Home ಕರಾವಳಿ Archive by category ಉಡುಪಿ (Page 19)

ಉಡುಪಿ: ಬಯ್ ಹುಲ್ಲಿನ ಬೇಲ್, 50 ವರುಷದ ಹಿಂದಿನ ನೆನಪು

ನಾವು ಸಣ್ಣವರಿದ್ದಾಗ ಮನೆಯವರೆಲ್ಲ ಕೃಷಿ ಕಾರ್ಮಿಕರೆ. ಈಗ ಬೇಸಾಯ ಬಲ್ಲವರು ಕಡಿಮೆ. ಹೊಸ ತಲೆಮಾರು ಗದ್ದೆಗೆ ಇಳಿಯುವುದಿಲ್ಲ. ಆದರೆ ಕೃಷಿಗೆ ಯಂತ್ರಗಳ ಬಾಡಿಗೆ ನೆರವು ಧಾರಾಳ ಸಿಗುತ್ತದೆ. ಎಪ್ಪತ್ತರ ದಶಕದಲ್ಲಿ ಕೆಲವು ಇಂಗ್ಲಿಷ್ ಚಿತ್ರಗಳಲ್ಲಿ ಬೆಳೆಯ ಹುಲ್ಲಿನ ಕಟ್ಟು ಕಂಡಾಗ ಎಷ್ಟು ಅಚ್ಚುಕಟ್ಟು ಎಂದುಕೊಂಡದ್ದಿದೆ. ಈ ಒಣ ಹುಲ್ಲಿನ ಕಟ್ಟನ್ನು ಇಂಗ್ಲಿಷಿನಲ್ಲಿ

ಉಡುಪಿ: ಕೇರಳದಲ್ಲಿ ಬಾಂಬ್ ಸ್ಫೋಟ ವಿಚಾರ: ಕರಾವಳಿ ಗಡಿ ಭಾಗದಲ್ಲಿ ತೀವ್ರ ನಿಗಾ: ಗೃಹ ಸಚಿವ ಡಾ. ಜಿ. ಪರಮೇಶ್ವರ್

ಕೇರಳ ರಾಜ್ಯದ ಎರ್ನಾಕುಲಂನಲ್ಲಿ ಬಾಂಬ್ ಸ್ಫೋಟ ನಡೆದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೂಕ್ಷ್ಮವಾಗಿ ಗಮನಿಸಿದ್ದೇವೆ. ಕರಾವಳಿ ಭಾಗ ಮತ್ತು ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗುಪ್ತಚರ ಇಲಾಖೆ ತೀವ್ರ ನಿಗಾ ಇರಿಸುವಂತೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. ಅವರು ಉಡುಪಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಕರ್ನಾಟಕದಲ್ಲಿ ಬಾಂಬ್ ಸ್ಫೋಟದಂತಹ ಘಟನೆಗಳು ನಡೆಯಲು ಬಿಡಲ್ಲ. ಯಾವುದೇ ವ್ಯಕ್ತಿ ಅಥವಾ

ಕುಂದಾಪುರ: ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರ ಮನೆ ಮೇಲೆ ಲೋಕಾಯುಕ್ತ ದಾಳಿ

ಕುಂದಾಪುರ ಸಲೀಂ ಅಲಿ ರಸ್ತೆಯ ನಿವಾಸಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ರಾಜೇಶ್ ಬೆಳ್ಕೆರೆ ಮನೆ ಮೇಲೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ರಾಜೇಶ್ ಬೆಳ್ಕೆರೆಗೆ ಸಂಬಂಧಪಟ್ಟಂತೆ ಮೂರು ಕಡೆ ತಪಾಸಣೆ ನಡೆಸಲಾಗುತ್ತಿದೆ. ಸೋಮವಾರ ಬೆಳಿಗ್ಗೆ ಕುಂದಾಪುರದ ಸಲೀಂ ಅಲಿ ರಸ್ತೆಯಲ್ಲಿರುವ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ರಾಜೇಶ್ ಬೆಳ್ಕೆರೆ ಹಲವು ವರ್ಷದಿಂದ

