ಬೈಂದೂರು :  ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ದುರ್ಗಾಪರಮೇಶ್ವರಿ ದೇವಸ್ಥಾನ ಉಪ್ಪುಂದ ಇದರ 52ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪ್ಪುಂದ ಅಧ್ಯಕ್ಷ ಯು ಸಂದೇಶ್ ಭಟ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಉಪ್ಪುಂದ – ಬಿಜೂರು ಗ್ರಾಮ ವ್ಯಾಪ್ತಿಯ ಎಸ್. ಎಸ್. ಎಲ್. ಸಿ ಹಾಗೂ ದ್ವಿತೀಯ ಪಿ.ಯು.ಸಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು

ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ದುರ್ಗಾಪರಮೇಶ್ವರಿ ದೇವಸ್ಥಾನ ಉಪ್ಪುಂದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು ಸತೀಶ್ ಶೆಟ್ಟಿ, ಉಪ್ಪುಂದ ಉದ್ಯಮಿ ಜಿ ಗೋಕುಲ್ ಶೆಟ್ಟಿ, ಪ್ರತಿಭಾ ಪುರಸ್ಕಾರದ ಪ್ರಾಯೋಜಕ ಕರ್ಣಾಟಕ ಬ್ಯಾಂಕಿನ ನಿವೃತ್ತ ಪ್ರಬಂಧಕ ಉಪ್ಪುಂದ ಪಟೇಲರಮನೆ ವೆಂಕಟರಮಣ ಭಟ್, ಬೈಂದೂರು ಯಡ್ತರೆ – ಬೈಂದೂರು ಯುವ ಉದ್ಯಮಿ ವೀರೇಂದ್ರ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಮಂಜುನಾಥ್ ದೇವಾಡಿಗ ರಥಬೀದಿ, ಅನಿಲ್ ಉಪ್ಪುಂದ, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪ್ಪುಂದ ಸಂಚಾಲಕ ಪುರುಷೋತ್ತಮ್ ದಾಸ್ ಉಪ್ಪುಂದ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ವೆಂಕಟರಮಣ ಶೇರುಗಾರ್ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪ್ಪುಂದ ಪ್ರಧಾನ ಕಾರ್ಯದರ್ಶಿ ಜನಾರ್ದನ ಖಾರ್ವಿ ವಂದಿಸಿದರು.

add - S.L Shet ..march 2025

Related Posts

Leave a Reply

Your email address will not be published.