ಬಂಟ್ವಾಳ: ಫೆ. 10ರಿಂದ 13ರ ವರೆಗೆ ಕೊರಂಟಬೆಟ್ಟುಗುತ್ತು ಶ್ರೀ ವಿಷ್ಣುಮೂರ್ತಿ, ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ಬ್ರಹ್ಮ ಬೈದರ್ಕಳ ಜಾತ್ರೆ

ಬಂಟ್ವಾಳ: ಫೆ. 10ರಿಂದ 13ರ ವರೆಗೆ ಕೊರಂಟಬೆಟ್ಟುಗುತ್ತು ಶ್ರೀ ವಿಷ್ಣುಮೂರ್ತಿ, ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ಬ್ರಹ್ಮ ಬೈದರ್ಕಳ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ.
ಫೆಬ್ರವರಿ 10ರಂದು ಸಂಜೆ ಮಹಮ್ಮಾಯಿ ದೇವರ ರಾಶಿ ಪೂಜೆ, ನರ್ತನ ಸೇವೆ, ವಿಷ್ಣುಮೂರ್ತಿ ದೈವದ ನೇಮ, ಫೆಬ್ರವರಿ 11ರಂದು ಬೆಳಿಗ್ಗೆ ನಾಗದೇವರಿಗೆ ತಂಬಿಲ ಸೇವೆ, ಆಶ್ಲೇಷ ಬಲಿ, ಕ್ಷೇತ್ರದ ಎಲ್ಲಾ ದೈವಗಳಿಗೆ ಕಲಶ ಪರ್ವ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 8 ಕ್ಕೆ ಶ್ರೀ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಸಂಕ್ರಾಂತಿ ಸೇವೆ, ಅನ್ನಸಂತರ್ಪಣೆ, ಶ್ರೀ ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡಿ, ಧೂಮ್ರ-ಧೂಮಾವತಿ, ರಕ್ತೇಶ್ವರಿ, ಮೈಸಂದಾಯ, ಕಲ್ಕುಡ ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ನಡೆಯಲಿದೆ.
ಫೆಬ್ರವರಿ 12ರಂದು ರಾತ್ರಿ 8ಕ್ಕೆ ಅನ್ನಸಂತರ್ಪಣೆ, ಬೈದರ್ಕಳು ಒಲಿ ಮರೆಯಿಂದ ಹೊರಡುವುದು, ಬೈದರ್ಕಳು ಬಾಕಿಮಾರು ಗದ್ದೆಗೆ ಇಳಿಯುವುದು, ಬೈದರ್ಕಳ ಪಾತ್ರಿಗಳು ದರ್ಶನವಾಗಿ ಸುರ್ಯ ಹಾಕಿಕೊಳ್ಳುವುದು, ಬೈದರ್ಕಳು ಬಾಕಿಮಾರಿನಿಂದ ಗರಡಿಗೆ ಬಂದು ದರ್ಶನವಾಗಿ ಸುರ್ಯ ಹಾಕಿಕೊಳ್ಳುವುದು, ಮಾಯಾಂದತಿ ದೇವಿಯ ನೇಮೋತ್ಸವ ನಡೆಯಲಿದೆ.
ರಾತ್ರಿ 10 ರಿಂದ ಗರಡಿ ಫ್ರೆಂಡ್ಸ್ ಕೊರಂಟಬೆಟ್ಟು ಪ್ರಾಯೋಜಕತ್ವದಲ್ಲಿ‌ ಶ್ರೀ ಆದಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಮೇಳದವರಿಂದ ಗರೋಡಿದ ಸತ್ಯೊಲು ಯಕ್ಷಗಾನ ಬಯಲಾಟ ನಡೆಯಲಿದೆ.
ಸದ್ಭಕ್ತರೆಲ್ಲರೂ ಆಗಮಿಸಿ ತನುಮನಧನಗಳಿಂದ ಸಹಕರಿಸಿ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ ಶ್ರೀ ದೈವ-ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಅಧ್ಯಕ್ಷರಾದ ಸದಾನಂದ ಪೂಜಾರಿ ಕೊರಂಟಬೆಟ್ಟುಗುತ್ತು ಹಾಗೂ ಕಾರ್ಯದರ್ಶಿ ಎ.ಕೃಷ್ಣಪ್ಪ ಪೂಜಾರಿ ಆಲದಪದವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts

Leave a Reply

Your email address will not be published.