ಎಂದು ಕರೆಯುತ್ತಿದ್ದರು. ಕೆಲವು ಜಿಲ್ಲೆಗಳು ಈ ದೇಶದ ಆಡಳಿತ ವಲಯಗಳಾಗಿವೆ. ಒಬ್ಬ ಪ್ರಜೆಯು ಮನಸ್ಸು ಮಾಡಿದರೆ ಇಡೀ ದೇಶವನ್ನು ಒಂದೇ ದಿನದಲ್ಲಿ ಸುತ್ತಿ ನೋಡಬಲ್ಲ.

Related Posts

Leave a Reply

Your email address will not be published.