Home ಕರಾವಳಿ Archive by category ಮಂಗಳೂರು (Page 120)

ಮಂಗಳೂರಿನ ಪಚ್ಚನಾಡಿ ಕಾರ್ಮಿಕ ನಗರದಲ್ಲಿಅಕ್ರಮ ಸರ್ಕಾರಿ ನಿವೇಶನ ಹಂಚಿಕೆ ವಿರುದ್ಧ ಪ್ರತಿಭಟನೆ

ಮಂಗಳೂರಿನ ಪಚ್ಚನಾಡಿ ಕಾರ್ಮಿಕ ನಗರದಲ್ಲಿ ಅಕ್ರಮ ಸರಕಾರಿ ನಿವೇಶನ ಹಂಚಿಕೆ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಗ್ರಾಮದ ಕಾರ್ಮಿಕನಗರದ ಸರ್ವೇ ನಂ 158ರಲ್ಲಿ ಸುಮಾರು ಎರಡು ಎಕರೆ ಸರಕಾರಿ ಜಾಗವಿದ್ದು ಸದ್ರಿ ಸ್ಥಳದಲ್ಲಿ ಸುಮಾರು 50 ವರುಷಗಳಿಂದ ಒಂದು ಸಾರ್ವಜನಿಕ ವೇದಿಕೆಯಿದೆ.

ಶ್ರೀಮತಿ ಶಾಂತಾ ಕುಂಟಿನಿ ಇವರಿಗೆ ಕಾಶಿ ಕನ್ನಡದ ಕಂಪು “ಸಾಧನ ಶ್ರೀ ” ಪ್ರಶಸ್ತಿ ಪುರಸ್ಕಾರ

ಶ್ರೀ ಕಾಶಿ ಜಗದ್ಗುರು ಚಂದ್ರಶೇಖರಶಿವಾಚಾರ್ಯ ಮಹಾ ಸ್ವಾಮೀಜಿ ಇವರ ದಿವ್ಯ ಉಪಸ್ಥಿತಿಯಲ್ಲಿ ಜಂಗಮವಾಡಿಮಠ ವಾರಣಾಸಿ ಕಾಶಿ ಕನ್ನಡದ ಕಂಪು ಸರಣಿಯ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಶಾಂತಾ ಕುಂಟಿನಿ ಇವರ ಸಾಹಿತ್ಯ ಹಾಗೂ ಸಂಘಟನೆ ಕಾರ್ಯವನ್ನು ಗುರುತಿಸಿ “ಸಾಧನಶ್ರೀ ” ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಎಂದುಕಾರ್ಯಕ್ರಮದ ಆಯೋಜಕರುತಿಳಿಸಿರುತ್ತಾರೆ..ಅಂತೆಯೇ ಈ ಕಾರ್ಯಕ್ರಮವನ್ನು ಕಥಾ ಬಿಂದು

ಜಾಂಬೂರಿಗೆ ಮೆರಗು ನೀಡಲಿರುವ ಕೃಷಿ ,ವಿಜ್ಞಾನ ಮೇಳ

ಮೂಡುಬಿದಿರೆ: ದೇಶಿಯ ಸಂಸ್ಕೃತಿಯನ್ನು ಆಳ್ವಾಸ್ ನುಡಿಸಿರಿ, ವಿರಾಸತ್ ಮುಖೇನ ಕಳೆದ ಎರಡುವರೆ ದಶಕಗಳಲ್ಲಿ ಸಾದರಪಡಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಈ ಬಾರಿ ಒಂದು ವಾರಗಳ ಅಂತಾರಾಷ್ಟ್ರೀಯ ಸ್ಕೌಟ್‍ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯನ್ನು ಆಯೋಜಿಸುತ್ತಿದೆ. ಈ ಬಾರಿ ಜಾಂಬೂರಿಗೆ ವಿಶೇಷವಾಗಿ ಕೃಷಿ ಮತ್ತು ವಿಜ್ಞಾನ ಮೇಳಗಳು ವಿಶೇಷ ಮೆರುಗು ನೀಡಲಿದೆ. ಕೃಷಿ ಮಹತ್ವವನ್ನು ಬಿಂಬಿಸುವ ನಿಟ್ಟಿನಲ್ಲಿ ಜಾಂಬೂರಿಯಂದು ಆಳ್ವಾಸ್ ಆವರಣದ ಸುಮಾರು 12 ಎಕರೆ

