Home ಕರಾವಳಿ Archive by category ಉಡುಪಿ (Page 21)

ಉಡುಪಿ: ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟಿಸುವ ಪರಿಸ್ಥಿತಿ ಸೃಷ್ಠಿ ಮಾಡಬೇಡಿ: ಕೋಟ ಶ್ರೀನಿವಾಸ ಪೂಜಾರಿ

ಕರ್ನಾಟಕದ ಎಲ್ಲಾ ವಿರೋಧ ಪಕ್ಷದ ಶಾಸಕರಿಗೆ ಅನ್ವಯಿಸುವ ಸಮಸ್ಯೆ ಇದು. ವಿರೋಧಪಕ್ಷದ ಶಾಸಕರನ್ನ ಸಿದ್ದರಾಮಯ್ಯ ಸರ್ಕಾರ ಹಣೆಯಲು ಹೊರಟಿದೆ. ಹಿಂದಿನ ಸರ್ಕಾರದ ಎಲ್ಲಾ ಯೋಜನೆಯನ್ನು ಈ ಸರ್ಕಾರ ತಡೆ ಹಿಡಿದಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಉಡುಪಿಯಲ್ಲಿ ಅನುದಾನ ಬಿಡುಗಡೆಗೆ ಆಗ್ರಹಿಸಿ ಶಾಸಕ ಮುನಿರತ್ನ ಪ್ರತಿಭಟನೆ ಕುರಿತು ಮಾಧ್ಯಮಕ್ಕೆ

ಕುಂದಾಪುರ: ಸೇನಾಪುರ ರೈಲ್ವೇ ನಿಲ್ದಾಣದಲ್ಲಿ ಎಕ್ಸ್‍ಪ್ರೆಸ್ ರೈಲು ನಿಲುಗಡೆಗೆ ಹೋರಾಟ ಸಮಿತಿಯಿಂದ ಆಗ್ರಹ

ಕುಂದಾಪುರದ ಸೇನಾಪುರ ನಿಲ್ದಾಣದಲ್ಲಿ ಎಕ್ಸ್‍ಪ್ರೆಸ್ ರೈಲು ನಿಲುಗಡೆ ಹೋರಾಟ ಸಮಿತಿ ನೇತೃತ್ವದಲ್ಲಿ ಸೇನಾಪುರ ನಿಲ್ದಾಣದಲ್ಲಿ ಎಕ್ಸ್‍ಪ್ರೆಸ್ ರೈಲು ನಿಲುಗಡೆ ಆಗ್ರಹಿಸಿ ಚಲೋ ಸೇನಾಪುರ ಬೃಹತ್ ಪ್ರತಿಭಟನೆ ನಡೆಸಿದರು. ಬೃಹತ್ ಪ್ರತಿಭಟನೆ ಮೆರವಣಿಗೆ ನಾಡಾ ಗ್ರಾಮ ಪಂಚಾಯತ್‍ನಿಂದ ಆರಂಭಗೊಂಡು ಸೇನಾಪುರ ರೈಲ್ವೇ ನಿಲ್ದಾಣದವರೆಗೆ ಸಾಗಿಬಂದು, ಬಳಿಕ ರೈಲ್ವೇ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಹೋರಾಟ ಸಮಿತಿಯ ಸಂಚಾಲಕ ರಾಜೀವ್

ಉಡುಪಿ: ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವ: ಸಂಗೀತ ಲೋಕದ ದಿಗ್ಗಜ ಡಾ. ವಿದ್ಯಾಭೂಷಣರಿಗೆ ಹುಟ್ಟೂರ ಪ್ರಶಸ್ತಿ ಪ್ರದಾನ

ಕೋಟದ ಕಾರಂತ ಥೀಮ್ ಪಾರ್ಕ್‍ನಲ್ಲಿ ಡಾ. ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವದ ಅಂಗವಾಗಿ ಸಂಗೀತ ಲೋಕದ ದಿಗ್ಗಜ ಡಾ. ವಿದ್ಯಾಭೂಷಣರಿಗೆ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಕೋಟತಟ್ಟು ಗ್ರಾಮ ಪಂಚಾಯತ್, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಶೇಷವಾಗಿ ಆಗಮಿಸಿದ್ದ ರಾಜ್ಯಪಾಲ ಥಾವರ್‍ಚಂದ್ ಗೇಹಲೋಟ್‍ರವರಿಗೆ

ಕುಂದಾಪುರ: ಕೊಲ್ಲೂರು ಕ್ಷೇತ್ರಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ವಿಶೇಷ ಪೂಜೆ ಸಲ್ಲಿಕೆ

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಅವರು ದೇವರ ದರ್ಶನ ಪಡೆದುಕೊಂಡು ವಿಶೇಷ ಪೂಜೆ ಸಲ್ಲಿಸಿದರು. ದೇಗುಲಕ್ಕೆ ಭೇಟಿ ನೀಡಿದ ರಾಜ್ಯಪಾಲರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಅವರು ರಾಜ್ಯಪಾಲರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರುರಾಜ್

ಪಡುಬಿದ್ರಿ: ಕೇವಲ ಸ್ಪರ್ಶದಿಂದಲೇ ನೋವು ನಿವಾರಣೆ ಮಾಡುವ ಶೇಷಾನಂದ..!!

