ಕೊಣಾಜೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ
ಕೊಣಾಜೆ: ಕೊಣಾಜೆ ಅಡ್ಕರೆ ಪಡ್ಪು ವಿನ ಜಮಿಯ್ಯುತುಲ್ ಫಲಾಹ್ ಸಂಸ್ಥೆಯಗ್ರೀನ್ ವೀವ್ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಕೇಂದ್ರ ಸರ್ಕಾರದ ಯೋಜನೆಯಾದ ‘ಅಟಲ್ ಟಿಂಕೆರಿಂಗ್ ಲ್ಯಾಬ್’ ನ್ನು ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ‘ಅಟಲ್ ಟಿಂಕೆರಿಂಗ್ ಲ್ಯಾಬ್ ನ್ನು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಶೈಕ್ಷಣಿಕವಾದ ಓದಿನೊಂದಿಗೆ ನಮ್ಮ ಸಾಮಾನ್ಯ ಜ್ಞಾನವನ್ನು ವಿಸ್ತರಿಸುವ ಹಾಗೂ ಪ್ರಾಯೋಗಿಕ ಅಧ್ಯಯನಕ್ಕೆ ಒತ್ತುಕೊಟ್ಟು ಮುನ್ನಡೆದರೆ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ. ಜೊತೆಗೆ ಶಿಕ್ಷಣದೊಂದಿಗೆ ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೊಣಾಜೆ ಪಂಚಾಯಿತಿ ಅಧ್ಯಕ್ಷೆ ಚಂಚಲಾಕ್ಷಿ ಅವರು ಮಾತನಾಡಿ, ಕೊಣಾಜೆ ವ್ಯಾಪ್ತಿಯಲ್ಲಿರುವ ಈ ಶಿಕ್ಷಣ ಸಂಸ್ಥೆಯು ಉತ್ತಮ ಶಿಕ್ಷಣದ ಕೊಡುಗೆಯ ಮೂಲಕ ಮಾದರಿ ಸೇವೆಯನ್ನು ಮಾಡುತ್ತಿದೆ ಎಂದರು.
ಜಮಿಯ್ಯುತಲ್ ಫಲಾಹ್ ಸಂಸ್ಥೆಯ ಪರ್ವೇಝ್ ಅಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಜಿಲ್ಲೆಯ ಕೆಲವೇ ಕೆಲವು ಶಾಲೆಗಳಿಗೆ ಸರ್ಕಾರದ ಈ ಯೋಜನೆಯು ದೊರಕಿದೆ. ಇದರಿಂದ ಈ ಸಂಸ್ಥೆಗೆ ನಮಗೆ ಪ್ರಶಸ್ತಿ ಗರಿ ಸಿಕ್ಕಿದಂತಾಗಿದೆ. ಶಾಲೆಯು ಆರಂಭವಾಗಿ 30 ವರ್ಷ ಆಗಿದ್ದು ಉಚಿತವಾಗಿ ಶಿಕ್ಷಣವನ್ನು ನೀಡುತ್ತಿದೆ.ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ನಮ್ಮ ಸಂಸ್ಥೆಯು ಮುನ್ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ದ.ಕ.ಉಡುಪಿ ಜಿಲ್ಲೆಯ ಜಮೀಯ್ಯತ್ತುಲ್ ಫಲಾಹ್ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಶಬೀಹ್ ಅಹ್ಮದ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಫಝ್ಲುಲ್ ರಹೀಮ್, ಕೋಶಾಧಿಕಾರಿ ಎಫ್ . ಎಂ. ಬಶೀರ್ , ಮುಖ್ಯೋಪಾಧ್ಯಾಯಿನಿ ಎಲ್ವಿನ್ ಪಿ.ಐಮನ್, ಅಡ್ಕರೆ ಪಡ್ಪು ಮಸೀದಿಯ ಧರ್ಮಗುರು ಜನಾಬ್ ಹಮೀದ್ , ಟೆಸ್ಕಾಂ ಟೆಕ್ನಾಲಜಿಯ ಸದಾಖತ್ ಷಾ, ಮಹಮ್ಮದ್ ರಿಯಾಝ್, ಪಂಚಾಯತಿ ಸದಸ್ಯರಾದ ಹೈದರ್, ಮೊದಲಾದವರು ಉಪಸ್ಥಿತರಿದ್ದರು.
ವರದಿ: ಆರೀಪ್ ಕಲ್ಕಟ್ಟ ಉಳ್ಳಾಲ