Home 2023 September (Page 20)

ಮಣಿಪಾಲದಲ್ಲಿ ವಿಸ್ಡಮ್ ಎಡ್ ನೂತನ ಶಾಖೆ ಕಾರ್ಯಾರಂಭ

ಉಡುಪಿಯ ಮಣಿಪಾಲದಲ್ಲಿ ವಿಸ್ಡಮ್ ಎಡ್ ಇದರ ನೂತನ ಶಾಖೆಯು ಕಾರ್ಯಾರಂಭಗೊಂಡಿತು. ಉಡುಪಿ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ಅವರು ನೂತನ ಶಾಖೆ ಉದ್ಘಾಟಿಸಿದರು. ಈ ಸಂದರ್ಭ ಉಜ್ವಲ್ ಕನ್ಸ್ಟ್ರಕ್ಷನ್ಸ್ ಇದರ ಮಾಲಿಕರಾದ ಪುರುಷೋತ್ತಮ್ .ಪಿ ಶೆಟ್ಟಿ, ಕಾಂಚಾಣ ಹುಂಡೈ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಸಾದ್ ರಾಜ್ ಕಾಂಚನ್, ಉಡುಪಿ ಜಿಲ್ಲೆಯ ನಿವೃತ ಡಿಡಿಪಿಐ ಎಸ್

ಕನ್ನಡ ಭಾಷೆ, ಸಂಸ್ಕೃತಿ ಕಲಿಕೆ ಅಗತ್ಯ: ಡಾ. ಸುಬ್ರಹ್ಮಣ್ಯ ಕೆ.

ಉಜಿರೆ, ಸೆ.7: “ಪಾಶ್ಚಾತ್ಯ ಸಾಹಿತ್ಯದೆಡೆಗಿನ ಅತಿಯಾದ ಒಲವಿನ ಪರಿಣಾಮದಿಂದ ಕನ್ನಡ ಭಾಷೆ ಹಾಗೂ ಸಂಸ್ಕೃತಿ ನಮ್ಮಿಂದ ದೂರವಾಗುತ್ತಿದೆ. ಭಾಷೆ, ಸಂಸ್ಕೃತಿಯನ್ನು ಕಲಿತು, ಉಳಿಸುವುದು ಇಂದಿನ

ಮಂಗಳೂರು: ಇಸ್ಕಾನ್ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಸಂಭ್ರಮ

ಮಂಗಳೂರಿನ ಪಿವಿಎಸ್ ಕಲಾಕುಂಜದಲ್ಲಿರುವ ಇಸ್ಕಾನ್ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯು ಸಂಭ್ರಮ-ಸಡಗರದೊಂದಿಗೆ ಸಂಪನ್ನಗೊಂಡಿತು. ಭಕ್ತರು ಇಸ್ಕಾನ್ ಮಂದಿರಕ್ಕೆ ಭೇಟಿ ನೀಡಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶ್ರೀಕೃಷ್ಣ ದೇವರಿಗೆ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಿಹಿ ನೀರು ಮತ್ತು ತಾಜಾ ರಸಗಳಂತಹ ಮಂಗಳಕರ ಪದಾರ್ಥಗಳೊಂದಿಗೆ ವಿದ್ಯುಕ್ತವಾಗಿ

ಸುರತ್ಕಲ್: ಅನುದಾನ ಸಿಗದೆ ಆಶ್ರಯ ಮನೆ ಪೂರ್ಣಗೊಂಡಿಲ್ಲ-ಫಲಾನುಭವಿಗಳ ಅಳಲು

ಸುರತ್ಕಲ್: ಅನುದಾನ ಸಿಗದೇ ಆಶ್ರಯ ಮನೆ ಪೂರ್ಣಗೊಂಡಿಲ್ಲ. ಆರ್ಥಿಕ ಸಂಕಷ್ಟದಿಂದಾಗಿ ಬಾಡಿಗೆ ಮನೆಯಲ್ಲಿ ಇರುವುದೂ ಸಾಧ್ಯವಾಗುತ್ತಿಲ್ಲ. ಹೃದಯ ಖಾಯಿಲೆಯಿಂದ ಬಳಲುತ್ತಿದ್ದು ಕೆಲಸ ಮಾಡಲೂ ಆಗುತ್ತಿಲ್ಲ. ನಮಗೆ ಎಪಿಎಲ್ ಕಾರ್ಡು ಬದಲು ಬಿಪಿಎಲ್ ಮಾಡಿ ಕೊಡಿ ಎಂದು ಕೆಲ ಮಹಿಳೆಯರು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರಲ್ಲಿ ಅಳಲನ್ನು ತೋಡಿಕೊಂಡಿದ್ದಾರೆ. ಶಾಸಕ ಡಾ.ಭರತ್

