ಅಟೋ ರಿಕ್ಷಾಕ್ಕೂ ಹೆಲ್ಮೆಟ್ ಕಡ್ಡಾಯ..!
ಅಟೋ ರಿಕ್ಷಾವೊಂದರ ಮಾಲಿಕರಿಗೆ ಶ್ವಾಕ್…ಅಟೋ ಚಲಾಯಿಸುವ ಸಂದರ್ಭ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಶಿವಮೊಗ್ಗ ದಿಂದ ಎರ್ಮಾಳಿನ ಅಟೋ ಚಾಲಕರೊರ್ವರಿಗೆ 500 ರೂಪಾಯಿ ದಂಡ ಪಾವತಿಸುವಂತೆ ನೋಟಿಸು ಜಾರಿಯಾಗಿದೆ. ಅಟೋ ರಿಕ್ಷಾದ ನೋಂದಾವಣೆ ಸಂಖ್ಯೆ, ಫೋಟೋ ದ್ವಿಚಕ್ರವಾಹನದ್ದಾಗಿದ್ದು, ಹೆಲ್ಮೆಟ್ ಧರಿಸದೆ ಸಂಚಾರ ನಿಯಮ ಉಲ್ಕಘಿಸಿದ ನೀವು ದಂಡ ಕಟ್ಟುವಂತೆ ಮೊಬೈಲ್ ಗೆ ಮ್ಯಾಸೇಜ್ ಬಂದಾಗ ಅಟೋ ಚಾಲಕ ತಬ್ಬಿಬ್ಬು ನಾನು ಶಿವಮೊಗ್ಗ ಕಡೆ ಹೋಗಿಯೇ ಇಲ್ಲ, ಅಲ್ಲದೆ ಎಲ್ಲಿಯೂ ಇಲ್ಲದ ಅಟೋ ರಿಕ್ಷಾ ಚಲಾಯಿಸುವಾಗಿ ಹೆಲ್ಮೆಟ್ ಧರಿಸುವ ರೂಲ್ಸ್ ಶಿವಮೊಗ್ಗದಲ್ಲಿ ಇದೆಯೇ ಎಂದು ತನಗೆ ತಾನೇ ಪ್ರಶ್ನಿಸಿಕೊಂಡಿದ್ದಾರೆ ಆ ಅಟೋ ಚಾಲಕ..ಟ್ರಾಫಿಕ್ ಪೊಲೀಸ್ ಇಲಾಖೆಯಿಂದ ಆದ ಎಡವಟ್ಟೋ…ಇಲ್ಲ ಇದೊಂದು ಜನರಿಂದ ಹಣ ಸುಳಿಯಲು ಹೊಸತೊಂದು ತಂಡ ಹೆಣದ ಬಲೆಯೊ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಬಹಿರಂಗಗೊಳ್ಳ ಬೇಕಿದೆ.