ಕಾಲುಗಳಿಗಿಲ್ಲ ತನ್ನ ಬೇಕು ಬೇಡಗಳನ್ನು ಪೂರೈಸುವ ಶಕ್ತಿ… ಆದರೆ ಜನರ ಉದ್ಧಾರಕ್ಕೂ ಎಂಬಂತೆ ತನ್ನೆಲ್ಲಾ ಸುಖ ಸಂತೋಷಗಳನ್ನು ಬದಿಗೊತ್ತಿ,.. ತನ್ನಲ್ಲಿ ಅಡಕವಾಗಿರುವ ನೋವುಗಳನ್ನು ಮರೆತು ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾರೆ. ಇದೀಗ ಪಡುಬಿದ್ರಿಯ ಸುಜ್ಲಾನ್ ಕಾಲೋನಿಯ ಒಂದು ಮನೆಯಲ್ಲಿ ಜನರ ಸೇವೆಗೆ ಲಭ್ಯವಿದ್ದಾರೆ. ಕೇರಳ ಮೂಲದ “ಶೇಷಾನಂದ” ವಯಸ್ಸು ಕೇವಲ ಮೂವತ್ತ ನಾಲ್ಕು, ವಿದ್ಯಾಭ್ಯಾಸ ರಹಿತವಾಗಿರುವ ಇವರು ಕನ್ನಡ, ಹಿಂದಿ, ಮಲಯಾಳಂ ಸಹಿತ

ಉಡುಪಿ: ವಿಎಚ್‌ಪಿ ಮುಖಂಡ ಶರಣ್ ಪಂಪ್ ವೆಲ್ ಉಡುಪಿ ಪ್ರವೇಶಕ್ಕೆ ನಿರ್ಬಂಧ

ಉಡುಪಿ: ವಿಎಚ್‌ಪಿ- ಬಜರಂಗದಳ ವತಿಯಿಂದ ಇಂದು ಉಡುಪಿಯಲ್ಲಿ ಹಮ್ಮಿಕೊಳ್ಳಲಾದ ಶೌರ್ಯ ಜಾಗರಣ ರಥಯಾತ್ರೆ ಸಮಾರೋಪ ಹಾಗೂ ಹಿಂದೂ ಸಮಾಜೋತ್ಸವ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದಂತೆ ವಿಎಚ್‌ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಗೆ ಉಡುಪಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇತ್ತೀಚೆಗೆ ನಡೆದ ಉಡುಪಿಯ ಕಾಲೇಜೊಂದರ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದ ಪ್ರತಿಭಟನೆಯಲ್ಲಿ ಶರಣ್ ಪಂಪ್‌ವೆಲ್ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದರು. ಈ ಸಂಬಂಧ

ಪಡುಬಿದ್ರಿ: ವ್ಯವಸ್ಥಿತವಾಗಿ ನಡೆಯಲಿದೆ ಉಚ್ವಿಲ ದಸರಾ: ನಾಡೋಜ ಜಿ. ಶಂಕರ್

ಬರಗಾಲದ ಹಿನ್ನಲೆಯಲ್ಲಿ ಉಚ್ಚಿಲ ದಸರಾ ವಿಜ್ರಂಭಣೆಯಾಗಿ ಅಲ್ಲವಾದರೂ ಎಲ್ಲೂ ಯಾವುದಕ್ಕೂ ಚ್ಯುತಿ ಬಾರದಂತೆ ವ್ಯವಸ್ಥಿತವಾಗಿ ನಡೆಯಲಿದೆ ಎಂಬುದಾಗಿ ನಾಡೋಜ ಜಿ. ಶಂಕರ್ ಹೇಳಿದ್ದಾರೆ.ಅವರು ಉಚ್ಚಿಲ ಮೊಗವೀರ ಸಭಾಗಣದಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಈ ಬಾರಿಯ ಉಚ್ಚಿಲ ದಸರಾವನ್ನು ಉಡುಪಿ ಜಿಲ್ಲಾಧಿಕಾರಿಯವರು ಉದ್ಘಾಟಿಸಲಿದ್ದು, ಕಳೆದ ಬಾರಿಯಂತೆ ಹೆಲಿಕಾಪ್ಟರ್ ಬಳಕೆ ಇಲ್ಲವಾದ ಕಾರಣ ಮೈಸೂರು ಅಂಭಾರಿಯನ್ನು ಹೊಲುವ ರೀತಿಯಲ್ಲಿ ಆನೆಯ ಪ್ರತಿಕೃತಿ ಬಹಳ

