ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ : ಮಕ್ಕಳ ದಿನಾಚರಣೆಯ ಅಂಗವಾಗಿ ತಪಾಸಣಾ ಶಿಬಿರ
ಕಟೀಲಿನಲ್ಲಿರುವ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಲ್ಲಿ ಕೈ ಮತ್ತು ಎಲುಬಿನ ನ್ಯೂನತೆಯ ತಪಾಸಣಾ ಶಿಬಿರವು ನವೆಂಬರ್ 13ರ ಶನಿವಾರದಂದು ಬೆಳಗ್ಗೆ 11ರಿಂದ ಮಧ್ಯಾಹ್ನ 3ಗಂಟೆಯವರೆಗೆ ನಡೆಯಲಿದೆ.ಎಳೆಯ ಮಕ್ಕಳಲ್ಲಿ ಕಾಣುವ ಜನ್ಮಜಾತ ಕಾಯಿಲೆಗಳು, ವೈಪರೀತ್ಯಗಳು, ಕೈ ಮತ್ತು ಮೊಣಗಂಡಿನ ಸಮಸ್ಯೆಗಳು, ಗಾಯಗೊಂಡ ಕೈಗಳು, ಪಾಶ್ರ್ವವಾಯುವಿನಗೊಳಪಟ್ಟ ಕೈ, ಬಲಹೀನತೆ, ಬೆರಳಿನ ಸಮಸ್ಯೆಗಳಿರುವವರು ಈ ಶಿಬಿರದ ಪ್ರಯೋಜನವನ್ನು ಪಡೆಉಬಹುದು. ಹಿರಿಯ ಮೂಳೆ, ಕೈ ಮತ್ತು ಮೈಕ್ರೋವ್ಯಾಸ್ಕುಲರ್ ತಜ್ಞರಾದ ಡಾ. ಭಾಸ್ಕರಾನಂದ್ ಕುಮಾರ್ ಹಾಗೂ ಎಲುಬು ಮತ್ತು ಕೀಲು ರೋಗ ತಜ್ಞರಾದ ಡಾ. ಸುಧೀಂದ್ರ ಕಾರ್ನಾಡ್ ಅವರು ಲಭ್ಯರಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಾಣಿಗಾಗಿ 6364872121, 0824 2200022 ಸಂಪರ್ಕಿಸಬಹುದು