ಸುಪ್ರೀಂ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲು ಹೊರಟ ವಿಚಾರ : ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್‍ನಿಂದ ಖಂಡನೆ

ಸುಪ್ರೀಂಕೋರ್ಟ್ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲು ಹೊರಟಿರುವುದು ಸರಿಯಲ್ಲ. ಸುಪ್ರೀಂ ಕೋರ್ಟ್ ಆತುರದಿಂದ ಸಲಿಂಗ ವಿವಾಹಕ್ಕೆ ಪ್ರಾತಿನಿದ್ಯ ಕೊಡಲು ಯೋಚಿಸಿರುವುದು ಇಡೀ ನಾಗರೀಕ ಸಮಾಜಕ್ಕೆ ನೋವಾಗಿದೆ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಅವರು ಮಂಗಳೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದರು. ಭಾರತದಲ್ಲಿ ವಿವಾಹಕ್ಕೆ ಶ್ರೇಷ್ಠ ಪ್ರಾಮುಖ್ಯತೆಯನ್ನು ಹೊಂದಿದ್ದು, ಕೌಟುಂಬಿಕ ಸಮಾಜವನ್ನು ನಿರ್ಮಿಸುವುದರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತವು ವಿಭಿನ್ನ ಧರ್ಮಗಳ, ಜಾತಿಗಳ, ಉಪಜಾತಿಗಳ ದೇಶವಾಗಿದ್ದು, ಶತಮಾನಗಳಿಂದ ಗಂಡು ಮತ್ತು ಹೆಣ್ಣಿನ ನಡುವಿನ ವಿವಾಹವನ್ನು ಮಾತ್ರ ಗುರುತಿಸಿದೆ. ಸಲಿಂಗ ವಿವಾಹಗಳಿಗೆ ಅವಕಾಶ ನೀಡಿದರೆ ದತ್ತು ನಿಯಮಗಳು, ಉತ್ತರಾಧಿಕಾರಿ ನಿಯಮಗಳು, ವಿಚ್ಚೇದನ ನಿಮಯಗಳು ಮತ್ತು ತಮ್ಮನ್ನು ಲೈಂಗಿಕ ಅಲ್ಪಸಂಖ್ಯಾತರೆಂದು ಘೋಷಿಸಿ ವಿವಿಧ ರೀತಿಯ ಮೀಸಲಾತಿಯನ್ನು ಕೋರಬಹುದು. ಇದು ಅಂತ್ಯವಿಲ್ಲದ ವಿವಾದಗಳಿಗೆ ಕಾರಣವಾಗಿ ಮುಂದೆ ಸುಪ್ರೀಂ ಕೋರ್ಟ್‍ಗೆ ದೊಡ್ಡ ಸವಾಲಾಗಬಹುದು ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಸಾಯೀಶ್ವರ ಗುರುಜಿ ಧ್ವಾರಕಮಾಯಿ ಮಠ, ಓಂ ಶ್ರೀ ವಿದ್ಯಾನಂದ ಸರಸ್ವತಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.