ಸುಳ್ಯ:ಪರಿಸರ ಜಾಗೃತಿಯಾನ, ಪರಿಸರ ಗೀತೆ ಗಾಯನ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಹಾಗೂ ಸರಕಾರಿ ಪ್ರೌಢಶಾಲೆ ಅಜ್ಜಾವರ ಇದರ ಸಹಯೋಗದೊಂದಿಗೆ ಪರಿಸರ ಜಾಗೃತಿಯಾನ, ಪರಿಸರ ಗೀತೆ ಗಾಯನ ಹಾಗೂ ಔಷಧೀಯ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪರ್ಧಾ ಸರಣಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಅಧ್ಯಕ್ಷರಾಗಿರುವ ಶ್ರೀ ಚಂದ್ರಶೇಖರ ಪೇರಾಲು ವಹಿಸಿದ್ದರು. ಎಸ್. ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಪ್ರಕಾಶ್ ಕಣೆಮರಡ್ಕ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಅರಣ್ಯ ಸಂರಕ್ಷಣಾಗಾರ ಶ್ರೀ ಭುವನೇಶ್ ಕೈಕಂಬ ಆಗಮಿಸಿ ವನ್ಯಜೀವಿ ಗಳು ಮತ್ತು ಪರಿಸರ ಬಗ್ಗೆ ಮಾಹಿತಿಯನ್ನು ನೀಡಿದರು.ಮುಖ್ಯ ಅತಿಥಿಗಳಾಗಿ ಕ.ಸಾ.ಪ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಶ್ರೀ ರಾಮಚಂದ್ರ ಪಲ್ಲತ್ತಡ್ಕ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಸೌಕತ್ ಅಲಿ, ಶಾಲಾ ಮುಖ್ಯ್ಯೋಪಾಧ್ಯಯರಾದ ಶ್ರೀ ಗೋಪಿನಾಥ್ ಮೆತ್ತಡ್ಕ, ಮಂದಾರ ಇಕೋ ಕ್ಲಬ್ ಸಂಚಾಲಕರಾದ ಶ್ರೀ ಚಂದ್ರಶೇಖರ ಭಟ್, ಚೈತ್ರ ಯುವತಿ ಮಂಡಲ ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಉಪಸ್ಥಿತರಿದ್ದರು. ಭಾವನಾ ಸುಗಮ ಸಂಗೀತ ಬಳಗದ ಕೆ. ಆರ್ ಗೋಪಾಲಕೃಷ್ಣ,ಕು. ಲಿಪಿಶ್ರೀ, ಕು. ಶುಭದಾ ರವರಿಂದ ಪರಿಸರ ಗೀತೆ ಗಾಯನ ನಡೆಯಿತು.ಔಷಧೀಯ ಸಸ್ಯಗಳ ಗುರುತುವಿಸುವಿಕೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಶ್ರೀ ತೇಜಸ್ವಿ ಕಡಪಳ ಸ್ವಾಗತಿಸಿ, ಚಂದ್ರಶೇಖರ ಭಟ್ ವಂದಿಸಿದರು.ಚೈತ್ರ ಯುವತಿ ಮಂಡಲ, ಪ್ರತಾಪ ಯುವಕ ಮಂಡಲ, ಮಂದಾರ ಇಕೋ ಕ್ಲಬ್ ಇದರ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಕ.ಸಾ.ಪ ನಿರ್ದೇಶಕಿ ಕಾರ್ಯಕ್ರಮ ಸoಯೋಜಕಿ ಶ್ರೀಮತಿ ಶಶ್ಮಿ ಭಟ್ ಅಜ್ಜಾವರ ಹಾಗೂ ಹಿರಿಯ ಶಿಕ್ಷಕಿ ಶ್ರೀಮತಿ ವಿದ್ಯಾಶಂಕರಿ ಕಾರ್ಯಕ್ರಮವನ್ನು ನಿರೂಪಿಸಿದರು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿ ವೃಂದ ಪೋಷಕರು,ಮಕ್ಕಳು,ಚೈತ್ರ ಯುವತಿ ಮಂಡಲ ಗೌರವಾ ಸಲಹೆಗಾರದ ಶ್ರೀಮತಿ ಜಯಲಕ್ಷ್ಮಿ, ಎಸ್ ಡಿ ಎಂ ಸಿ ಸದಸ್ಯೆ ಸೆಮೀರಾ ಕಾರ್ಯಕ್ರಮಕ್ಕೆ ಸಹಕರಿಸಿದರು.

Related Posts

Leave a Reply

Your email address will not be published.