ಕಾರ್ಕಳ: ಜ.18ರಿಂದ 22ರ ವರೆಗೆ ಆನೆಕೆರೆ ಚತುರ್ಮುಖ ಕೆರೆ ಬಸದಿ ಪಂಚ ಕಲ್ಯಾಣ ಮಹೋತ್ಸವ
ಕಾರ್ಕಳ: ಚತುರ್ಮುಖ ಕೆರೆ ಬಸದಿ ಜೀರ್ಣೋದ್ಧಾರ ಸಮಿತಿ ಇವರ ವತಿಯಿಂದ ಜನವರಿ 18ರಿಂದ ಜ.22ವರೆಗೆ ಜರಗುವ ಪಂಚಕಲ್ಯಾಣ ಮಹೋತ್ಸವ ಪೂರ್ವಭಾವಿಯಾಗಿ ಇಂದು ಆನೆಕೆರೆ ಚತುರ್ಮುಖ ಕೆರೆ ಬಸದಿ ಬಳಿ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಕಳ ಶಾಸಕರಾದ ವಿ ಸುನಿಲ್ ಕುಮಾರ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಆನೆಕೆರೆ ಚತುರ್ಮುಖ ಕೆರೆ ಬಸದಿ ಅತ್ಯಂತ ಪವಿತ್ರವಾದ ಸ್ಥಳ ಈ ಬಸದಿಗಳನ್ನು ನೋಡಲು ದೇಶದ ಹಲವಾರು ಕಡೆಯಿಂದ ಪ್ರವಾಸಿಗರು ಬರುತ್ತಿದ್ದಾರೆ. ಸಂಪೂರ್ಣ ಶಿಲಾಮಯವಾದ ಬಸದಿ ನಿರ್ಮಾಣ ಹಂತದಲ್ಲಿದೆ ಇದರ ಜೀರ್ಣೋದ್ಧಾರವು ಯಶಸ್ವಿಯಾಗಿ ಜರುಗಲಿ ಎಂದು ಹೇಳಿದರು.
ನಂತರ ಮಾತನಾಡಿದ ಶ್ರೀ ಲಲಿತ ಕೀರ್ತಿ ಭಟ್ಟಾರಕ ಸ್ವಾಮೀಜಿಗಳು ನಮ್ಮ ಶಾಸಕರು ಶಿಲಾಮಯ ಗೋಪುರಕ್ಕೆ ಸರ್ಕಾರದಿಂದ ಅತಿಹೆಚ್ಚಿನ ಅನುದಾನವನ್ನು ತಂದು ಕೊಟ್ಟಿರುತ್ತಾರೆ ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇನೆ ಎಂದು ಹೇಳಿದರು.
ವೇದಿಕೆಯಲ್ಲಿ ನ್ಯಾಯವಾದಿಗಳಾದ ಎಂ.ಕೆ. ವಿಜಯಕುಮಾರ್, ಗುಣ ಪಾಲ ಕಡಂಬ, ಮಹಾವೀರ ಹೆಗಡೆ, ವಾಸ್ತು ತಜ್ಞಸು ದರ್ಶನ್ ಜೈನ್, ಹಾಗೂ ಪುರಸಭೆ ಮಾಜಿ ಅಧ್ಯಕ್ಷೇ ಸುಮ ಕೇಶವ್ ಉಪಸ್ಥಿತರಿದ್ದರು.