ನರಗುಂದ ನವಲಗುಂದ ರೈತ ಬಂಡಾಯದ ಸ್ಮರಣೆ : ರೈತ ಸಮಾವೇಶ
ನರಗುಂದ ನವಲಗುಂದ ರೈತ ಬಂಡಾಯದ 41 ನೇ ವರ್ಷಾಚರಣೆ ಹಾಗೂ ರೈತ ಹುತಾತ್ಮರ ದಿನಾಚಣೆ ಹಾಗೂ ರೈತ ಸಮಾವೇಶ ಗದಗ ಜಿಲ್ಲೆಯ ನರಗುಂದದಲ್ಲಿ ನಡೆಯಿತು. ಇಲ್ಲಿನ ರೈತ ಸಂಪರ್ಕ ಕೇಂದ್ರದ ಸಮೀಪ , ರೈತ ನಾಯಕ ದಿವಂಗತ ಬಾಬಾ ಗೌಡ ಪಾಟೀಲ್ ವೇದಿಕೆಯಲ್ಲಿ ಸಮಾವೇಶ ನಡೆಯಿತು.



ಸಮಾವೇಶಕ್ಕಿಂತ ಮೊದಲು ಹುತಾತ್ಮ ರೈತ ಹೋರಾಟಗಾರರ ಪ್ರತಿಮೆಗೆ ರೈತ ಮುಖಂಡರು ಗೌರವ ಸಲ್ಲಿಸಿದರು. ಬಳಿಕ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ರೈತ ಸಮಾವೇಶ ನಡೆಯಿತು.
ಸಮಾವೇಶದಲ್ಲಿ ದಿಲ್ಲಿ ರೈತ ಹೋರಾಟದ ಮುಖಂಡರಾದ ಹರ್ನೇಕ್ ಸಿಂಗ್ ಹಾಗೂ ದೀಪಕ್ ಲಾಂಬ ಅವರು ಸಮಾವೇಶವನ್ನು ಕೇಂದ್ರದ ಕೃಷಿ ಕಾಯ್ದೆಯ ಪ್ರತಿಗಳನ್ನು ಸುಡುವ ಮೂಲಕ ಉದ್ಘಾಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.



ಈ ರೈತ ಸಮಾವೇಶವನ್ನು ಭಾರತೀಯ ಕೃಷಿಕ್ ಸಮಾಜ , ಮಹದಾಯಿ ನೀರಿಗಾಗಿ ಮಹಾವೇದಿಕೆ , ಕರ್ನಾಟಕ ರೈತ ಸೇನೆ , ಕರ್ನಾಟಕ ಜನಶಕ್ತಿ , ಕರ್ನಾಟಕ ಪ್ರಾಂತ ರೈತ ಸಂಘ , ಜನಾಂದಲೋನ ಮಹಾಮೈತ್ರಿ , ಉತ್ತರ ಕರ್ನಾಟಕ ರೈತ ಸಂಘ , ಕನ್ನಡಪರ , ಕಾರ್ಮಿಕ , ದಲಿತರ ಸಮಘಟನೆಗಳ ಒಕ್ಕೂಟ ಮೊದಲಾದ ಸಂಘಟನೆಗಳು ಸಂಯುಕ್ತವಾಗಿ ಈ ರೈತ ಸಮಾವೇಶವನ್ನು ಆಯೋಜಿಸಿದ್ದವು.
ಜೋಗಣ್ಣನವರ್ , ಮುತ್ತನಗೌಡ ಚೌಡ ರೆಡ್ಡಿ , ಚಾಮರಸ ಮಾಲೀ ಪಾಟೀಲ್ , ಎಸ್.ಆರ್. ಹೀರೆಮಠ್ , ಬಿ.ಆರ್. ಪಾಟೀಲ್ , ನಿತ್ಯಾನಂದ ಸ್ವಾಮಿ , ವೆಂಕನ ಗೌಡ ಪಾಟೀಲ್ , ಪ್ರಧಾನ ಕಾರ್ಯದರ್ಶಿ ರವಿ ಕಿರಣ್ ಪುಣಚ, ವಿರೇಶ್ ಸೊಬರದ ಮಠ , ನೂರ್ ಶ್ರೀಧರ್ , ಸೇರಿದಂತೆ ವಿವಿಧ ರೈತ ಸಂಘಟನೆಗಳ ಮುಖಂಡರು ವೇದಿಕೆಯಲ್ಲಿದ್ದರು.


ದಕ್ಷಿಣ ಕನ್ನಡ ಜಿಲ್ಲೆಯಿಂದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್, ಪ್ರಧಾನ ಕಾರ್ಯದರ್ಶಿ ಪ್ರೇಮನಾಥ್ ಶೆಟ್ಟಿ ಬಾಳ್ತಿಲ, ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ಸುಧಾಕರ ಜೈನ್ ಸಹಿತಿ ಹಲವು ಮುಖಂಡರು ಭಾಗವಹಿಸಿದ್ದರು.

















