Home ಕರಾವಳಿ Archive by category ಉಡುಪಿ (Page 17)

ಬೈಂದೂರು: ರಾಷ್ಟ್ರೀಯ ದಾಖಲೆ ಗೈದ ಮಣಿಕಂಠ ಹೋಬಳಿದಾರ್ ಅವರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ನೇತೃತ್ವದಲ್ಲಿ 62ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ ಸರ್ವಿಸಸ್ ತಂಡವನ್ನು ಪ್ರತಿನಿಧಿಸಿ 100ಮೀ ಓಟದಲ್ಲಿ ಭಾರತದ ಅತ್ಯಂತ ವೇಗದ ಓಟಗಾರರಾಗಿ ದಾಖಲೆ ಮಾಡಿ ಚಿನ್ನದ ಪದಕ ಪಡೆದ ಮಣಿಕಂಠ ಹೋಬಳಿದಾರ್ ಇವರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ಬೈಂದೂರು ಶಾರದಾ

ಉಡುಪಿ ; ನಾಲ್ವರ ಕೊಲೆ ಪ್ರಕರಣ, ಆರೋಪಿ ಪ್ರವೀಣ್ ಬಂಧನ

ನೇಜಾರು ಸಮೀಪ ತಾಯಿ ಮತ್ತು ಮೂವರು ಮಕ್ಕಳ ಬರ್ಬರ ಹತ್ಯೆ ಪ್ರಕರಣದ ಆರೋಪಿಯನ್ನು ಬೆಳಗಾವಿಯಲ್ಲಿ ಪೆÇಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಪ್ರವೀಣ್ ಚೌಗಲೆ (35) ಎಂಬಾತನನ್ನು ಬಂಧಿಸಿರುವುದಾಗಿ ವರದಿಯಾಗಿದೆ. ಈತ ಮಹಾರಾಷ್ಟ್ರದ ಸಾಂಗ್ಲಿ ಮೂಲದವನು ಎಂದು ತಿಳಿದುಬಂದಿದೆ. ಆರೋಪಿ ಪ್ರವೀಣ್ ಅರುಣ್ ಚೌಗಲೆ ಕುಡಚಿ ಮೂಲಕ ಮಹಾರಾಷ್ಟ್ರ ಅಥವಾ ಆಂಧ್ರಪ್ರದೇಶಕ್ಕೆ ಪರಾರಿಯಾಗಲು ಹೊಂಚು ಹಾಕಿದ್ದ ಎನ್ನಲಾಗಿದೆ. ಪ್ರವೀಣ್ ಅರುಣ್

ಬೈಂದೂರು: ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಸಂಭ್ರಮ

ಬೈಂದೂರು ಪೊಲೀಸ್ ಠಾಣೆಯಲ್ಲಿ ಗಣಹೋಮ, ನಾಗದೇವರ ಪೂಜೆ, ಆಯುಧ ಪೂಜೆ ಹಾಗೂ ವಾಹನ ಪೂಜಾ ಕೈಂಕರ್ಯಗಳು ವಿಶೇಷ ಹೂವಿನ ಅಲಂಕಾರದೊಂದಿಗೆ ಅತ್ಯಂತ ವಿಶಿಷ್ಠವಾಗಿ ಆಚರಿಸಲಾಯಿತು. ಸಮವಸ್ತ್ರಧಾರಿ ಇಲಾಖೆಯ ಸಿಬ್ಬಂದಿಗಳು ಪೂಜೆಯ ಅಂಗವಾಗಿ ಅಪ್ಪಟ ಭಾರತೀಯ ಶೈಲಿಯ ಉಡುಗೆಯನ್ನು ತೊಟ್ಟು ಗಮನ ಸೆಳೆದರು. ಠಾಣೆ ಸಿಬ್ಬಂದಿಗಳು ಭಾವೈಕ್ಯತೆ ಮೂಡಿಸುವ ಹಾಗೂ ಪರಸ್ಪರ ವಿಶ್ವಾಸ ಹೆಚ್ಚಿಸುವ ಕಲ್ಪನೆಯಲ್ಲಿ ಸಿಬ್ಬಂದಿಗಳು ಒಂದೇ ರೀತಿಯ ಸಮವಸ್ತ್ರ ಧರಿಸಿದರು. ಠಾಣೆಯ ವೃತ್ತ

