ಕಾರ್ಕಳ ಬಸ್ ನಿಲ್ದಾಣ : ಒಳಚರಂಡಿ ನೀರು ಸೋರಿಕೆಯಾಗಿ ಜನಸಾಮಾನ್ಯರಿಗೆ ತೊಂದರೆ

ಕಾರ್ಕಳ ಪುರಸಭೆ ವ್ಯಾಪ್ತಿಯ ಬಂಡಿಮಠ ಬಸ್ಸು ನಿಲ್ದಾಣದ ಎದುರು ಒಳಚರಂಡಿಯ ಮಲಿನ ನೀರು ಸೋರಿಕೆಯಾಗಿ ಉಂಟಾಗುವ ಅವಾಂತರಗಳು ಹೇಳತಿರದು. ಇಲ್ಲಿಯ ಕೊಳಚೆ ನೀರು ಸೋರಿಕೆ ಹೊರಚಿಮ್ಮಿ ರಸ್ತೆ ಮೇಲೆ ಹರಿಯುತ್ತಿರುವುದಲ್ಲದೆ ಪರಿಸರ ಮಾಲಿನ್ಯಗೊಂಡು ಸುತ್ತಮುತ್ತಲಿನ ಪ್ರದೇಶ ಗಬ್ಬೆದ್ದು ನಾರುತಿದೆ. ಬಂಡಿಮಠ ಬಸ್ ನಿಲ್ದಾಣ ಮುಂಭಾಗ ಹೆದ್ದಾರಿಯಲ್ಲಿ ಎರಡು ಕಡೆ ಚರಂಡಿಯಿಂದ ನೀರು ಸೋರಿಕೆಯಾಗುತ್ತದೆ.

ಹೆದ್ದಾರಿಯಲ್ಲಿ ಸಹಸ್ರಾರು ವಾಹನಗಳು ನಿತ್ಯ ಓಡಾಟ ನಡೆಸುತ್ತವೆ. ಆವಾಗೆಲ್ಲ ಕೊಳಚೆ ನೀರಿನ ಮೇಲೆ ವಾಹನಗಳು ಸಾಗುತ್ತೇವೆ. ಈ ಜಾಗದಲ್ಲಿ ವಾಹನಗಳು ಬರದಿಂದ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಬದಿಯಲ್ಲಿ ನಿಂತ ಪ್ರಯಾಣಿಕರ ಮೇಲೆ ಹಾಗೂ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಮೇಲೆ ಈ ಮಲಿನ ನೀರಿನ ಅಭಿಷೇಕ ಆಗುತ್ತದೆ.

ಕಾರ್ ಟ್ಯಾಕ್ಸಿ ಚಾಲಕರಾದ ಸಂತೋಷ್ ಮಾತನಾಡಿ ಬಂಡಿಮಠ ದಲ್ಲಿ ಮಳೆಗಾಲದ ಸಮಯದಲ್ಲಿ ವಾಹನ ನಿಲ್ಲಿಸಿ ಬಾಡಿಗೆದಾರರನ್ನು ಕಾಯುವುದೇ ಒಂದು ಸಮಸ್ಯೆಯಾಗಿದೆ. ಕೊಳಚೆ ನೀರಿನ ದುರ್ವಾಸನೆಯಿಂದಾಗಿ ಇತ್ತ ಕಡೆ ಬಾಡಿಗೆಗೆ ವಾಹನಗಳನ್ನು ಬುಕ್ ಮಾಡಲು ಇತ್ತ ಬರುವುದಿಲ್ಲ. ಈ ಸಮಸ್ಯೆ ಕೆಲವು ವರ್ಷಗಳಿಂದ ಇದೆ. ಮಳೆಗಾಲ ಪ್ರಾರಂಭವಾದಾಗ ಪುರ ಸಭೆಯವರು ಎಚ್ಚೆತ್ತು ಚೇಂಬರ್‍ನೊಳಗೆ ದೊಡ್ಡ ಮರದ ದಿಮ್ಮಿಯನ್ನು ಹುದುಗಿಸಿಟ್ಟು ತಮ್ಮ ಜಾಣತನವನ್ನು ಪ್ರದರ್ಶಿಸುತ್ತಾರೆ ಎಂದು ಹೇಳಿದರು.

Related Posts

Leave a Reply

Your email address will not be published.