ಮಂಗಳೂರು: ಮ್ಯಾಂಡಸ್ ಚಂಡಮಾರುತ – ಮೀನುಗಾರಿಕೆ ದೋಣಿಗಳು ದಡ ಸೇರಲು ಸೂಚನೆ

ಡಿ.16ರವರೆಗೆ ಮ್ಯಾಂಡಸ್ ಚಂಡಮಾರುತದಿಂದ ಅರಬ್ಬಿ ಸಮುದ್ರವು ಪ್ರಕ್ಷುಬ್ಧವಾಗಿರುತ್ತದೆ, ಈ ವೇಳೆ ಸಂಭವಿಸುವ ಅನಾಹುತವನ್ನು ತಡೆಗಟ್ಟಲು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲಾ ಮೀನುಗಾರಿಕೆ ದೋಣಿಗಳು ಕೂಡಲೇ ದಡ ಸೇರುವಂತೆ ಮೀನುಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಂಗಳೂರು ಕೋಸ್ಟ್‍ಗಾರ್ಡ್ ನೀಡಿರುವ ಹವಾಮಾನ ಮುನ್ಸೂಚನೆ ಆಧರಿಸಿ ಅವರು ಎಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿ ಡಿ.18ರಂದು ಶಕ್ತಿಸಂಗಮ

ರಾಜ್ಯ ಬಿಜೆಪಿಯ 24 ಪ್ರಕೋಷ್ಟಗಳ ರಾಜ್ಯ ಸಮಾವೇಶ ಶಕ್ತಿಸಂಗಮವು ಡಿಸೆಂಬರ್ 18ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ ಎಂದು ರಾಜ್ಯ ಸಂಚಾಲಕರಾದ ಕೆ. ಪ್ರತಾಪ ಸಿಂಹ ನಾಯಕ್ ಹೇಳಿದರು.ಅವರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಮಂಡಲ, ಜಿಲ್ಲೆ ಹಾಗೂ ರಾಜ್ಯ ಸಮಿತಿ ಸಂಚಾಲಕ, ಸಹ ಸಂಚಾಲರು, ಜಿಲ್ಲಾ ಸಂಯೋಜಕರು, ಸಂಕುಲ ಪ್ರಮುಖರು ಇದಕ್ಕೆ ಅಪೇಕ್ಷಿತರು. ದಕ್ಷಿಣ ಕನ್ನಡ ಜಿಲ್ಲೆಯಿಂದ 1,500 ಕ್ರಿಯಾಶೀಲಾ ಕಾರ್ಯಕರ್ತರು

ಮೀನುಗಾರರಿಗೆ ಬಜೆಟ್‍ನಲ್ಲಿ ಪ್ರಕಟಿಸಿದ ಯೋಜನೆ ಕಾರ್ಯಗತಗೊಂಡಿಲ್ಲ : ಐವನ್ ಡಿಸೋಜಾ

ರಾಜ್ಯ ಸರಕಾರ ಮೀನುಗಾರರಿಗಾಗಿ ಬಜೆಟ್‍ನಲ್ಲಿ ಪ್ರಕಟಿಸಿದ ಒಂದು ಯೋಜನೆಯೂ ಜಾರಿಗೆ ತರದೆ ಮೀನುಗಾರ ಸಮುದಾಯವನ್ನು ಕಡೆಗಣಿಸಿದೆ. ಈಗಾಗಲೇ ಮೀನುಗಾರ ಮುಖಂಡರು ಬೆಂಗಳೂರಿಗೆ ತೆರಳಿ ತಮ್ಮ ಸಮಸ್ಯೆಯನ್ನು ಸರಕಾರ ಮುಂದೆ ಇಟ್ಟಿದ್ದಾರೆ. ಇದಕ್ಕೆ ಸ್ಪಂದಿಸದಿದ್ದರೆ ಮೀನುಗಾರರ ಜತೆ ಸೇರಿ ಕಾಂಗ್ರೆಸ್ ಪಕ್ಷವೂ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಉಪಾಕ್ಷ ಐವನ್ ಡಿಸೋಜಾ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು: ಲಾಡ್ಜ್‌ನಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬ ಆತ್ಮಹತ್ಯೆ- Pumpwell Suicide

ಮಂಗಳೂರು: ಮಂಗಳೂರಿನ ಪಂಪ್‌ವೆಲ್ ಬಳಿ ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ಇರುವ ಖಾಸಗಿ ಲಾಡ್ಜ್‌ನಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಲಾಡ್ಜ್‌ನ 129ನೇ ನಂಬ್ರದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವ್ಯಕ್ತಿಯನ್ನು ಕೇರಳ ಕಾಸರಗೋಡಿನ ಉಪ್ಪಳದ ಚಿಪ್ಪಾರು ನಿವಾಸಿ 55ರ ಹರೆಯದ ಅಬ್ದುಲ್‌ ಕರೀಂ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಸಂಪೂರ್ಣವಾಗಿ ಬೆತ್ತಲಾಗಿ ಬಿದ್ದಿರುವುದು ನಿಗೂಢವಾಗಿದೆ. ಸಾವಿಗೆ

