ಜೈನ ಮುನಿಗಳ ಹತ್ಯೆಗೆ ಪೇಜಾವರ ಶ್ರೀಗಳು ಖಂಡನೆ

ಉಡುಪಿ : ಜೈನ ಮುನಿಗಳ ಹತ್ಯೆಯನ್ನು ಖಂಡಿಸಿ ಇಂದು ಉಡುಪಿಯಲ್ಲಿ ಮಾತನಾಡಿದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು, ವಿಚಾರ ತಿಳಿದು ನನಗೆ ಅತೀವ ದುಃಖವಾಗಿದೆ. ಇದು ಜನತೆಯಲ್ಲಿ ಗಾಬರಿ ಹುಟ್ಟಿಸುವ ಘಟನೆ. ಓರ್ವ ಸಾಧುವನ್ನು ಸ್ವತಂತ್ರ ಭಾರತದಲ್ಲಿ ಈ ರೀತಿ ಹತ್ಯೆ ಮಾಡಿರುವುದು ದುರಂತ. ಹೀಗಾದರೆ ಸಾಮಾನ್ಯ ಜನರ ಪಾಡೇನು? ಇಂತಹ ಕೃತ್ಯ ಎಂದೂ ಎಲ್ಲೆಲ್ಲೂ ನಡೆಯಬಾರದು. ಈ ಘಟನೆಯನ್ನು ತೀಕ್ಷ್ಣ ಮಾತುಗಳಿಂದ ಖಂಡಿಸುತ್ತೇವೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಮತ್ತು ಮುಂದೆ ಇಂತಹ ಘಟನೆ ಆಗದಂತೆ ತಕ್ಕ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Related Posts

Leave a Reply

Your email address will not be published.