ವಿಟ್ಲ : ಕಾರು ಅಪಘಾತ – ಚಾಲಕಿಗೆ ಗಾಯ
ವಿಟ್ಲ: ಡಿವೈಡರ್ ಮೇಲಿನಿಂದ ಹಾರಿದ ಕಾರೊಂದು ವಿರುದ್ಧ ಬದಿಯಲ್ಲಿ ಬರುತ್ತಿದ್ದ ಬೇರೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರು ಚಾಲಕಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವಿಟ್ಲದಲ್ಲಿ ನಡೆದಿದೆ.
ಸೂರಿಕುಮೇರು ಪೆಟ್ರೋಲಿಯಂ ಪಂಪ್ ಮುಂಭಾಗದಲ್ಲಿ ಈ ಅಪಘಾತ ಸಂಭವಿಸಿದೆ. ಬಂಟ್ವಾಳ ಬಿಸಿರೋಡು ನಿವಾಸಿ ರಮ್ಯ ಅವರು ಕಾರಿನಲ್ಲಿ ಬಿಸಿರೋಡಿನಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ಮೇಲೆ ಹತ್ತಿ ಕೆಳಗೆ ರಸ್ತೆಗೆ ಇಳಿದು ಎದುರಿನಿಂದ ಬರುತ್ತಿದ್ದ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ.
ಗಾಯಾಳು ಚಾಲಕಿ ರಮ್ಯಾ ಅವರು ಕಾರಿನಲ್ಲಿ ಒಬ್ಬರೇ ಇದ್ದು, ಅವರನ್ನು ಬಿಸಿ ರೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳೀಯ ಪೆÇಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.