ಬಜ್ಪೆ: ಮಾದಕ ವಸ್ತು ಮಾರಾಟ, ಮೂವರ ಬಂಧನ
ಬೈಕ್ನಲ್ಲಿ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಮೂವರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ನ ಹೊಸಬೆಟ್ಟು ಈಶ್ವರನಗರ ನಿವಾಸಿ ಅಣ್ಣಪ್ಪಸ್ವಾಮಿ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಬಡಜೇ ನಿವಾಸಿ ಮೊಹಮ್ಮದ್ ಜುನೈದ್ ಹಾಗೂ ಹೊಸಬೆಟ್ಟು ವಿನ ಪಡ್ಡಾಯಿ ನಿವಾಸಿ ಎಂ.ಕೆ ಆಕಾಶ ಬಂಧಿತರು.
ಬಜಪೆ ಪೊಲೀಸ್ ಠಾಣೆಯ ಪಿಎಸ್ ಐ ಗುರಪ್ಪ ಕಾಂತಿ ರವರು ಸಿಬ್ಬಂದಿಯವರ ಜೊತೆ ಬಜಪೆಯ ಶಾಂತಿಗುಡ್ಡೆ ಚೆಕ್ ಪಾಯಿಂಟ್ ಬಳಿ ಬಜಪೆಯಿಂದ ಕಳವಾರು ಕಡೆಗೆ ಹಾದು ಹೋಗಿರುವ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು.

ಈ ವೇಳೆ ಕಳವಾರು ಕಡೆಯಿಂದ ಯಮಹ ಈ ಬೈಕ್ ನಲ್ಲಿ ೩ ಜನ ಬರುತ್ತಿದ್ದನ್ನು ಕಂಡು ಬೈಕ್ ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದ್ದು, ಬೈಕ್ನ್ನು ನಿಲ್ಲಿಸಿ ಸ್ಥಳದಿಂದ ಓಡಿ ಹೋಗಲು ಯತ್ನ ನಡೆಸಿದ್ದರು.



















