ಎಸ್.ಡಿ. ಎಮ್. ಕಾಲೇಜಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ
ಉಜಿರೆ : ಮತದಾನದ ಅರಿವು ಮೂಡಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದು ಅಗತ್ಯವೆಂದು ಎಸ್.ಡಿ. ಎಮ್. ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ ಬಿ.ಎ ಅಭಿಪ್ರಾಯಪಟ್ಟರು. ಶ್ರೀ. ಧ. ಮಂ. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಆಯೋಜಿಸಿದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸದೃಢ ನಾಯಕನನ್ನು ಆಯ್ಕೆ ಮಾಡುವುದು ಪ್ರಜೆಗಳ ಕರ್ತವ್ಯ ಮತ್ತು ಹಕ್ಕು. ಮತದಾನ ದಿನವನ್ನು ರಜಾ ದಿನವೆಂದು ಭಾವಿಸದೇ ನಮ್ಮ ಹಕ್ಕನ್ನು ನಾವು ಚಲಾಯಿಸಬೇಕು, ಪ್ರತಿ ಬಾರಿಯೂ ಮತದಾರರ ಸಂಖ್ಯೆ ಏರಿಕೆಯಾಗುತ್ತಿರುವುದು ಖುಷಿ ವಿಷಯವಾಗಿದ್ದು, ಜನರಲ್ಲಿ ಇನ್ನಷ್ಟು ಜಾಗೃತಿ ಅಗತ್ಯವಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಮತದಾನದ ಹಕ್ಕನ್ನು ಚಲಾಯಿಸುವಂತೆ’ ಕಾಲೇಜಿನ ಪ್ರಾಂಶುಪಾಲರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಶಾಂತಿಪ್ರಕಾಶ್, ಕಲಾ ವಿಭಾಗದ ಡೀನ್ ಡಾ. ಶಾಲಿಪ್, ನೋಂದಣಿ ವಿಭಾಗದ ಶಶಿಶೇಖರ್, ನಂದಕುಮಾರಿ, ವಿಜ್ಞಾನ ವಿಭಾಗದ ಡೀನ್ ಡಾ. ಸವಿತಾ ವಾಣಿಜ್ಯ ವಿಭಾಗದ ಡೀನ್ ಶಕುಂತಲಾ, ಮತ್ತು ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅನ್ನಪೂರ್ಣ ನಿರೂಪಿಸಿ, ಜಯಶ್ರೀ ಸ್ವಾಗತಿಸಿ, ತೃಪ್ತಿ ವಂದಿಸಿದರು.