ಉಡುಪಿ: ಹುಲಿ ಕುಣಿತ ಬೀಟ್‍ಗೆ ಹೆಜ್ಜೆ ಹಾಕಿದ ನಟ ರಕ್ಷಿತ್ ಶೆಟ್ಟಿ ಮತ್ತು ತಂಡ

ಉಡುಪಿಯ ಮಲ್ಪೆ ಸಮೀಪದ ಕೊಳ ಎಂಬಲ್ಲಿ ನಡೆದ ಹುಲಿ ವೇಷ ಸ್ಪರ್ಧೆಯಲ್ಲಿ ಸಪ್ತಸಾಗರದಾಚೆ ಎಲ್ಲೋ ಚಿತ್ರತಂಡದ ಕಲಾವಿದರು ಭಾಗವಹಿಸಿದ್ದರು. ನಟ ರಕ್ಷಿತ್ ಶೆಟ್ಟಿ ಮತ್ತು ತಂಡ ಭೇಟಿ ನೀಡಿ ಹುಲಿ ಕುಣಿತ ಬೀಟ್‍ಗೆ ಹೆಜ್ಜೆ ಹಾಕಿದರು. ರಕ್ಷಿತ್ ಶೆಟ್ಟಿಗೆ ಚಿತ್ರದ ಹೀರೋಯಿನ್ ರುಕ್ಮಿಣಿ ವಸಂತ್, ನಿರ್ದೇಶಕ ಹೇಮಂತ್ ಸಾಥ್ ನೀಡಿದರು.

ಶಿಶಿಲ: ಮಿಯ್ಯಾರು ರಕ್ಷಿತಾರಣ್ಯದಲ್ಲಿ ಮರ ಕಡಿದು ದಾಸ್ತಾನು-ಓರ್ವನ ಬಂಧನ

ಶಿಶಿಲ: ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಮಿಯ್ಯಾರು ರಕ್ಷಿತಾರಣ್ಯದ ಹೇವಾಜೆಯಲ್ಲಿ ಅಕ್ರಮವಾಗಿ ಮರ ಕಡಿದು ದಾಸ್ತಾನು ಮಾಡುತ್ತಿದ್ದಾಗ ಉಪ್ಪಿನಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಶಿಶಿಲ ಗ್ರಾಮದ ದೇವಸ ನಿವಾಸಿ ಸೇಸಪ್ಪ ಗೌಡರ ಮಗ ಧರ್ಣಪ್ಪ ಗೌಡ(46) ಎಂಬವರನ್ನು ಬಂಧಿಸಿದ್ದು.

ನೆಲ್ಯಾಡಿ: ಕಾಡಾನೆ ದಾಳಿ ತಡೆಗಟ್ಟುವ ಬಗ್ಗೆ ತಜ್ಞರಿಂದ ಮಾಹಿತಿ ಹಾಗೂ ಪ್ರಾತ್ಯಕ್ಷತೆ

ನೆಲ್ಯಾಡಿ: ಅರಣ್ಯ ಇಲಾಖೆ ವತಿಯಿಂದ ಇಚ್ಲಂಪಾಡಿ ಗ್ರಾಮದ ಸೈಂಟ್ ಜಾರ್ಜ್ ಅರ್ಥೋಡಾಕ್ಸ್ ಸೀರಿಯನ್ ಚರ್ಚ್‍ನಲ್ಲಿ ನಾಗರಿಕರಿಗೆ ಕಾಡಾನೆಗಳು ತೋಟಕ್ಕೆ ಬರದಂತೆ ತಡೆಗಟ್ಟುವ ಹಾಗೂ ಬಂದರೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡಲಾಯಿತು. ಅಂತಾರಾಷ್ಟ್ರೀಯ ಮಟ್ಟದ ತಜ್ಞರಾದ ಡಾ.ರುದ್ರಾಧಿತ್ಯ ವಿಕ್ರಂ ಷಾ ರವರು ಮಾಹಿತಿಯನ್ನು