ಕೊಲ್ಲೂರು : ರಾಷ್ಟ್ರೀಯ ಕ್ರೀಡಾಪಟು ಮಂಜುನಾಥ್ ಮರಾಠಿ ಅವರಿಗೆ ಸನ್ಮಾನ

ಬೈಂದೂರು : ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ಹಾಗೂ ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ಕೊಲ್ಲೂರು ಇವರ ಸಹಯೋಗದಲ್ಲಿ ಬೈಂದೂರು ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಎರಡು ದಿನಗಳ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಕ್ರೀಡಾಪಟು ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಳದ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಮಂಜುನಾಥ್ ಮರಾಠಿ ಅವರ ಸಾಧನೆ ಗುರುತಿಸಿ, ಸನ್ಮಾನಿಸಿ ಗೌರವಿಸಲಾಯಿತು. ರಾಷ್ಟ್ರೀಯ ಕ್ರೀಡಾಪಟು ಮಂಜುನಾಥ

ಬೈಂದೂರು: ಬಾಲಭವನ ಉದ್ಘಾಟನಾ ಕಾರ್ಯಕ್ರಮ

ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಮೊವಾಡಿ ಶಾಲೆಯಲ್ಲಿ ಕೆನರಾ ಬ್ಯಾಂಕ್ ನೇತೃತ್ವದಲ್ಲಿ ಸುಮಾರು 3.5 ಲಕ್ಷ.ರೂ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಸುಸಜ್ಜಿತವಾದ ನೂತನ ಬಾಲ ಭವನದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕೆನರಾ ಬ್ಯಾಂಕ್ ಮಣಿಪಾಲ ಸರ್ಕಲ್ ಡಿಜಿಎಂ ಶ್ರೀಜೀತ್ ಬಾಲವನ್ನು ಉದ್ಘಾಟಿಸಿ ಮಾತನಾಡಿ, ಶಾಲಾ ಮಕ್ಕಳ ಕಲಿಕಾ ಚಟುವಟಿಕೆಗೆ ಬಾಲ ಭವನ ಬಹಳಷ್ಟು ಸಹಕಾರಿ ಆಗಲಿದೆ ಎಂದು ಶುಭಹಾರೈಸಿದರು. ನಿವೃತ್ತ ಡಿಜಿಎಂ ಶಶಿಧರ ಐತಾಳ್ ಮಾತನಾಡಿ,

ಅಮೇರಿಕಾದಲ್ಲಿ ಕೋಟದ ಕುವರಿ ಅದಿತ್ರಿ ಪೈಯಿಂದ ಕಾಂತಾರ ಸಿನಿಮಾ ಹಾಡು

ಉಡುಪಿ ಜಿಲ್ಲೆ ಕೋಟ ಮೂಲದ 10 ವರ್ಷದ ಕುವರಿ ಅದಿತ್ರಿ ಪೈ ಅಮೇರಿಕಾದಲ್ಲಿ ಕಾರ್ಯಕ್ರಮವೊಂದರಲ್ಲಿ ಕಾಂತಾರ ಸಿನಿಮಾ ಹಾಡು ಹಾಡಿ ಜನಮೆಚ್ಚುಗೆ ಪಡೆದಿದ್ದಾಳೆ. ಅಮೇರಿಕಾದ ಒಹಾಯೋ ರಾಜ್ಯದ ಲೈಮಾದಲ್ಲಿ ಮಲ್ಟಿ ಕಲ್ಚರಲ್ ಎಕ್ಸ್ ಪೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂತಾರಾ ಸಿನಿಮಾದ ವರಾಹ ರೂಪಂ ಹಾಡಿನ ಟ್ಯಾಕ್‍ಗೆ ಶಾಸ್ತ್ರೀಯ ರಾಗದ ಕನ್ನಡ ಗೀತೆಯೊಂದನ್ನು ಅದಿತ್ರಿ ಪೈ ಸ್ವರ ಮಾಧುರ್ಯದಿಂದ ಹಾಡಿ ಜನಮೆಚ್ಚುಗೆ ಗಳಿಸಿದ್ರು. ಅಮೇರಿಕಾದಲ್ಲಿ ಮೆಕ್ಯಾನಿಕಲ್