ಉಡುಪಿ: ಉದ್ಯಾವರ ಸಾರ್ವಜನಿಕ ಶಾರದಾ ಸಮಿತಿಯಿಂದ ವೈಭವದ ಶೋಭಾಯಾತ್ರೆ

ಉಡುಪಿಯ ಉದ್ಯಾವರ ಸಾರ್ವಜನಿಕ ಶಾರದಾ ಸಮಿತಿಯ ಶಾರಾದ ವಿಸರ್ಜನಾ ವೈಭವದ ಮೆರವಣಿಗೆಯು ನಡೆಯಿತು.ವಿಸರ್ಜನಾ ಮೆರವಣಿಗೆಯಲ್ಲಿ ಹತ್ತಾರು ಟ್ಯಾಬ್ಲೋಗಳು, ಚಂಡೆ ವಾದ್ಯ ಮೇಳಗಳು ಭಾಗವಹಿಸಿದ್ದವು. ಉದ್ಯಾವರ, ಮೇಲ್ಪೇಟೆ ಮಾರ್ಗವಾಗಿ ಪಿತ್ರೋಡಿ ವರೆಗೆ ವೈಭವ ಮೆರವಣಿಗೆಯಲ್ಲಿ ಸಾಗಿ ಬಂದ ಶಾರದೆಯನ್ನು ಕಂಡು ಜನ ಭಕ್ತಿ ಪರವಶರಾದರು.ಇನ್ನೂ ವಿಶೇಷವಾಗಿ ಮೆರವಣಿಗೆಯಲ್ಲಿ ಚಂಡೆ ಹಾಗೂ ವಾಯಿಲಿನ್ ಫ್ಯೂಶನ್ ಸಂಗೀತದ ನಾದಕ್ಕೆ ಜನ ಮೈಮರೆತರು.

ಬ್ರಹ್ಮಾವರ : ಬಾಲಕಿಯರ ಯಕ್ಷಗಾನ ತಂಡದಿಂದ 1334 ಪ್ರದರ್ಶನ ಕಂಡ ಶ್ರೀ ಕೃಷ್ಣ ಪಾರಿಜಾತ ಯಕ್ಷಗಾನ

ಬ್ರಹ್ಮಾವರ : ಬ್ರಹ್ಮಾವರ ಬಳಿಯ ಚೇರ್ಕಾಡಿಯಲ್ಲಿ ಬಡಗುತಿಟ್ಟಿನ ಯಕ್ಷಗಾನ ಸವ್ಯಸಾಚಿ ಗುರು ಮಂಜುನಾಥ್ ಪ್ರಭು 32 ವರ್ಷದ ಹಿಂದೆ ಸ್ಥಾಪಿಸಿದ ಕಲಾಶ್ರೀ ಬಾಲಕಿಯರ ಯಕ್ಷಗಾನ ಮೇಳದವರಿಂದ ಶ್ರೀ ಕೃಷ್ಣ ಪಾರಿಜಾತ ಪ್ರಸಂಗ ನೀಲಾವರ ಶ್ರೀ ಮಹಿಷಮರ್ಧಿನೀ ದೇವಸ್ಥಾನದಲ್ಲಿ ಜರುಗಿತು. ಎಂಜಿನಿಯರಿಂಗ್ ಸೇರಿದಂತೆ ನಾನಾ ಉನ್ನತ ಶಿಕ್ಷಣ ಪಡೆಯುವ 7 ಯುವತಿಯರಿಂದ ಪ್ರದರ್ಶನ ಕಂಡ ಶ್ರೀ ಕೃಷ್ಣ ಪಾರಿಜಾತ ಪ್ರಸಂಗ ಯಕ್ಷಗಾನ ಈ ತಂಡದ 1334 ನೇ ಪ್ರದರ್ಶನವಾಗಿದೆ . ರಜಾ ದಿನದಲ್ಲಿ

ಪಡುಬಿದ್ರಿ: ಗೊಂದಲದೊಂದಿಗೆ ಆರಂಭಗೊಂಡ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮ

ನಾಮ್ಕಾವಸ್ಥೆಗೋ ಎಂಬಂತ್ತೆ ಸಮಾಜ ಕಲ್ಯಾಣ ಇಲಾಖೆ ಪಡುಬಿದ್ರಿಯಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ದಲಿತ ಮುಖಂಡರು ಕೇಳಲಾದ ಪ್ರಶ್ನೆಗೆ ಸ್ವತಃ ಅಧಿಕಾರಿಗಳೇ ಉತ್ತರಿಸಲಾಗದೆ ತಡವರಿಸಿದ ಘಟನೆ ನಡೆಯಿತು. ಸಮಾಜ ಕಲ್ಯಾಣ ಇಲಾಖೆ ಉಡುಪಿ, ಪಡುಬಿದ್ರಿ ಗ್ರಾಮ ಪಂಚಾಯಿತಿ ಹಾಗೂ ಪಡುಬಿದ್ರಿ ಪೊಲೀಸ್ ಠಾಣೆ ಜಂಟಿಯಾಗಿ ಆಯೋಜಿಸಿದ ಸಭಾ ಕಾರ್ಯಕ್ರಮದ ಸಭಾ ವೇದಿಕೆಗೆ ಹಾಕಲಾದ ಬ್ಯಾನರ್ ನಲ್ಲಿ ಅಸಾಮಾನತೆಯ ಬದಲಿಗೆ ದಲಿತರನ್ನು ನಿಂದಿಸುವ ಶಬ್ದ ಬಳಕೆ ಮಾಡಿದ್ದು ಸರಿಯೆ… ಎಂದು

