ಮೂಡುಬಿದಿರೆ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟ್ ಲಿ. ವತಿಯಿಂದ ಬೆಡ್ಶೀಟ್, ಟವಲ್, ಸಿಹಿತಿಂಡಿ ವಿತರಣೆ

ಮೂಡುಬಿದಿರೆ: 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟ್ ಲಿ. ಇದರ ವತಿಯಿಂದ ಪ್ರಜ್ಞಾ ಆಶ್ರಯ ಕೇಂದ್ರದ ವಿದ್ಯಾರ್ಥಿಗಳಿಗೆ ಬೆಡ್ಶೀಟ್, ಟವಲ್, ಸಿಹಿತಿಂಡಿ ವಿತರಣಾ ಕಾರ್ಯಕ್ರಮವು ನಡೆಯಿತು.


ಮೂಡುಬಿದಿರೆ-ಮುಲ್ಕಿ ಕ್ಷೇತ್ರದ ಬಿಜೆಪಿ ಮಂಡಲ ಕಾರ್ಯದರ್ಶಿ ಹಾಗೂ ಪಂಚಶಕ್ತಿ ವಿವಿದೋದ್ದೇಶ ಸೇವಾ ಸಹಕಾರಿ ಸಂಘ ಇದರ ಅಧ್ಯಕ್ಷರಾದ ರಂಜಿತ್ ಕುಮಾರ್ ತೋಡಾರು ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮಿಲಾಗ್ರಿಸ್ ಸಂಸ್ಥೆಯ ಶಾಖಾ ವ್ಯವಸ್ಥಾಪಕಿ ಮೋಹಿನಿ ಎಂ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಮಿಲಾಗ್ರಿಸ್ ಸಂಸ್ಥೆಯ ವಸೂಲಾತಿ/ಮಾರಾಟ ಅಧಿಕಾರಿ ಗೌತಮ್ ರೈ, ಪ್ರಜ್ಞಾ ಸಂಸ್ಥೆಯ ಮೇಲ್ವಿಚಾರಕಿ ಸವಿತಾ, ಸಮಾಲೋಚಕಿ ವಿದ್ಯಾಲಕ್ಷ್ಮೀ ಉಪಸ್ಥಿತರಿದ್ದರು. ವೀಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
