ಬಿಜೆಪಿ 140 ಸೀಟ್ ಗೆದ್ದು ಅಧಿಕಾರ ಹಿಡಿಯುವುದು ಖಚಿತ : ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್
ಬೆಳ್ತಂಗಡಿಯಲ್ಲಿ ಈ ಬಾರಿ ಸುಮಾರು 50 ಸಾವಿರಕ್ಕೂ ಹೆಚ್ಚಿನ ಅಂತರದಲ್ಲಿ ಹರೀಶ್ ಪೂಂಜ ರವರು ಗೆಲ್ಲಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ರವರು ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಬೂತ್ ಮಟ್ಟದಲ್ಲಿ ಕೂಡ ಜಾತಿ ಧರ್ಮ ಅನ್ನದೆ ಎಲ್ಲಾ ವರ್ಗದವರಿಗೂ ಸರಕಾರದ ಪ್ರತಿಯೊಂದು ಸವಲತ್ತುಗಳನ್ನು ತಲುಪಿಸುವ ಕಾರ್ಯ ಆಗಿದೆ,ಆದ್ದರಿಂದ ಅತ್ಯಂತ ಹೆಚ್ಚಿನ ಅಂತರದಲ್ಲಿ ಹರೀಶ್ ಪೂಂಜ ರವರು ಗೆಲ್ಲಲಿದ್ದಾರೆ.ಈ ಬಾರಿ ಬಿಜೆಪಿ ಸುಮಾರು 140 ಸೀಟ್ ಗೆದ್ದು ಅಧಿಕಾರ ಹಿಡಿಯುವುದು ಖಚಿತವಾಗಿದೆ ಎಂದು ಹೇಳಿದರು. ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ಜಯಂತ್ ಕೋಟ್ಯಾನ್,ಕುಶಾಲಪ್ಪ ಗೌಡ, ರಾಜೇಶ್ ಹಾಗೂ ಇತರರು ಉಪಸ್ಥಿತರಿದ್ದರು,



















