Home 2022 August (Page 16)

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ : ಮಕ್ಕಳಿಂದ ಅಮೃತ ಶೋಭಾಯಾತ್ರೆ

ಬಂಟ್ವಾಳ: ಸ್ವಾತಂತ್ರ್ಯ ಅಮೃತಮಹೋತ್ಸವದ ಪ್ರಯುಕ್ತ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಮೃತ ಶೋಭಾಯಾತ್ರೆ ನಡೆಸಿ ಗಮನ ಸೆಳೆದರು. ಶ್ರೀರಾಮ ವಿದ್ಯಾಕೇಂದ್ರದ ಮೈದಾನದಲ್ಲಿ ಶಾಸಕ ರಾಜೇಶ್ ನಾೈಕ್ ಅವರು ಧ್ವಜಾರೋಹಣ ನೆರವೇರಿಸಿದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್

ಆಜಾದಿ ಕಾ ಅಮೃತ ಮಹೋತ್ಸವ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ತುಂಬೆ ಅಣೆಕಟ್ಟು

ದೇಶದ 75 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ” ಆಜಾದಿ ಕಾ ಅಮೃತ ಮಹೋತ್ಸವ” ವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸುವ ಸಲುವಾಗಿ ಮಂಗಳೂರು ಮಹಾ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಮಂಗಳೂರು ಮಹಾನಗರ ಪಾಲಿಕಾ ಅಧೀನದ ತುಂಬೆ ಅಣೆಕಟ್ಟನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಸಾರ್ವಜನಿಕರು ಅಗಸ್ಟ್ 13 ರಿಂದ ಅಗಸ್ಟ್ 15 ರವರೆಗೆ ಬಂಟವಾಳ

ಅಕ್ರಮ ಮರ ಸಾಗಾಟ ಪ್ರಕರಣ ಆರೋಪಿ ಬಂಧನ

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ವಿಶಾಲನಗರ ಬಳಿ ಅಕ್ರಮವಾಗಿ ಅಕೇಶಿಯಾ ಮರ ಸಾಗಟ ಮಾಡುತ್ತಿದ್ದ ವಾಹನ ಹಾಗೂ ಆರೋಪಿಯನ್ನು ಮಂಗಳೂರು ಅರಣ್ಯ ಸಂಚಾರಿದಳದ ಸಿಬ್ಬಂದಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ವಶ ಪಡಿಸಿಕೊಂಡಿರುವ ವಾಹನ ಹಾಗೂ ಸ್ವತ್ತುಗಳ ಮೌಲ್ಯ ಸುಮಾರು 19 ಲಕ್ಷ ರೂಪಾಯಿಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒರ್ವನನ್ನು

ಮದರ್‌ ತೆರೇಸಾರವರ 25ನೇ ಸಂಸ್ಮರಣಾ ದಿನಾಚರಣೆ : ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ

ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 25ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ತಾ.20-08-2022ರಂದು ಶನಿವಾರ ಬೆಳಿಗ್ಗೆ 9.30ಕ್ಕೆ ನಗರದ ಮಿಲಾಗ್ರಿಸ್ ಕಾಲೇಜ್ ನಲ್ಲಿ ದ.ಕ.ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಪತ್ರಿಕಾಹೇಳಿಕೆಯೊಂದರಲ್ಲಿ ತಿಳಿಸಿದೆ. ಸಹಾನುಭೂತಿ

ಹೊಂಡ-ಗುಂಡಿಗಳ, ಅನಧಿಕೃತ ಅಗೆತಗಳ ಫೋಟೊ ತೆಗೆದು ಕಳುಹಿಸಿ: ಮಂಗಳೂರು ಮಹಾನಗರ ಪಾಲಿಕೆ

ಮಂಗಳೂರು : ಹೊಂಡ-ಗುಂಡಿಗಳ ಹಾಗೂ ಅನಧಿಕೃತ ಅಗೆತಗಳ ಬಗ್ಗೆ ದೂರುಗಳಿದ್ದಲ್ಲಿ  WhatsApp ಸಂಖ್ಯೆ 9449007722 ಹಾಗೂ ಮಹಾನಗರಪಾಲಿಕೆಯ ಸಹಾಯವಾಣಿ ಸಂಖ್ಯೆ 0824-2220306ಗೆ ತಿಳಿಸಬಹುದಾಗಿದೆ ಎಂದು ಮನಪಾ ಪ್ರಕಟನೆ ತಿಳಿಸಿದೆ. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 2022ರ ಮಳೆಗಾಲದಲ್ಲಿ ಜೂನ್ ಹಾಗೂ ಜುಲೈ ಮಾಹೆಯಲ್ಲಿ ಸಾಮಾನ್ಯ ಮಳೆಗಿಂತ ಅತೀ ಹೆಚ್ಚಿನ

