ಕಿಟಕಿ ಪೊರಂನಲ್ಲಿ ಸಿಲುಕಿಕೊಂಡ ವಿಶೇಷಚೇತನ ಬಾಲಕನ ರಕ್ಷಣೆ
ಉಡುಪಿ: ಉಡುಪಿ ನಗರದ ಬ್ರಹ್ಮಗಿರಿಯ ಅಪಾರ್ಟ್ಮೆಂಟ್ ನ ಕಿಟಕಿ ಪೊರಂನಲ್ಲಿ ಎಂಟು ವರ್ಷದ ವಿಶೇಷಚೇತನ ಬಾಲಕ ಸಿಲುಕಿಕೊಂಡಿರುವ ಘಟನೆ ನಡೆದಿದೆ. 11ನೇ ಮಹಡಿಯ ಬಾಲ್ಕನಿ ಮೂಲಕ ಹೊರ ಹೋಗಿ 10ನೇ ಮಹಡಿಯ ಕಿಟಕಿ ಪೋರಂನಲ್ಲಿ ಸಿಲುಕಿಕೊಂಡಿದ್ದ ಆರುಷ್ ಎಂಬ ಬಾಲಕನನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಅಗ್ನಿಶಾಮಕ ದಳದ ಯಶಸ್ವಿ ಕಾರ್ಯಚರಣೆಯಿಂದ ಆರುಷ್ ಪೋಷಕರು ನಿಟ್ಟುಸಿರು ಬಿಟ್ಟರು.