ಬೇಲೂರಿನಲ್ಲಿ ಹೆಚ್ಚುತ್ತಿರುವ ಮತಾಂತರ ಚಟುವಟಿಕೆ
                                                ಬೇಲೂರಿನಲ್ಲಿ ಪಟ್ಟಣದ ಪುರಸಭೆ ವ್ಯಾಪ್ತೀಯ 8ನೇ ವಾರ್ಡ್ ಬಿಕ್ಕೋಡು ರಸ್ತೆಯ ಮಹಿಳಾ ಕಾಲೇಜ್ ಪಕ್ಕದಲ್ಲಿ ಅನಧಿಕೃತವಾಗಿ ಒಂದು ಕಟ್ಟಡ ನಿರ್ಮಾಣ ಮಾಡಿಕೊಂಡು ಕ್ರಿಶ್ಚಿಯನ್ ಧರ್ಮಕ್ಕೆ ಮತಾತಂತರ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬಜರಂಗದಳ ಹಾಗೂ 
ವಿಶ್ವ ಹಿಂದೂ ಪರಿಷತ್ ಸಂಘಟನೆ ಕಾರ್ಯಕರ್ತರು ಬಂದ ಸಂದರ್ಭದಲ್ಲಿ ಪ್ರಾರ್ಥನೆ ನಡೆಯುತ್ತಿದ್ದರಿಂದ ಪ್ರಾರ್ಥನ ಮುಂಭಾಗದ ಗೇಟ್ ಗೆ ಬೀಗ ಹಾಕಿದ ಕಾರಣ ಹೊರಭಾಗದಲ್ಲಿ ನಿಂತು ಮತಾಂತರ ಗೊಳ್ಳಲು ಪ್ರೇರಣೆಯಾಗಿದ್ದ ಯುವಕರನ್ನು ಮನವೊಲಿಸಿ ಅವರನ್ನು ಹೊರಗೆ ಕಳುಹಿಸಲಾಯಿತು. 
ಇದೇ ವೇಳೆ ಮತಾತಂತರ ಗೊಳಿಸುತ್ತಿದ್ದ ಫಾದರ್ ಗಳು ಹಾಗೂ ಪ್ರಾರ್ಥನೆ ಸಲ್ಲಿಸುತ್ತಿದ್ದವರ ನಡುವೆ ಹಿಂದೂ ಪರ ಸಂಘಟನೆಯ ನಡುವೆ ತೀವ್ರ ವಾಗ್ದಾಳಿ ನಡೆಯಿತು.


							
							














