ಮಂಜೇಶ್ವರ ಅಬಕಾರಿ ಪೊಲೀಸರ ಮುಂದುವರಿದ ಕಾರ್ಯಾಚರಣೆ : ಮತ್ತೆ ದಾಖಲೆಗಳಿಲ್ಲದೆ ಸಾಗಾಟ ಮಾಡುತಿದ್ದ 96 ಪವನ್ ಚಿನ್ನಾಭರಣ ಸಹಿತ ಓರ್ವ ವಶಕ್ಕೆ

ಮಂಜೇಶ್ವರ: ಮಂಜೇಶ್ವರ ವಾಮಂಜೂರು ಅಬಕಾರಿ ತಪಾಸಣಾ ಕೇಂದ್ರದಲ್ಲಿ ಅಧಿಕಾರಿಗಳು ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ. ಬಾನುವಾರ ಮಂಗಳೂರಿನಿಂದ ಕಾಸರಗೋಡು ಕಡೆಗೆ ಬರುತ್ತಿದ್ದ ಕರ್ಣಾಟಕ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಂಜೇಶ್ವರ ಅಬಕಾರಿ ಇಲಾಖೆ ನಡೆಸಿದ ತಪಾಸಣೆಯಲ್ಲಿ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ ಸುಮಾರು 96 ಪವನ್ (762 ಗ್ರಾಂ) ಚಿನ್ನಾಭರಣಗಳೊಂದಿಗೆ ಒಬ್ಬನನ್ನು ಸೆರೆ ಹಿಡಿಯಲಾಗಿದೆ.
ಬಾನುವಾರ ಸಂಜೆ ವಾಮಂಜೂರು ಅಬಕಾರಿ ಚೆಕ್ ಪೋಸ್ಟ್ ನಲ್ಲಿ ಕಾರ್ಯಾಚರಣೆ ನಡೆದಿದೆ.

ಈ ಸಂಬಂಧ ಮುಂಬೈ ನಿವಾಸಿ ಮುಜಾಸಿರ್ ಹುಸೈನ್ ಎಂಬಾತವನ್ನು ಸೆರೆ ಹಿಡಿಯಲಾಗಿದೆ. ಶನಿವಾರ ಕೂಡಾ ಇದೇ ಶೈಲಿಯಲ್ಲಿ ದಾಖಲೆಗಳಿಲ್ಲದೆ ಸಾಗಾಟ ಮಾಡುತಿದ್ದ ಭಾರೀ ಪ್ರಮಾಣದ ಚಿನ್ನ ಹಾಗೂ ನಗದನ್ನು ಅಬಕಾರಿ ಇಲಾಖೆ ವಶಕ್ಕೆ ಪಡೆದು ಇಬ್ಬರನ್ನು ಸೆರೆ ಹಿಡಿದಿತ್ತು.

ಸೆರೆಗೀಡಾದ ಮುಜಾಸಿರ್ ಹುಸೈನ್ ಹಾಗೂ ವಶಪಡಿಸಲಾದ ಹಣವನ್ನು ಜಿ ಎಸ್ ಟಿ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಅಬಕಾರಿ ಇಲಾಖಾ ಸರ್ಕಲ್ ಇನ್‌ಸ್ಪೆಕ್ಟರ್ ಶಿಜಿಲ್ ಕುಮಾರ್ ಕೆ.ಕೆ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ

Related Posts

Leave a Reply

Your email address will not be published.