ದ್ವಿತೀಯ ಪಿಯುಸಿ ಫಲಿತಾಂಶ – ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜಿನ ಮಿಸಾಂ ಆತೀರ ಖಾನ್ ವಿಜ್ಞಾನ ವಿಭಾಗದಲ್ಲಿ ರಾಜ್ಯದಲ್ಲಿ 8ನೇ ರ್‍ಯಾಂಕ್

ಕಣಚೂರು ಮಹಿಳಾ ಪದವಿಪೂರ್ವ ಕಾಲೇಜು ದೇರಳಕಟ್ಟೆ ಇದರ 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 97 ಫಲಿತಾಂಶ ಲಭಿಸಿದ್ದು, ಪರೀಕ್ಷೆಗೆ ಹಾಜರಾದ ಒಟ್ಟು 198 ವಿದ್ಯಾರ್ಥಿನಿಯರಲ್ಲಿ 45 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ, 133 ವಿದ್ಯಾರ್ಥಿನಿಯರು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 27 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಮಿಸಾಂ ಆತೀರ ಖಾನ್ 592 (98.68% ) ರಾಜ್ಯದಲ್ಲಿ 8ನೇ ರ್‍ಯಾಂಕ್, ಅಫ್ಲಾ 572 (95.33% ) ಅಂಕಗಳನ್ನು ಗಳಿಸಿರುತ್ತಾರೆ. ವಾಣಿಜ್ಯ ವಿಭಾಗದ ಕಂಪ್ಯೂಟರ್ ಸೈನ್ಸ್ (ಗಣಕ ವಿಜ್ಞಾನ) ವಿಭಾಗದಲ್ಲಿ 15 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮಿಸ್ಬಾ ಫಾತಿಮಾ 572 (95.33% ), ನಿಸ 558 (93% ) ಅಂಕ ಗಳಿಸಿರುತ್ತಾರೆ. ವಾಣಿಜ್ಯವಿಭಾಗದಲ್ಲಿ 02 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಆಯಿಷತ್ ಫಾಸಿಹ526 (87.66% ) ಫಾತಿಮಾ ಸಲ್ವ 515 (85.83% ) ಅಂಕಗಳನ್ನು ಗಳಿಸಿರುತ್ತಾರೆ . ಕಲಾ ವಿಭಾಗದಲ್ಲಿ 01 ವಿದ್ಯಾರ್ಥಿನಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ತನಿಷಾ ಹಝರಾ 560 (93.33% ) ಅಂಕಗಳನ್ನು ಗಳಿಸಿರುತ್ತಾರೆ. ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿನಿಯರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ ಬೋಧಕೇತರ ಸಿಬ್ಬಂಧಿಗಳ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.

add - rai's kitchen

Related Posts

Leave a Reply

Your email address will not be published.