ವಿಟ್ಲ: ಅನುದಾನ ಹಂಚಿಕೆಯಲ್ಲಿ ಬಿಜೆಪಿ ಸದಸ್ಯರ ಕಡೆಗಣನೆ-ಧರಣಿ

ವಿಟ್ಲ: ನಗರೋತ್ಥಾನ ಹಾಗೂ 15ನೇ ಹಣಕಾಸು ಯೋಜನೆಯ ಅನುದಾನ ಹಂಚಿಕೆಯಲ್ಲಿ ಬಿಜೆಪಿ ಬೆಂಬಲಿತ 12 ಮಂದಿ ಸದಸ್ಯರನ್ನು ಕಡೆಗಣಿಸಲಾಗಿದೆ. ಶಾಸಕರು ಅನುದಾನವನ್ನು ಎಲ್ಲರಿಗೂ ಸಮನಾಗಿ ಹಂಚಬೇಕು ಎಂದು ಆಗ್ರಹಿಸಿ ಸೆ.7ರಂದು ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಧರಣಿಯನ್ನು ನಡೆಸುವ ಮೂಲಕ ನ್ಯಾಯವನ್ನು ಯಾಚಿಸಲಿದ್ದೇವೆ. ಸ್ಥಳಕ್ಕೆ ಯೋಜನಾ ನಿರ್ದೇಶಕರು ಹಾಗೂ

ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣಾಷ್ಟಮಿಯ ಸಂಭ್ರಮದಲ್ಲಿ ಭಾಗಿಯಾದ ಸ್ಪೀಕರ್ ಯು.ಟಿ.ಖಾದರ್

ಉಡುಪಿಯ ಶ್ರೀಕೃಷ್ಣ ಮಠಕ್ಕೆ ಸ್ಪೀಕರ್ ಯು.ಟಿ.ಖಾದರ್ ಭೇಟಿ ನೀಡಿ ಕೃಷ್ಣಾಷ್ಟಮಿಯ ಸಂಭ್ರಮದಲ್ಲಿ ಭಾಗಿಯಾದರು. ಮಠದೊಳಗೆ ಭೇಟಿ ನೀಡಿದ ಯು.ಟಿ.ಖಾದರ್ ಅವರನ್ನು ಸತ್ಯನಾರಾಯಣ ಭಟ್ ಮತ್ತು ಸಮಿತಿಯವರು ಶಾಲು ಹೊದಿಸಿ ಸ್ವಾಗತಿಸಿದರು. ಪ್ರಸಾದವನ್ನು ನೀಡಿ ಹರಸಿದರು. ಬುಧವಾರ ಬೆಳಿಗ್ಗೆ ಬೆಂಗಳೂರು ಕಾರ್ಯಕ್ರಮ ಮುಗಿಸಿ ಮಂಗಳೂರಿಗೆ ಬಂದು ತನ್ನ ಕ್ಷೇತ್ರದಲ್ಲಿ ವಿವಿಧೆಡೆ

ಹಿರಿಯ ರಂಗಕರ್ಮಿ, ತರಬೇತುದಾರ, ಸಂಘಟಕ ಮಂಜು ವಿಟ್ಲ ಇನ್ನಿಲ್ಲ

ಬಂಟ್ವಾಳ: ಹಿರಿಯ ರಂಗಕರ್ಮಿ, ನಟ, ನಿರ್ದೇಶಕ, ತರಬೇತುದಾರ, ಸಂಘಟಕ, ಕಾರ್ಯಕ್ರಮ ನಿರೂಪಕ ಮಂಜು ವಿಟ್ಲ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನಲ್ಲಿರುವ ಪುತ್ರಿ ಮನೆಯಲ್ಲಿ ಬುಧವಾರ ನಿಧನರಾದರು.ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ ಮತ್ತು ಕಲಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಮಂಜುವಿಟ್ಲ ಅವರು ಹಿರಿಯ ತರಬೇತುದಾರರಾಗಿ,