ಉಡುಪಿ ; ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ – ಇಂದು ಅಂತ್ಯಕ್ರಿಯೆ

ಉಡುಪಿ: ನೇಜಾರು ಸಮೀಪದ ತೃಪ್ತಿ ನಗರದಲ್ಲಿ ನಿನ್ನೆ ಹತ್ಯೆಗೊಳಗಾದ ಒಂದೇ ಕುಟುಂಬದ ನಾಲ್ವರ ಅಂತ್ಯಕ್ರಿಯೆ ಇಂದು ನಡೆಯಲಿದೆ. ಉಡುಪಿಯ ಜಾಮಿಯಾ ಮಸೀದಿ ಸಮೀಪದ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ನಿನ್ನೆ ರಾತ್ರಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆದಿದ್ದು, ಇಂದು ಆಸ್ಪತ್ರೆಯಿಂದ ಅಂತ್ಯಕ್ರಿಯೆಯ ಹಿನ್ನೆಲೆಯಲ್ಲಿ ತೆಗೆದುಕೊಂಡು ಬರಲಾಗಿದೆ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಅವರು ತನಿಖೆಗಾಗಿ ಐದು

ಗಂಗೊಳ್ಳಿ : ಮೀನುಗಾರಿಕ ಬೋಟಿಗೆ ಬೆಂಕಿ : ಅಪಾರ ನಷ್ಟ

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಗಂಗೊಳ್ಳಿಯ ಮ್ಯಾಗನೀಸ್ ರಸ್ತೆಯಲ್ಲಿ ಮೀನುಗಾರಿಕ ಬೋಟಿಗೆ ಬೆಂಕಿ ತಗುಲಿದ ಘಟನೆ ನಡೆದಿದೆ. ದುರ್ಘಟನೆಯು ಪಟಾಕಿಯ ಕಿಡಿಯಿಂದ ಸಂಭವಿಸಲಾಗಿದೆ ಎಂದು ಶಂಕಿಸಲಾಗಿದೆ. ಇದರಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ. ಯಾವುದೇ ಸಾವು-ನೋವು ಉಂಟಾಗಿಲ್ಲ. ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಉಡುಪಿ: ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ: ದರೋಡೆಗೆ ಬಂದವರ ಕೃತ್ಯ ಶಂಕೆ!

ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನಲ್ಲಿ ನಡೆದಿದೆ. ನಾಲ್ವರ ಹತ್ಯೆ ಹಿಂದೆ ದರೋಡೆ ಕೃತ್ಯದ ಶಂಕೆ ವ್ಯಕ್ತವಾಗಿದೆ. ಹಬ್ಬದ ದಿನ ಈ ಸುದ್ದಿ ಕೇಳಿ ಜನ ಬೆಚ್ಚಿ ಬಿದ್ದಿದ್ದಾರೆ. ಮನೆಗೆ ನುಗ್ಗಿ ತಾಯಿ ಹಾಗೂ ಮೂವರು ಮಕ್ಕಳನ್ನು ಹತ್ಯೆ ಮಾಡಲಾಗಿದೆ. ಈ ಮನೆಯ ಯಜಮಾನ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಮನೆಯಲ್ಲಿದ್ದ ಮೂವರು ಮಕ್ಕಳು ಮತ್ತು ತಾಯಿಯನ್ನು ಚೂರಿಯಲ್ಲಿ ಇರಿದು ಕೊಲೆಗೈಯಲಾಗಿದೆ.

ಬೈಂದೂರು: ದೇಶ ಕಾಯುವ ವೀರ ಯೋಧರಿಗೆ ವಿದ್ಯಾರ್ಥಿಗಳಿಂದ ದೀಪಾವಳಿ ಹಬ್ಬದ ಶುಭಾಶಯ ಪತ್ರ

ಬೈಂದೂರು: ಸಮೃದ್ಧ ಬೈಂದೂರು ಪರಿಕಲ್ಪನೆ ಅಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸೈನಿಕರಿಗೆ ದೀಪಾವಳಿ ಶುಭಾಶಯ ಕೋರುವ ಅವಕಾಶ ಒಂದನ್ನು ಆಯೋಜಿಸಿದ್ದು, ಸಾವಿರಾರು ವಿದ್ಯಾರ್ಥಿಗಳು ದೇಶ ಕಾಯುವ ಯೋಧರಿಗೆ ದೀಪಾವಳಿ ಶುಭಾಶಯ ಪತ್ರ ಬರೆಯಲು ಉತ್ಸಾಹದಿಂದ ಪಾಲ್ಗೊಂಡಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನೂರಾರು ವಿದ್ಯಾರ್ಥಿಗಳ ಪತ್ರವು ಸಮೃದ್ಧ ಬೈಂದೂರು ತಂಡವನ್ನು ತಲುಪಿದ್ದು, ಕೆಲವು ಶಾಲೆಗಳಲ್ಲಿ ಶಿಕ್ಷಕರು ಉತ್ತಮವಾಗಿ ತೊಡಗಿಸಿಕೊಂಡು

ಉಡುಪಿ: ಹಿರಿಯ ಧೀಮಂತ ಪತ್ರಕರ್ತ ಶಶಿಧರ್ ಹೆಮ್ಮಣ್ಣ ಇನ್ನಿಲ್ಲ.

