ಬೆಳ್ಳಾರೆ : ಅರೆಭಾಷೆ ಸಾಹಿತ್ಯ ಸಂಘದ ಉದ್ಘಾಟನೆ, ಪುಸ್ತಕ ಕೊಡುಗೆ ಮತ್ತು ಉಪನ್ಯಾಸ ಕಾರ್ಯಕ್ರಮ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಮತ್ತು ಡಾ. ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಕನ್ನಡ ಮತ್ತು ಇಂಗ್ಲೀಷ್ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಅರೆಭಾಷೆ ಸಾಹಿತ್ಯ ಸಂಘದ ಉದ್ಘಾಟನೆ, ಪುಸ್ತಕ ಕೊಡುಗೆ ಮತ್ತು ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಬಾಬಾಸಾಹೇಬ್ ಡಾ. ಬಿ. ಆರ್ ಅಂಬೇಡ್ಕರ್ ಸೆಮಿನಾರ್ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸಹಕಾರಿ ಧುರೀಣರಾದ ಶ್ರೀ ಜಾಕೆ ಮಾಧವ ಗೌಡ ಇವರು ನೆರವೇರಿಸಿದರು. ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ ಇಲ್ಲಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಪ್ರೊ ಸಂಜೀವ ಕುದ್ಪಾಜೆ ಇವರು ಅರೆಭಾಷೆ ಬೆಳೆದು ಬಂದ ದಾರಿಯ ಕುರಿತು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಬಾಲ ಸುಬ್ರಹ್ಮಣ್ಯ ಪಿ ಎಸ್, ಐಕ್ಯುಎಸಿ ಸಹ ಸಂಚಾಲಕರೂ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ ರಾಮಚಂದ್ರ ಕೆ, ಹಾಗೂ ಡಾ ಜ್ಞಾನೇಶ್ ಏನ್ ಎ, ಸದಸ್ಯರು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಿತನುಡಿಗಳನ್ನಾಡಿದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಅಕಾಡೆಮಿ ವತಿಯಿಂದ ಕಾಲೇಜಿನ ಗ್ರಂಥಾಲಯಕ್ಕೆ ಅರೆಭಾಷೆಗೆ ಸಂಬಂಧಪಟ್ಟ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.
ಅಕಾಡೆಮಿಯ ಸದಸ್ಯರು ಮತ್ತು ಕಾರ್ಯಕ್ರಮ ಸಂಯೋಜಕರಾದ ಶ್ರೀ ಚಂದ್ರಶೇಖರ ಪೇರಾಲು ಇವರು ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ನುಡಿಗಳನ್ನಾಡಿ, ಎಲ್ಲರನ್ನು ಸ್ವಾಗತಿಸಿದರು. ಗಾನ, ಪ್ರಥಮ ಬಿ. ಕಾಂ. ಇವರು ವಂದನಾರ್ಪಣೆಗೈದರು. ಶ್ರೇಯಾ ದ್ವಿತೀಯ ಬಿ. ಕಾಂ. ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನಲ್ಲಿ ನೂತನವಾಗಿ ರಚನೆಯಾದ ಅರೆ ಭಾಷೆ ಸಾಹಿತ್ಯ ಸಂಘದ
ಅಧ್ಯಕ್ಷರಾಗಿ ಲಿಖಿನ್ ಎಸ್, ದ್ವಿತೀಯ ಬಿ ಎಸ್ ಡಬ್ಲ್ಯೂ, ಉಪಾಧ್ಯಕ್ಷರಾಗಿ ಪ್ರಿಯಾಂಕಾ ಬಿ ಹೆಚ್, ಪ್ರಥಮ ಬಿ ಎಸ್ ಡಬ್ಲ್ಯೂ, ಕಾರ್ಯದರ್ಶಿಯಾಗಿ ಶ್ರೇಯಾ ಎ ಪಿ, ಸಹ ಕಾರ್ಯದರ್ಶಿಯಾಗಿ ತರುಣ್ ಎಂ ಪ್ರಥಮ ಎಂ ಎಸ್ ಡಬ್ಲ್ಯೂ,
ಸದ್ಯಸರಾಗಿ ದಿವ್ಯಾ ಡಿ ಜೆ ಪ್ರಥಮ ಎಂ ಕಾಂ, ಹವ್ಯಶ್ರೀ ಕೆ ಎ ದ್ವಿತೀಯ ಬಿ ಎ, ಗೌಪ್ಯ ದ್ವಿತೀಯ ಬಿ ಕಾಂ, ಹಸ್ತಶ್ರೀ ದ್ವಿತೀಯ ಬಿ ಕಾಂ, ಜನನಿ ಕೆ ಎಂ ದ್ವಿತೀಯ ಬಿ ಎಸ್ ಡಬ್ಲ್ಯೂ, ಗಾನ ಕೆ ಪ್ರಥಮ ಬಿ ಕಾಂ, ನಿಧಿಶ್ರೀ ದ್ವಿತೀಯ ಬಿ ಎ ಆಯ್ಕೆಯಾದರು. ಇವರಿಗೆ ಹೂ ನೀಡಿ ಸ್ವಾಗತಿಸಲಾಯಿತು. ಸಂಘದ ಸಂಚಾಲಕರಾದ ಶ್ರೀ ಕಾಂತರಾಜು,
ಶ್ರೀಮತಿ ಸುರೇಖಾ ಹೆಚ್ ಮತ್ತು ಶ್ರೀ ಮನೋಜ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.