ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಲಿಖಿತಾ ಪ್ರಜ್ವಲ್ ಅವರಿಗೆ ‘ಅಬ್ಬಕ್ಕ ಪ್ರೇರಣಾ ಪುರಸ್ಕಾರ’
ಮೂಡುಬಿದಿರೆ: ವೀರರಾಣಿ ಅಬ್ಬಕ್ಕ 500ನೇ ವರ್ಷದ ಸಂಭ್ರಮದ ಅಂಗವಾಗಿ ‘ಜವನೆರ್ ಬೆದ್ರ’ ಸಂಘಟನೆಯು ನೀಡುವ ಪ್ರತಿಷ್ಠಿತ ‘ಅಬ್ಬಕ್ಕ ಪ್ರೇರಣಾ ಪುರಸ್ಕಾರ’ಕ್ಕೆ ಮೂಡುಬಿದಿರೆ ಮೂಲದ ಲಿಖಿತಾ ಪ್ರಜ್ವಲ್ ಅವರು ಆಯ್ಕೆಯಾಗಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿ ಅವರು ಮಾಡಿರುವ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗುತ್ತಿದೆ.

ಲಿಖಿತಾ ಅವರು ಪ್ರಸ್ತುತ V4 ಸುದ್ದಿವಾಹಿನಿಯಲ್ಲಿ ಸುದ್ದಿ ನಿರೂಪಕಿಯಾಗಿ ಮತ್ತು ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಮಂಗಳೂರು ಆಕಾಶವಾಣಿಯಲ್ಲಿ ನಿರೂಪಕಿಯಾಗಿಯೂ ಅವರು ಜನಪ್ರಿಯರಾಗಿದ್ದಾರೆ. ಬಾಲ್ಯದಿಂದಲೇ ನೃತ್ಯಗಾರ್ತಿಯಾಗಿರುವ ಇವರು, ಕಲೆಯ ಜೊತೆಗೆ ಮಾಧ್ಯಮ ಕ್ಷೇತ್ರದಲ್ಲಿ ತೋರಿದ ಬಹುಮುಖ ಪ್ರತಿಭೆ ಮತ್ತು ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ.


















