ಶ್ರೀ ಕ್ಷೇತ್ರ ಬಲಿಪತೋಟ ಶ್ರೀ ದೈವರಾಜ ಬಬ್ಬುಸ್ವಾಮಿ ದೈವಸ್ಥಾನ ಜ.28ರಿಂದ 30ರ ವರೆಗೆ ವರ್ಷಾವಧಿ ನೇಮೋತ್ಸವ
ಮಂಗಳೂರಿನ ಬಿಜೈನ ಭಾರತೀನಗರದ ಶ್ರೀ ಕ್ಷೇತ್ರ ಬಲಿಪತೋಟ ಶ್ರೀ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದ ಶ್ರೀ ದೈವರಾಜ ಬಬ್ಬುಸ್ವಾಮಿ ತನ್ನಿಮಾನಿಗ ಹಾಗೂ ಧೂಮಾವತಿ ಬಂಟ ಸಪರಿವಾರ ದೈವಗಳ ವರ್ಷಾವಧಿ ನೇಮೋತ್ಸವ ನವಕಲಶಾಭಿಷೇಕ ಜನವರಿ 28ರಿಂದ 30ರ ವರೆಗೆ ನಡೆಯಲಿದೆ.

ಜನವರಿ 28ರ ಶನಿವಾರದಂದು ಬೆಳಿಗ್ಗೆ 8 ಗಂಟೆಗೆ ನವಕಲಶಾಭಿಷೇಕ, ಗಣಹೋಮ, ಚಪ್ಪರ ಮುಹೂರ್ತ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಸಂಜೆ 5ಕ್ಕೆ ಶ್ರೀ ಕಂಬೇರ್ಲು ದರ್ಶನ ನಂತರ ಭಂಡಾರ ಏರುವುದು. ಸಂಜೆ 7 ಗಂಟೆಗೆ ಶ್ರೀ ರಾಜ್ಯದ ಗುಳಿಗ ದೈವದ ನೇಮೋತ್ಸವ ರಾತ್ರಿ 10.30ಕ್ಕೆ ಶ್ರೀ ದೈವರಾಜ ಬಬ್ಬುಸ್ವಾಮಿ ಮತ್ತು ಶ್ರೀ ತನ್ನಿಮಾನಿಗ ದೈವಗಳ ನೇಮೋತ್ಸವ ನಡೆಯಲಿದೆ.

ಜನವರಿ 29ರಂದು ಸಂಜೆ 5 ಗಂಟೆಗೆ ಶ್ರೀ ಪಂಜುರ್ಲಿ ದೈವದ ನೇಮೋತ್ಸವ, ರಾತ್ರಿ 10 ಗಂಟೆಗೆ ಶ್ರೀ ಧೂಮಾವತಿ-ಬಂಟ ದೈವಗಳ ನೇಮೋತ್ಸವ, 12 ಗಂಟೆಗೆ ಗಡುಪೂಜೆ ನಂತರ ಶ್ರೀ ಪಿಲಿಚಾಮುಂಡಿ ದೈವಗಳ ನೇಮೋತ್ಸವ ಜರುಗಲಿರುವುದು.

ಜನವರಿ 30ರ ಸೋಮವಾರದಂದು ಬೆಳಿಗ್ಗೆ 11.30ಕ್ಕೆ ಶ್ರೀ ರಾಹುಗುಳಿಗ ದೈವದ ನೇಮೋತ್ಸವ ನಂತರ ಶ್ರೀ ಮಾಯಾಳು ದೈವಗಳ ನೇಮೋತ್ಸವ ಹಾಗೂ ದೈವಗಳ ಭಂಡಾರ ಇಳಿಸುವುದು ನಂತರ ಪ್ರಸಾದ್ ವಿತರಣೆ ನಡೆಯಲಿರುವುದು. ತಾವೆಲ್ಲರೂ ಸಪರಿವಾರ ಸಮೇತರಾಗಿ ಆಗಮಿಸಿ ಶ್ರೀ ದೈವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ಅಧ್ಯಕ್ಷರು, ಗುರಿಕಾರರು ಮತ್ತು ಸರ್ವ ಸದಸ್ಯರು ಅಪೇಕ್ಷಿಸಿದ್ದಾರೆ.


