ಉಡುಪಿ: ಹಿರಿಯ ಪತ್ರಕರ್ತ ಶಶಿಧರ್ ಹೆಮ್ಮಣ್ಣ (57) ಹೃದಾಯಘಾತದಿಂದ ನಿಧನ ಹೊಂದಿದ್ದಾರೆ. ಗುರವಾರ ಬೆಳಿಗ್ಗೆ ಉಡುಪಿಯ ಮನೆಯಲ್ಲಿದ್ದಾಗ ಧಿಢೀರಾಗಿ ಎದೆನೋವು ಕಾಣಿಸಿಕೊಂಡಿದ್ದು ಅವರನ್ನ ನಗರದ ಅಸ್ಪತ್ರೆಗೆ ತೋರಿಸಿದಾಗ ಹೃದಯಾಘಾತ ಅಗಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಅಸ್ಪತ್ರೆಗೆ ಅಂಬುಲ್ಯಾನ್ಸ್ ನಲ್ಲಿ ಕರೆದಯ್ತೂತ್ತಿದ್ದಾಗ ದಾರಿ ಮದ್ಯೆ ಹೆಮ್ಮಣ್ಣ ತೀವ್ರ ಅಸ್ವಸ್ಥ ಗೊಂಡಿದ್ದರು.ಮಣಿಪಾಲ ಅಸ್ಪತ್ರೆಯಲ್ಲಿ ತೀವ್ರ ನಿಗಾ

ಅರಬ್ಬಿ ಸಮುದ್ರದಲ್ಲಿ ನೀರು ಪಾಲಾಗಿದ್ದ ಮೀನುಗಾರನ ರಕ್ಷಣೆ

ಅರಬ್ಬಿ ಸಮುದ್ರದಲ್ಲಿ ಸಮುದ್ರ ಪಾಲಾಗಿದ್ದ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೋರ್ವನನ್ನು ಗಂಗೊಳ್ಳಿ ಮೀನುಗಾರರ ರಕ್ಷಿಸಿದ ಘಟನೆ ನಡೆದಿದೆ. ಸುಮಾರು 25 ವರ್ಷಪ್ರಾಯದ ಮುರುಗನ್ ಎಂಬಾತ ಸದ್ಯ ಪವಾಡ ಸದೃಶ್ಯವಾಗಿ ಬದುಕುಳಿದ ಮೀನುಗಾರ. ಗಂಗೊಳ್ಳಿಯಿಂದ ಮೀನುಗಾರಿಕೆ ಕತೆಗಳಿದ್ದ 30 ಜನರಿದ್ದ ಬೋಟ್ ನವರಿಗೆ ಸುಮಾರು 14 ನಾಟಿಕಲ್ ಮೈಲ್ ದೂರದಲ್ಲಿ ವ್ಯಕ್ತಿಯೋರ್ವ ಸಮುದ್ರದಲ್ಲಿ ಈಜುತ್ತಿರುವುದು ಕಂಡುಬಂದಿದೆ. ಹತ್ತಿರಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಸಮುದ್ರದ

ಬೈಂದೂರು: ಅಕಾಲಿಕ ಮಳೆಯಿಂದಾಗಿ ಭತ್ತದ ಕೃಷಿಗೆ ಜಲ ದಿಗ್ಬಂಧನ

ಬೈಂದೂರು ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಭತ್ತದ ಫಸಲು ಸಂಪೂರ್ಣ ನಾಶವಾಗಿದೆ. ಇದರಿಂದಾಗಿ ಕೃಷಿಕರು ಕಂಗಾಲಾಗಿ ದಿಕ್ಕು ತೋಚದಂತಾಗಿದೆ. ಮಳೆಯಿಂದಾಗಿ ಕಟಾವಿಗೆ ಬಂದ ಭತ್ತದ ಪೈರುಗಳು ಹಾಗೂ ಕಟಾವಿನ ನಂತರ ಜಾನುವಾರುಗಳ ಒಣ ಹುಲ್ಲುಗಳು, ಜೊತೆಗೆ ಕಟಾವಿನ ನಡುವೆ ದ್ವಿದಳ ಧಾನ್ಯಗಳನ್ನು ಸಹ ಈಗಾಗಲೇ ಬಿತ್ತನೆ ಮಾಡಿದ್ದು, ಅದು ಕೂಡ ಮಳೆಯಿಂದ ಹಾನಿಯಾಗಿ ಅಪಾರವಾದ ಬೆಳೆ ಹಾಗೂ ಜಾನುವಾರುಗಳ ಮೇವಿನ ಹುಲ್ಲುಗಳು ಹಾನಿಯಾಗಿದೆ. ಕೋಣ್ಕಿ, ಬಡಾಕೆರೆ, ತಾರೀಬೇರು, ಜಡ್ಡಾಡಿ,