ಅತಿ ಸಕ್ಕರೆ ಅಂಶದ ಕೆಲವು ಹಣ್ಣುಗಳು

ಹಣ್ಣುಗಳು ಜೀವನಾವಶ್ಯಕ ಜೀವಸತ್ವ, ನಾರು ಸತ್ವ, ಖನಿಜ ಇತ್ಯಾದಿಗಳನ್ನು ಹೊಂದಿವೆ; ಹಾಗೆಯೇ ಸಕ್ಕರೆ ಅಂಶಗಳನ್ನು ಸಹ ಹೊಂದಿವೆ.ಹಾಗಾಗಿ ಹಣ್ಣು ತಿನ್ನುವಾಗ ನಮ್ಮ ದೇಹ ಸ್ಥಿತಿಯ ಅರಿವೆಚ್ಚರಿಕೆ ಅಗತ್ಯ. ಈ ಹಣ್ಣುಗಳು ಮಾನವನ ದೇಹ ಬಯಸುವವುಗಳು. ಸತ್ವ ತುಂಬಿದವುಗಳು. ತಿನ್ನಲೇಬೇಕಾದವು. ಆದರೆ ಲೆಕ್ಕಾಚಾರ ತಪ್ಪಿ ತಿನ್ನಬಾರದು. ಮಿತಿಯಲ್ಲಿ ತಿನ್ನಲೇಬೇಕು

ಕೆಲವು ಹೆಚ್ಚು ಸಕ್ಕರೆ ಅಂಶದ ಪ್ರಮುಖ ಹಣ್ಣುಗಳು ಇಂತಿವೆ. ಒಂದು ಮಧ್ಯಮ ಗಾತ್ರದ ಮಾವಿನ ಹಣ್ಣಿನಲ್ಲಿ40 ಗ್ರಾಂ ಸಕ್ಕರೆ ಇರುತ್ತದೆ. ಒಂದು ಕಪ್ ದ್ರಾಕ್ಷಿ ಹಣ್ಣಿನಲ್ಲಿ 23 ಗ್ರಾಂ ಸಕ್ಕರೆ ಇರುತ್ತದೆ. ಒಂದು ಹಿಡಿ ತಿಂದರೆ ನೋ ತೊಂದರೆ.ತಾಜಾ ಚರ‍್ರಿ ಹಣ್ಣು ಕೆಲವು ಕಡೆ ಹೆಚ್ಚು ತಿನ್ನುವರು. ಇದು ಒಂದು ಮುಷ್ಟಿಗಿಂತ ಹೆಚ್ಚು ತಿನ್ನುವುದು ಸರಿಯಲ್ಲ. ಸಂಸ್ಕರಿಸಿದ ಚರ‍್ರಿಗಳು ಇನ್ನೂ ಹೆಚ್ಚು ಸೇರಿಸಿದ ಸಕ್ಕರೆ ಹೊಂದಿರುತ್ತವೆ.ಒಂದು ಕಪ್ ಲಿಚ್ಚಿ ಹಣ್ಣು29 ಗ್ರಾಂ ಸಕ್ಕರೆ ಒಳಗೊಂಡಿರುತ್ತದೆ. ಒಂದು ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ14 ಗ್ರಾಂ ಸಕ್ಕರೆ ಅಂಶ ಇದೆ.

add - S.L Shet ..march 2025

Related Posts

Leave a Reply

Your email address will not be published.