ಮೇ.6ರಂದು ಬಿ.ಸಿ.ರೋಡಿನಲ್ಲಿ ಯೋಗಿ ಆದಿತ್ಯನಾಥ್ ರೋಡ್ ಶೋ

ಬಂಟ್ವಾಳ: ಇಲ್ಲಿನ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಲು ಉತ್ತರ ಪ್ರದೇಶದ ಮುಖ್ಯಮಂತ್ರಿ, ಸ್ಟಾರ್ ಪ್ರಚಾರಕ್ ಆಗಿರುವ ಯೋಗಿ ಆದಿತ್ಯನಾಥ್ ಅವರು ಮೇ.6ರಂದು ಶನಿವಾರ ಬಿ.ಸಿ.ರೋಡಿಗೆ ಆಗಮಿಸಲಿದ್ದು ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ತಿಳಿಸಿದರು.

ಅವರು ಗುರುವಾರ ಬಿಜೆಪಿ ಕಚೇರಿಯುಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಸಂಜೆ 4ಗಂಟೆಗೆ ಯೋಗಿಜೀ ಆಗಮಿಸಲಿದ್ದು ಸಂಜೆ 6 ಗಂಟೆಯವರೆಗೆ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೈಕಂಬದ ಪೆÇಳಲಿ ದ್ವಾರದ ಬಳಿಯಿಂದ ಬಿ.ಸಿ.ರೋಡು ಬಸ್ಸು ನಿಲ್ದಾಣದವರೆಗೆ ಬೃಹತ್ ರೋಡ್ ಶೋ ಮೆರವಣಿಗೆ ನಡೆಯಲಿದ್ದು ಬಳಿಕ ಬಿ.ಸಿ.ರೋಡಿನ ಖಾಸಗಿ ಬಸ್ಸು ನಿಲ್ದಾಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ, ಒಂದು ಬೂತ್‍ಗಳಿಂದ ಕನಿಷ್ಠ 100 ಮಂದಿ ಕಾರ್ಯಕರ್ತರು ಭಾಗವಹಿಸುವ ಬಗ್ಗೆ ನಿರ್ಧರಿಸಲಾಗಿದ್ದು ಬಂಟ್ವಾಳ ಕ್ಷೇತ್ರದಿಂದ ಸುಮಾರು 30 ರಿಂದ 40 ಸಾವಿರ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಯೋಗಿ ಆದಿತ್ಯನಾಥ್ ಅವರ ವಿಶೇಷ ಭದ್ರತೆಯ ದೃಷ್ಟಿಯಿಂದ ಆ ದಿನ ಸಂಜೆ 4 ಗಂಟೆಯಿಂದ 6ಗಂಟೆವರೆಗೆ ನಗರದಲ್ಲಿ ವಾಹನ ಸಂಚಾರ ನಿಷೇಧಿಸಲಿದ್ದು ಪರ್ಯಾಯ ವ್ಯವಸ್ಥೆಯನ್ನು ಪೆÇಲೀಸ್ ಇಲಾಖೆ ಕಲ್ಪಿಸಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಪಕ್ಷ ಪ್ರಮುಖರಾಧ ಎ. ಗೋವಿಂದ ಪ್ರಭು, ಹರಿದಾಸ್, ಚಿದಾನಂದ ರೈ ಕಕ್ಯ, ರವೀಶ್ ಶೆಟ್ಟಿ ಕರ್ಕಳ, ಪುರುಷೋತ್ತಮ ಶೆಟ್ಟಿ ವಾಮದಪದವು ಉಪಸ್ಥಿತರಿದ್ದರು.

Related Posts

Leave a Reply

Your email address will not be published.