ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ : ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ
ಬೈಂದೂರು : ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನ ಸಭೆಯು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಮಾತನಾಡಿದ ಸಂಸದ ಬಿ. ವೈ ರಾಘವೇಂದ್ರ ಅವರು, “ಸಾಕಷ್ಟು ಅನುದಾನವು ಈ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ನೀಡಿದೆ. ರೂ.1500 ಕೋಟಿ ಮೊತ್ತದ ವಿವಿಧ ಕಾಮಗಾರಿಗಳು ಶಂಕುಸ್ಥಾಪನೆ ಹಾಗೂ ಉದ್ಘಾಟನೆಯಾಗಿದ್ದು, ಈ ಕಾಮಗಾರಿಗಳ ಕೆಲಸವನ್ನುಶೀಘ್ರ ಪ್ರಾರಂಭಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿ ಕೊಡಬೇಕು”. ಎಂದು ಸೂಚಿಸಿದರು.
ಬೈಂದೂರು ಕ್ಷೇತ್ರದ ಸರ್ಕಾರಿ ಸ್ಥಳಗಳಲ್ಲಿ 160ಕ್ಕೂ ಹೆಚ್ಚು ದೇವಸ್ಥಾನ, 60ಕ್ಕೂ ಅಧಿಕ ನಾಗಬನಗಳಿದ್ದು ಇದನ್ನು ಧಾರ್ಮಿಕ ಕ್ಷೇತ್ರದ ಹೆಸರಿಗೆ ಮಂಜೂರು ಮಾಡಲು ಕ್ರಮ, ಗೋಮಾಳ,ರುದ್ರಭೂಮಿ ಸ್ಥಳಗಳ ಗಡಿ ಗುರುತು ಮಾಡಿ ಉತ್ತುವರಿ ಮಾಡದಂತೆ ರಕ್ಷಿಸಿ ಅಭಿವೃದ್ಧಿಗೊಳಿಸುವುದು. ಡಿಮ್ಡ್ ಅರಣ್ಯ ಪಟ್ಟಿಯಿಂದ ವಿರಹಿತಗೊಂಡ 94ಸಿ ಹಾಗೂ ಅಕ್ರಮ ಸಕ್ರಮ ಕಡತ ಒಂದು ತಿಂಗಳ ಒಳಗೆ ಮಂಜೂರು ಮಾಡಲು ಕ್ರಮವಹಿಸಬೇಕು. ನಾಡ ಗ್ರಾಮದ ಬಡಾಕೆರೆ, ಕೋಣ್ಕಿ ,ಜಡ್ಡಾಡಿ ಚಿರತೆಯೊಂದು ಸುತ್ತಮುತ್ತಲ ಜನವಸತಿ ಪ್ರದೇಶದಲ್ಲಿ ಹಾಡು ಹಗಲೇ ಹೊಂಚು ಹಾಕಿ ಓಡಾಡುತ್ತಿದ್ದು….ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.. ಈ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಶಾಸಕ ಸುಕುಮಾರ ಶೆಟ್ಟಿ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ರಾಜಪ್ಪ, ಉಪವಿಭಾಗಾಧಿಕಾರಿ ರಾಜು ಕೆ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


