ಉಳ್ಳಾಲ : ಲಿಟಲ್ ಹಾರ್ಟ್ ಕಿಂಡರ್ ಗಾರ್ಟನ್ ಸಂಸ್ಥೆಯ ಮಾಲಕಿ ಹರಿಣಾಕ್ಷಿ ಮೃತದೇಹ ಪತ್ತೆ

ಉಳ್ಳಾಲದ ಅಬ್ಬಕ್ಕ ಸರ್ಕಲ್ ನಲ್ಲಿ ಲಿಟಲ್ ಹಾರ್ಟ್ ಕಿಂಡರ್ ಗಾರ್ಟನ್ ಸಂಸ್ಥೆಯ ಮಾಲಕಿ ಹಾಗೂ ಶಿಕ್ಷಕಿ ಹರಿಣಾಕ್ಷಿ ಎಂಬವರ ( 50)ಮೃತದೇಹ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಬಾವಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಬೆಳಿಗ್ಗೆ ನಾಪತ್ತೆಯಾಗಿದ್ದ ಹರಿಣಾಕ್ಷಿ ಅವರನ್ನು ಇಬ್ಬರು ಪುತ್ರರು ಮನೆ ಸಮೀಪವಿಡೀ ಹುಡುಕಾಡಿ, ಉಳ್ಳಾಲ ಪೊಲೀಸ್

ರಾಷ್ಟ್ರಧ್ವಜದ ಬ್ಯಾಡ್ಜ್ ಉಲ್ಟಾ ಧರಿಸಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್

ರಾಷ್ಟ್ರಧ್ವಜದ ಬ್ಯಾಡ್ಜ್ ನ್ನು ಉಲ್ಟಾ ಧರಿಸಿ ರಸ್ತೆಯಲ್ಲಿ ಪಥಸಂಚಲನ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬೆಂಗಳೂರು :ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ರಾಷ್ಟ್ರದ ಧ್ವಜಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸಚಿವ ಭೈರತಿ ಬಸವರಾಜ್ ಅಪಮಾನ ಮಾಡಿದ್ದಾರೆ.ಇನ್ನೊಂದು‌ ಕಡೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ತಿರಂಗಾ ಯಾತ್ರೆ

ಧಕ್ಕೆಯಲ್ಲಿ ಬೋಟ್ ರ‍್ಯಾಲಿಗೆ ಚಾಲನೆ

ಮಂಗಳೂರು : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಮೀನುಗಾರಿಕೆ ಇಲಾಖೆ ಹಾಗೂ ಮೀನುಗಾರಿಕಾ ಸಂಘಗಳ ಸಹಯೋಗದಲ್ಲಿ ನಗರದ ದಕ್ಕೆಯಲ್ಲಿ ಆ.12ರ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ 75 ಬೋಟ್ ರ್ಯಾಲಿಗೆ ಜಿಲ್ಲಾಧಿಕಾರಿ ಡಾ‌. ರಾಜೇಂದ್ರ ಕೆ.ವಿ. ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸಿಇಒ ಡಾ. ಕುಮಾರ್, ಮೀನುಗಾರಿಕಾ ಇಲಾಖೆಯ ಜಂಟಿ

ಕಡಲ ತಡಿಯಲ್ಲಿ ಆಟಿ ಸಂಭ್ರಮ

ಕಡಲ ತಡಿಯ ಕರಾವಳಿಯಲ್ಲೀಗ ಆಟಿ ತಿಂಗಳಿನ ಸಂಭ್ರಮ, ಸಡಗರ ಮನೆ ಮಾಡಿದೆ. ವಿವಿಧ ಬಗೆಯ ತಿನಿಸು ತಯಾರು ಮಾಡಿ ತಿನ್ನುವುದೇ ಒಂದು ಖುಷಿ. ಕೇವಲ ಆಹಾರಗಳು ಮಾತ್ರವಲ್ಲ ಆಟೋಟ ಸ್ಪರ್ಧೆಗಳು ಕೂಡ ಕೆಸರಿನ ಗದ್ದೆಯಲ್ಲಿ ವಿಶೇಷ ಮೆರುಗು ನೀಡುತ್ತದೆ. ಇದಕ್ಕಾಗಿಯೇ ಆಟಿ ತಿಂಗಳಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾದ ವೇದಿಕೆ ಸಿದ್ದಗೊಳ್ಳಿವುದು ಸರ್ವ ಸಾಮಾನ್ಯ.

ಉತ್ತರ ಕನ್ನಡ ಸಮುದ್ರದಲ್ಲಿ ತೇಲಿ ಬಂತು ರಾಶಿ ರಾಶಿ ಮೀನು

ಉತ್ತರ ಕನ್ನಡದ ಮಂಕಿಯ ಸಮುದ್ರ ತೀರದಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ತೀರ ಪ್ರದೇಶದಲ್ಲಿ ಮೀನುಗಳ ರಾಶಿ ಕಂಡು ಬಂದಿದೆ. ಜಾಸ್ತಿ ತೂಪಾನ್ ಆದಾಗ ನೀರು ಅತೀ ಹೆಚ್ಚಾದ ಮೀನು ಗಳುಪ್ರಜ್ನಾವಸ್ಥೆಗೆ ಬರುತ್ತದೆ. ಹೀಗಾಗಿ ಮೀನುಗಳು ದಡಕ್ಕೆ ಬಂದು ಬೀಳುತ್ತದೆ. ಮೀನುಗಳನ್ನು ಹಿಡಿಯಲು ಮೀನುಗಾರರು ತಂಡ ತಂಡವಾಗಿ ಸಮುದ್ರಕ್ಕೆ ಇಳಿದ ದೃಶ್ಯ ಮಂಕಿಯ ತೀರ ಪ್ರದೇಶದಲ್ಲಿ ಕಂಡು ಬಂತು.