ನಂದಾವರ ದೇವಳಕ್ಕೆ ನೂತನ ರಜತ ಪಲ್ಲಕಿ ಹಾಗೂ ಪೀಠ ಪ್ರಭಾವಳಿ ಸಮರ್ಪಣೆ

ನಂದಾವರ ದೇವಳಕ್ಕೆ ನೂತನ ರಜತ ಪಲ್ಲಕಿ ಹಾಗೂ ಪೀಠ ಪ್ರಭಾವಳಿ ಸಮರ್ಪಣೆ ನಂದಾವರ ಶ್ರೀ ವೀರ ಮಾರುತಿ ದೇವಸ್ಥಾನ ದ ಶ್ರೀ ದೇವರ ಉತ್ಸವಾದಿ ಕಾರ್ಯಕ್ರಮಗಳಿಗಾಗಿ ನೂತನವಾಗಿ ನಿರ್ಮಿಸಲಾದ ರಜತ ಪಲ್ಲಕಿ ಹಾಗೂ ಶ್ರೀ ದೇವರ ರಜತ ಪೀಠ ಪ್ರಭಾವಳಿಗಳನ್ನು ಶ್ರೀದೇವರಿಗೆ ಹತ್ತು ಸಮಸ್ತರ ಪರವಾಗಿ ಶ್ರೀ ದೇವರಿಗೆ ಸಮರ್ಪಿಸಲಾಯಿತು . ಸುಮಾರು 28ಕಿಲೋ ಬೆಳ್ಳಿಯನ್ನು ಬಳಸಲಾಗಿದ್ದು , 25 ಲಕ್ಷ ವೆಚ್ಚ ತಗಲಿದ್ದು ಶ್ರೀದೇವಳದ ವೈದಿಕರಿಂದ ವಿಧಿ ವಿಧಾನಪೂರ್ವಕ ಪೂಜೆನಡೆದು

ಕಡಬ ಪ.ಪಂ. ವ್ಯಾಪ್ತಿಗೆ ನಗರೋತ್ಥಾನ ಯೋಜನೆಯಡಿ ವಿಶೇಷ ಅನುದಾನ

ಕಡಬ:ಸಚಿವ ಎಸ್. ಅಂಗಾರ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರಕಾರದಿಂದ ನಗರೋತ್ಥಾನ ಯೋಜನೆಯಡಿ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಮಂಜೂರಾದ 5 ಕೋಟಿ ರೂ. ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯಡಿ ಮಂಜೂರಾದ 2.90 ಕೋಟಿ ರೂ. ಕಾಮಗಾರಿಗಳಿಗೆ ಸಚಿವ ಎಸ್. ಅಂಗಾರ ಅವರು ಚಾಲನೆ ನೀಡಿದರು. ಬಳಿಕ ಕಡಬ ಸಿ.ಎ.ಬ್ಯಾಂಕ್ ವಠಾರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಈ ಹಿಂದೆ ದೇಶ ಮತ್ತು ರಾಜ್ಯವನ್ನು ಆಳಿದ ಕಾಂಗ್ರೆಸ್ ಸರಕಾರದ ಇಚ್ಚಾಶಕ್ತಿಯ ಕೊರತೆಯಿಂದ ಅಭಿವೃದ್ದಿ

ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಸುವರ್ಣ ಪ್ರಾಶನ ಶಿಬಿರ.

ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಸುವರ್ಣ ಪ್ರಾಶನ ಕಾರ್ಯಕ್ರಮ ಪುಷ್ಯ ನಕ್ಷತ್ರದ ದಿನ 12-12-2023 ರಂದು ಜರುಗಿತು.ಮಠಾಧಿಪತಿಗಳಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರು ಮಕ್ಕಳ ಸ್ವಾಸ್ಥ್ಯ ರಕ್ಷಣೆಯ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 16 ವರ್ಷದ ವರೆಗಿನ ಮಕ್ಕಳಿಗಾಗಿ ಪ್ರತಿ ತಿಂಗಳ ಪುಷ್ಯ ನಕ್ಷತ್ರದಂದು ಸುವರ್ಣ ಪ್ರಾಶನ ಶಿಬಿರ ಜರುಗಲಿದೆ.. ಇಲ್ಲಿನ ವೈದ್ಯಕೀಯ ಸೇವಾ ವಿಭಾಗದ ಆಯುರ್ವೇದ ತಜ್ಞ ವೈದ್ಯ