Home 2023 November (Page 9)

ನೈತಿಕ ಮೌಲ್ಯವನ್ನು ಉಳಿಸುವುದು ಪತ್ರಕರ್ತನ ಮುಂದಿರುವ ದೊಡ್ಡ ಸವಾಲು- ಶಿವಾನಂದ ತಗಡೂರು

ಮಂಗಳೂರು: ಆಧುನಿಕ ಯುಗದಲ್ಲಿ ತನ್ನ ವೃತ್ತಿ ಬದ್ಧತೆ‌ ಮತ್ತು ನೈತಿಕ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಪತ್ರಕರ್ತನ ಮುಂದಿರುವ ದೊಡ್ಡ ಸವಾಲು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ. ಮಂಗಳೂರಿನಕುದ್ಮುಲ್ ರಂಗರಾವ್ ಪುರಭವನದಲ್ಲಿ ನ.21 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 4ನೇ

ಮಂಗಳೂರು : ಪ್ರಜಾಪ್ರಭುತ್ವ ದಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದು – ನಳಿನ್ ಕುಮಾರ್ ಕಟೀಲ್

ಮಂಗಳೂರು : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳಿಗೆ ಅತ್ಯಂತ ಮಹತ್ವದ ಪಾತ್ರವಿದೆ. ವಸ್ತು ನಿಷ್ಠ ಹಾಗೂ ವಿಶ್ವಾಸಾರ್ಹ ಸುದ್ದಿಗಳನ್ನು ಜನತೆಗೆ ತಿಳಿಸುವ ಹೊಣೆಗಾರಿಕೆ ಮಾಧ್ಯಮಗಳ ಮೇಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 4 ನೇ ಜಿಲ್ಲಾ ಸಮ್ಮೇಳನ

ಗೋವಿಂದ ಪೈ-ಕೆದಂಬಾಡಿ ರಸ್ತೆ ತ್ವರಿತ ಕಾಮಗಾರಿಗೆ ಆಗ್ರಹ

ಮಂಜೇಶ್ವರ ಗೋವಿಂದ ಪೈ -ಕೆದಂಬಾಡಿ ರಸ್ತೆ ಗ್ರಾಮೀಣ ಸಡಕ್ ಯೋಜನೆಯಲ್ಲಿ ಲೋಕೋಪಯೋಗಿ ಇಲಾಖೆಯ ಮುತುವರ್ಜಿಯಲ್ಲಿ 6 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಆರಂಭಗೊಂಡ ಮರು ಡಾಮರೀಕರಣ ಕಾಮಗಾರಿ ನಿಧಾನವಾಗಿ ನಡೆಯುತ್ತಿರುವುದು ನಾಗರಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಈ ಕಾಮಗಾರಿ ಪರಿಸರವನ್ನು ಶೋಚನೀಯ ಸ್ಥಿತಿಗೆ ತಳ್ಳಿದ್ದು, ವ್ಯಾಪಾರಿಗಳು, ಗ್ರಾಹಕರು,

ಅಂಗವೈಕಲ್ಯ ಮೆಟ್ಟಿನಿಂತು ಇತರರಿಗೆ ಸ್ಫೂರ್ತಿಯಾದ ಅಣ್ಣ-ತಂಗಿ..!

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ, ಸಾಧಿಸಲು ಮನೋಬಲ ಆತ್ಮವಿಶ್ವಾಸ ದೃಢವಾದ ನಂಬಿಕೆ ಇರಬೇಕು ಎಂಬುದಕ್ಕೆ ಈ ಇಬ್ಬರು ಸಹೋದರ-ಸಹೋದರಿಯರು ಸಾಕ್ಷಿಯಾಗಿದ್ದು, ತಮ್ಮ ಸಾಧನೆ ಮೂಲಕ ಸ್ಫೂರ್ತಿ ನೀಡುತ್ತಿದ್ದಾರೆ. ಉಡುಪಿ ಮೂಲದ ಗಣೇಶ್ ಕುಲಾಲ್ ಪಂಜಿಮಾರ್ ಮತ್ತು ಅವರ ಸಹೋದರಿ ಸುಮಾ ಪಂಜಿಮಾರ್ ತಮ್ಮ ಪೇಟಿಂಗ್ ಮೂಲಕ ಸಾಧನೆ ಮಾಡುತ್ತಿದ್ದು, ಇತರರಿಗೆ

ಕುಂದಾಪುರ: ನವಜಾತ ಶಿಶು ಸಾವಿನ ಪ್ರಕರಣ: ಜಿಲ್ಲಾಧಿಕಾರಿ ಭರವಸೆ ಬಳಿಕ ಅಹೋರಾತ್ರಿ ಧರಣಿ ತಾತ್ಕಾಲಿಕ ಅಂತ್ಯ

ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ನವಜಾತ ಶಿಶು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಅಹೋರಾತ್ರಿ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ವೈದ್ಯರ ನಿರ್ಲಕ್ಷದಿಂದಾಗಿ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಸೋಮವಾರ ಸಂಜೆ ಆಸ್ಪತ್ರೆ ಎದುರು ಜಮಾಯಿಸಿದ ಪೋಷಕರು ಹಾಗೂ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ

