ಮುಂಬಯಿ ಪತ್ರಕರ್ತ ಪಾಲೆತ್ತಾಡಿ ಅವರಿಗೆ V4 ಸುದ್ದಿವಾಹಿನಿಯ ವತಿಯಿಂದ ಅಭಿನಂದನೆ

ಮಂಗಳೂರು: ನವಂಬರ್ 1ರಂದು ಬೆಂಗಳೂರಿನಲ್ಲಿ ಜರಗಿದ ರಾಜ್ಯೋತ್ಸವ ಸಮಾರಂಭದಲ್ಲಿ 2021 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಹೊರನಾಡ ಕನ್ನಡಿಗ, ಮುಂಬಯಿ ‘ಕರ್ನಾಟಕ ಮಲ್ಲ’ ಕನ್ನಡ ದೈನಿಕದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರನ್ನು ಮಂಗಳೂರಿನಲ್ಲಿV4 ನ್ಯೂಸ್ ಕರ್ನಾಟಕ ಸುದ್ದಿವಾಹಿನಿಯ ಕಾರ್ಯಾಲಯದಲ್ಲಿಅಭಿನಂದಿಸಲಾಯಿತು. ಮಂಗಳೂರಿನ V4 ನ್ಯೂಸ್ ಕರ್ನಾಟಕ ಸುದ್ದಿವಾಹಿನಿಯ ಕಚೇರಿ ಆವರಣದಲ್ಲಿ ವಾಹಿನಿಯ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್ ಅವರು ಪಾಲೆತ್ತಾಡಿಯವರಿಗೆ , ಸ್ಮರಣಿಕೆಯಿತ್ತು ಗೌರವಿಸಿದರು.V4 ಸುದ್ದಿವಾಹಿನಿಯ ಪ್ರಧಾನ ಸಂಪಾದಕ ತಾರನಾಥ್ ಗಟ್ಟಿ ಕಾಪಿಕಾಡ್ ಅಭಿನಂದನಾ ನುಡಿಗಳನ್ನಾಡಿದರು.
ಕರ್ನಾಟಕ ಮಲ್ಲ ಪತ್ರಿಕಾ ಬಳಗದ ದಿನೇಶ್ ಕುಲಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಳಿಕ ಪಾಲೆತ್ತಾಡಿಯವರ ಜೀವನ ಯಾನದ ಬಗ್ಗೆ V4 ಸುದ್ದಿವಾಹಿನಿಯಲ್ಲಿ ಮಾತು – ಕಥೆ ಜರಗಿತು.

Related Posts

Leave a Reply

Your email address will not be published.