ಬೈಂದೂರು : ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ -ನೆಂಪು ಇವರ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟ

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬೈಂದೂರು ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ -ನೆಂಪು ಇವರ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ -ನೆಂಪು ಶಾಲಾ ವಠಾರದಲ್ಲಿ ಸಂಭ್ರಮದಲ್ಲಿ ನಡೆಯಿತು ಜಿಲ್ಲಾ ದೈಹಿಕ ಶಿಕ್ಷಕ ಪರಿವೀಕ್ಷಣಾಧಿಕಾರಿ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ
ಕ್ರೀಡೆಯಲ್ಲಿ ಭಾಗವಹಿಸುವುದು ಮಹತ್ವದ್ದೇ ಹೊರತು, ಸೋಲು–ಗೆಲುವು ಮುಖ್ಯವಲ್ಲ. ಕ್ರೀಡಾಪಟುಗಳು ಶಿಸ್ತು, ಸಮಯವನ್ನು ಪಾಲಿಸಬೇಕು. ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ರಾಜ್ಯ,ರಾಷ್ಟ್ರಮಟ್ಟದಲ್ಲಿ ಸಾಧನೆ ತೋರಬೇಕು’ ಇಂದು ಶಾಲೆಯಲ್ಲಿ ಅದ್ಭುತ ಕಾರ್ಯಕ್ರಮನ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದಿಸಿದರು.

ರಾಜೀವ ಶೆಟ್ಟಿ ಅಧ್ಯಕ್ಷರು ಗ್ರಾಮ ಪಂಚಾಯತ್ ಕರ್ಕುಂಜೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು.ವಾಲಿಬಾಲ್ ಪಂದ್ಯಾಟದಲ್ಲಿ ಸುಮಾರು 18 ತಂಡಗಳು ಭಾಗವಹಿಸಿದ್ದು..ಇಲ್ಲಿ ವಿಜೇತವಾದ ಬಾಲಕ, ಬಾಲಕಿಯರ ತಂಡಗಳು ಸೆಪ್ಟೆಂಬರ್ 3ನೇ ತಾರೀಕು ಸರಕಾರಿ ಪ್ರೌಢಶಾಲೆ ಕಾವಡಿ ಬ್ರಹ್ಮವಾರ ನಡೆಯುವ ಜಿಲ್ಲಾ ಮಟ್ಟದ ಪಂದ್ಯಕೂಟಕ್ಕೆ ಆಯ್ಕೆಯಾಗುತ್ತಾರೆ.ವಿಜಯ್ ಕುಮಾರ್ ಶೆಟ್ಟಿ ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷಣಾಧಿಕಾರಿ ಪ್ರಾಸ್ತವಿಕ ಮಾತನಾಡಿದರು .
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಕೃಷ್ಣರಾಜ್ ಭಟ್, ಹಳೆ ವಿದ್ಯಾರ್ಥಿಗಳ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ, ಎಸ್ ಡಿ ಎಮ್ ಸಿ ಸದಸ್ಯರಾದ ರಾಘವೇಂದ್ರ ನೆಂಪು, ಶ್ರೀಮತಿ ವೈಶಾಲಿ ಶ್ರೀಮತಿ ಸವಿತಾ ರಾಜೇಂದ್ರ, ಶಾಲೆ ಹಳೆ ವಿದ್ಯಾರ್ಥಿ ಟ್ರೋಪಿ ಪ್ರಾಯೋಜಕರಾದ ಶಶಿಧರ್ ಶೆಟ್ಟಿ, ಪ್ರಾಥಮಿಕ ವಿಭಾಗ ಮುಖ್ಯ ಶಿಕ್ಷಕರು ಕುಪ್ಪಯ್ಯ ಮರಾಠಿ, ಜಿಲ್ಲಾ ದೈಹಿಕ ಶಿಕ್ಷಕ ಸಂಘದ ಉಪಾಧ್ಯಕ್ಷರು ರವಿಶಂಕರ್ ಹೆಗ್ಡೆ, ಅರುಣ್ ಕುಮಾರ್ ಶೆಟ್ಟಿ ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರು, ಮಂಜುನಾಥ್ ಶೆಟ್ಟಿ ದೈಹಿಕ ಶಿಕ್ಷಕರು ಉಪ್ಪುಂದ