ಉಡುಪಿ: ಅ.28 ಮತ್ತು 29ರಂದು ವಿಶ್ವ ಬಂಟರ ಸಮ್ಮೇಳನ-2023

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅ.28 ಮತ್ತು 29ರಂದು ವಿಶ್ವ ಬಂಟರ ಸಮ್ಮೇಳನ-2023 ಕ್ರೀಡಾ ಸಂಗಮ ಮತ್ತು ಸಾಂಸ್ಕೃತಿಕ ಸಂಭ್ರಮ ಉಡುಪಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಐಕಳ ಹರೀಶ್ ಶೆಟ್ಟಿ ಹೇಳಿದರು. ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಅಕ್ಟೋಬರ್ 28ರಂದು ಬೃಹತ್ ಮೆರವಣಿಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಳಿಗ್ಗೆ 9ಗಂಟೆಗೆ ಉಡುಪಿ ನಗರದ ಬೋರ್ಡ್ ಹೈಸ್ಕೂಲ್ ನಲ್ಲಿ ಬೃಹತ್ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಮೆರವಣಿಗೆಯು

ಬೈಂದೂರು: ಅದ್ದೂರಿಯಾಗಿ ನಡೆದ ಹುಲಿ ಕೊಲ್ಲುವ ವಿಶೇಷ ಕಾರ್ಯಕ್ರಮ

ಇತಿಹಾಸ ಪ್ರಸಿದ್ಧ ಬೈಂದೂರು ಬಂಕೇಶ್ವರಾ ಶ್ರೀ ಮಹಾಕಾಳಿ ಅಮ್ಮನವರ ದೇವಸ್ಥಾನದಲ್ಲಿ ಐತಿಹಾಸಿಕ ಹುಲಿ ಕೊಲ್ಲುವ ಕಾರ್ಯಕ್ರಮ ನಡೆಯಿತು. ಬೈಂದೂರಿನ ಸುತ್ತಮುತ್ತಲಿನ ಜನರು ಮಹಾಕಾಳಿ ಅಮ್ಮನವರಿಗೆ ನವರಾತ್ರಿಯ ಸಂದರ್ಭದಲ್ಲಿ ಸೇವೆ ಹಾಗೂ ಹರಕೆಯ ರೂಪದಲ್ಲಿ ಹುಲಿ ವೇಷ ತೊಟ್ಟು ಕುಣಿಯುವ ಪರಿ ಹಿಂದಿನಿಂದ ನಡೆದುಕೊಂದು ಬಂದಿದೆ. ಮಕ್ಕಳು ದೊಡ್ಡವರು ಭೇದವಿಲ್ಲದೇ ದೇವರ ಹರಕ್ಕೆಯನ್ನು ಸಲ್ಲಿಸಿದರು. ಬಳಿಕ ನವರಾತ್ರಿಯ ಕೊನೆಯ ದಿನವಾದ ವಿಜಯ ದಶಮಿಯಂದು ದೇವಿಯನ್ನು ಹುಲಿಯ

ಕಾರ್ಕಳ: ನಾಪತ್ತೆಯಾಗಿದ್ದ ಹೆಡ್‌ ಕಾನ್ ಸ್ಟೇಬಲ್ ಶೃತಿನ್ ಶೆಟ್ಟಿ ಶವವಾಗಿ ಪತ್ತೆ || V4NEWS

ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್‌ ಕಾನ್‌ಸ್ಟೇಬಲ್ ಶೃತಿನ್ ಶೆಟ್ಟಿ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದು ಇಂದು ಅವರ ಶವವು ಕಾರ್ಕಳದ ಪುರಿಯ ಸಾರ್ವಜನಿಕ ಬಾವಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶೃತಿನ್ ಶೆಟ್ಟಿ ಕಾಣೆಯಾಗಿರುವ ಕುರಿತು ಅವರ ಪತ್ನಿ ದೂರು ದಾಖಲಿಸಿದ್ದರು. ಕಾಪು ಜನಾರ್ದನ ದೇವಸ್ಥಾನ ಬಳಿಯಿರುವ ಅಂಗಡಿಮನೆ ನಿವಾಸಿಯಾಗಿರುವ ಶೃತಿನ್ ಶೆಟ್ಟಿ ಗುರುವಾರ ರಾತ್ರಿ 7.30ಕ್ಕೆ ಹೆಂಡತಿಗೆ ಫೋನ್

ಬೈಂದೂರು: ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ

ಬೈಂದೂರಿನ ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ 50ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಬೈಂದೂರು ದಸರಾ-2023ಕ್ಕೆ ಅದ್ಧೂರಿ ಚಾಲನೆ ದೊರೆಯಿತು. ಬೈಂದೂರು ದಸರಾ ಮಹೋತ್ಸವಕ್ಕೆ ಅಪ್ಪಣ್ಣ ಹೆಗ್ಡೆ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವೈಜ್ಞಾನಿಕವಾಗಿ ಜಗತ್ತು ಎಷ್ಟೆ ಪ್ರಗತಿಯಾದರು ಸಹ ಮನಃಶಾಂತಿ ಹಾಗೂ ನೆಮ್ಮದಿಯನ್ನು ಹಣ ಹಾಗೂ ಪ್ರಗತಿಯಿಂದ ಪಡೆಯಲು ಸಾದ್ಯವಿಲ್ಲ,ಮದೇವರ ಆರಾಧನೆಯಿಂದ ಮಾನಸಿಕ ನೆಮ್ಮದಿಯ ಜೊತೆಗೆ ಸುಖಃ ಸಮೃದ್ದಿ ದೊರೆಯುತ್ತದೆ