ಮೂಡುಬಿದಿರೆ: ರಾಜ್ಯಮಟ್ಟದ ನೆಟ್ ಬಾಲ್ ಪಂದ್ಯಾಟ, ದ.ಕ ಜಿಲ್ಲೆಗೆ ಪ್ರಥಮ ಸ್ಥಾನ

ಇತ್ತೀಚೆಗೆ ಕೊಪ್ಪಳದಲ್ಲಿ ನಡೆದ ರಾಜ್ಯಮಟ್ಟದ ನೆಟ್ ಬಾಲ್ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಪ್ರಥಮ ಸ್ಥಾನವನ್ನು ಪಡೆದಿರುತ್ತದೆ. ಇದರಲ್ಲಿ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಎಡಪದವು ಇಲ್ಲಿನ ವಿದ್ಯಾರ್ಥಿಗಳಾದ ವಿನ್ಯಾಸ್ ವಿ ಪೂಜಾರಿ, ನಿಧೀಶಾ ಶೆಟ್ಟಿ, ಪ್ರಣಾಮ್ಯ ದೇವಾಡಿಗ ಇವರು ಹರಿಯಾಣದಲ್ಲಿ ನಡೆಯುವ ರಾಷ್ಟ್ರಮಟ್ಟದ ನೆಟ್ ಬಾಲ್

ಮುಡಿಪು: ನೇಣುಬಿಗಿದು ಯುವಕ ಆತ್ಮಹತ್ಯೆ

ಉಳ್ಳಾಲ: ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಡಿಪು ಸಮೀಪದ ಕಾರಿನ ಗ್ಯಾರೇಜ್ ನಲ್ಲಿ ನಡೆದಿದೆ.ಕಂಕನಾಡಿಯ ಕಾಂಚನ ಷೋರೂಮಿನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿರುವ ಮುಡಿಪು ಗರಡಿಪಳ್ಳ ನಿವಾಸಿ ಕಿಶೋರ್ (25) ಆತ್ಮಹತ್ಯೆ ಮಾಡಿಕೊಂಡವರು. ಜಯ ಎಂಬವರಿಗೆ ಸೇರಿದ ಮುಡಿಪುವಿನ ಕಾರಿನ ಗ್ಯಾರೇಜ್ ಒಳಗಡೆ ಕಬ್ಬಿಣದ ರಾಡಿಗೆ ನೇಣು

ಮಂಗಳೂರು : ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ 4ನೇ ಜಿಲ್ಲಾ ಸಮ್ಮೇಳನ ಉದ್ಘಾಟನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಿಕಾ ಕ್ಷೇತ್ರಕ್ಕೆ ಹೊಸ ಸ್ವರೂಪ ಮತ್ತು ಮಾದರಿಯನ್ನು ನೀಡಿದೆ ಎಂದು ಸಂಸದ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 4ನೇ ಜಿಲ್ಲಾ

ವಿಶ್ವ ಮೂಲವ್ಯಾಧಿ ದಿನ-ನವೆಂಬರ್ 20

ಪ್ರತಿ ವರ್ಷ ನವೆಂಬರ್ 20 ರಂದು ವಿಶ್ವ ಮೂಲವ್ಯಾಧಿ ದಿನ ಎಂದು ಆಚರಿಸಿ ಮೂಲವ್ಯಾಧಿ ರೋಗದ ಬಗ್ಗೆ ಇರುವ ಅಪನಂಬಿಕೆಗಳನ್ನು ನಿವಾರಿಸಿ ರೋಗದ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿ ರೋಗವನ್ನು ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಬಗ್ಗೆ ಜನರಿಗೆ ಮನದಟ್ಟು ಮಾಡುವ ಸದುದ್ದೇಶವನ್ನು ಈ ಆಚರಣೆ ಹೊಂದಿದೆ. ಇದೊಂದು ಅತ್ಯಂತ ಯಾತನಾಮಯ

ಬಹರೈನ್: ದ್ವೀಪದ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡ “ವೈ.ಎಂ.ಸಿ ಟ್ರೋಫಿ-2023”

ಬಹರೈನ್ ದ್ವೀಪದ ವೈ.ಎಂ.ಸಿ ಸಂಘಟನೆಯು ‘ನಿಸರ್ಗ ಬಹರೈನ್”ನ ಆಶ್ರಯದಲ್ಲಿ ಜುಫೇರ್ ಪರಿಸರದಲ್ಲಿರುವ ಅಲ್ ನಜ್ಮಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟವೊಂದನ್ನು ಆಯೋಜಿಸಿದ್ದು, ಆಟಗಾರರೂ ವೀಕ್ಷಕರೂ ಸೇರಿದಂತೆ ದ್ವೀಪದ ನೂರಾರು ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಾಟವನ್ನು ವೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ದ್ವೀಪದ ಪ್ರಸಿದ್ಧ