ಚಲನಚಿತ್ರ ನಟಿ ಶ್ರುತಿ ಕುಕ್ಕೆ ಸುಬ್ರಹ್ಮಣ್ಯ ಭೇಟಿ

ಸುಬ್ರಹ್ಮಣ್ಯ : ಕನ್ನಡ ಚಲನಚಿತ್ರ ರಂಗದ ಖ್ಯಾತ ನಟಿ ಶ್ರುತಿ ಅವರು ಕುಟುಂಬ ಸಮೇತರಾಗಿ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದರು. ಶೃತಿ ಅವರೊಂದಿಗೆ ಅವರ ಅಪ್ಪ, ಅಮ್ಮ, ಚಿಕ್ಕಮ್ಮ ಹಾಗೂ ಕುಟುಂಬಸ್ಥರು ಜೊತೆಗಿದ್ದರು. ಶ್ರೀ ದೇವಳದಲ್ಲಿ ಪಂಚಾಮೃತ ಮಹಾಅಭಿಷೇಕ ಸೇವೆ ಸಲ್ಲಿಸಿದರು. ಸತ್ಯನಾರಾಯಣ ಅಸ್ರನ್ನ ಅವರು ತೀರ್ಥ ಹಾಗೂ ಶ್ರೀ ದೇವರ ಪ್ರಸಾದ ನೀಡಿದರು. ಅಲ್ಲಿಂದ ಹೊ ಸಳಿಗಮ್ಮ ದೈವದ ಗುಡಿಯಲ್ಲಿ ದರ್ಶನ ಮಾಡಿದರು. ತದನಂತರ ಶ್ರೀ ದೇವಳದ ಆಡಳಿತ ಕಚೇರಿಯಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ ಇಂಜಾಡಿ ಅವರು ಶಾಲು ಹೊಂದಿಸಿ ಶೃತಿ ಅವರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರುಗಳಾದ ಅಜಿತ್ ಪಾಲೇರಿ,ಸೌಮ್ಯ ಭರತ್, ಲೀಲಾ ಮನಮೋಹನ್,ಪ್ರವೀಣ ರೈ, ಮಾಸ್ಟರ್ ಪ್ಲಾನ್ ಸಮಿತಿಯ ಅಚ್ಚುತ ಗೌಡ ಬಳ್ಪ, ಕಾರ್ಯ ನಿರ್ವಾಹಕ ಅಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ, ಸಹಾಯಕ ಅಧಿಕಾರಿ ಯೇಸುರಾಜ್, ಶಿಷ್ಟಾಚಾರ ಅಧಿಕಾರಿ ಜಯರಾಮರಾವ್ ಶಿಷ್ಟಾಚಾರ ವಿಭಾಗದ ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು. ನಂತರ ಶ್ರೀ ದೇವಳದ ಅಲ್ಲಿ ಭೋಜನ ಪ್ರಸಾದ ಸ್ವೀಕರಿಸಿ ತೆರಳಿದರು.

Related Posts

Leave a Reply

Your email address will not be published.