Home ಕರಾವಳಿ Archive by category ಮಂಗಳೂರು (Page 121)

ಡಿ .16 ಮಂಗಳೂರಿನ ಕೆಲವೆಡೆ  ನೀರು ಸರಬರಾಜಿನಲ್ಲಿ ವ್ಯತ್ಯಯ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತುರ್ತಾಗಿ ಪೈಪ್ ಲೈನ್ ಕಾಮಗಾರಿ ನಡೆಯಲಿದೆ. ಹೀಗಾಗಿ ಮಂಗಳೂರು ನಗರದ ವಿವಿಧೆಡೆ ಭಾನುವಾರ ಡಿ .16 ರ ಮುಂಜಾನೆಯಿಂದ 24 ಗಂಟೆಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.ತುಂಬೆ ಹೆಚ್ ಎಲ್ ಪಿ ಎಸ್ ರೇಚಕ ಸ್ಥಾವರದಿಂದ ಪಣಂಬೂರಿಗೆ ನೀರು ಸರಬರಾಜು ಮಾಡುವ ಮುಖ್ಯ ಕೊಳವೆಯೂ ಬಿಜೈ ಚರ್ಚ್ ರೋಡ್ ಬ್ರಿಡ್ಜ್ ಬಳಿ ,

ಮಂಗಳೂರು : ಡಿ. 14ರಂದು ‘ನಮ್ಮ ಕ್ಲಿನಿಕ್’ ಲೋಕಾರ್ಪಣೆ

ಆರೋಗ್ಯ ಕ್ಷೇತ್ರವನ್ನು ತಳಮಟ್ಟದಿಂದ ಬಲಪಡಿಸುವ ಮತ್ತು ಸುಧಾರಣೆ ತರುವ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳ ಮೂಲಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಯಲ್ಲಿ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡಲು ಡಿ. 14ರ ಪೂ.11ಕ್ಕೆ ರಾಜ್ಯಾದ್ಯಂತ ವರ್ಚ್ಯುವೆಲ್ ಮಾಧ್ಯಮದ ಮೂಲಕ 100 ನಮ್ಮ ಕ್ಲಿನಿಕ್ ಕೇಂದ್ರಗಳನ್ನು ಮುಖ್ಯಮಂತ್ರಿ ಲೋಕಾರ್ಪಣೆ ಮಾಡುವರು. ಅದರಂತೆ ದ.ಕ.ಜಿಲ್ಲೆಯ ಸೂಟರ್‌ಪೇಟೆ, ಬೋಳಾರ, ಬಂದರು, ಪಚ್ಚನಾಡಿ, ಕೋಡಿಕಲ್, ಮೀನಕಳಿಯ, ಕೆರೆಬೈಲು,

ಎ.ಜೆ. ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಸಹಜ ಉಸಿರಾಟಕ್ಕೆ ಅಪರೂಪದ ಶಸ್ತ್ರ ಚಿಕಿತ್ಸೆ| A.J. Hospital & Research Centre

ಎ.ಜೆ. ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಸಹಜ ಉಸಿರಾಟಕ್ಕೆ ಅಪರೂಪದ ಶಸ್ತ್ರ ಚಿಕಿತ್ಸೆ. 24 ದಿನ ಪ್ರಾಯದ ನವಜಾತ ಶಿಶುವನ್ನು ಸ್ತನ್ಯಪಾನ ಮತ್ತು ಉಸಿರಾಟದ ಸಮಸ್ಯೆಗಳಿಗಾಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಉಸಿರಾಡಲು ಕಷ್ಟಪಡುತ್ತಾ ಶ್ವಾಸೋಚ್ಛಾಸ ಮಾಡುವಾಗ, ಎದೆಹಾಲು ಕುಡಿಯುವಾಗ ಮೈ ನೀಲಿ ವರ್ಣಕ್ಕೆ ತಿರುಗುತ್ತಿತ್ತು. ಪರಿಸ್ಥಿತಿ ಗಂಭೀರವಿದ್ದುದರಿಂದ ನಗರದ ಏಕೈಕ ನವಜಾತ ಶಿಶುಗಳ ಹೃದಯ ತಜ್ಞರಾದ ಪ್ರಸ್ತುತ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.

ವಿ ಫೋರ್ ವಾಹಿನಿ ಸಂಪಾದಕ ತಾರಾನಾಥ್ ಗಟ್ಟಿ ಕಾಪಿಕಾಡ್ ಗೆ ಸುವರ್ಣ ಕರ್ನಾಟಕ ಮೀಡಿಯಾ ಪುರಸ್ಕಾರ

ಮಂಗಳೂರಿನ ವೀ ಫೋರ್ ಟಿ.ವಿ. ವಾಹಿನಿಯ ಸಂಪಾದಕ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ‘ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಪುರಸ್ಕಾರ’ ಸ್ವೀಕರಿಸಿದರು.ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ರಾಜ್ಯದಾದ್ಯಂತ 20 ಮಂದಿ ಪತ್ರಕರ್ತರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಿತ್ತು. ಬೆಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.ಹಿರಿಯ ಸಂಗೀತ ನಿರ್ದೇಶಕ

ಆರು ಲಕ್ಷ ಹೆಕ್ಟೇರ್ ಭೂಮಿಯನ್ನುಡೀಮ್ಡ್ ಫಾರೆಸ್ಟ್‍ನಿಂದ ಮುಕ್ತ ಹೇಳಿಕೆ ಕೇವಲ ರಾಜಕೀಯ ಮಾತ್ರ : ರಮಾನಾಥ ರೈ

ರಾಜ್ಯದಲ್ಲಿ ಸುಮಾರು ಆರು ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಫಾರೆಸ್ಟ್‍ನಿಂದ ಮುಕ್ತಗೊಳಿಸುವುದಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರು ನೀಡಿರುವ ಹೇಳಿಕೆಗಳು ಕೇವಲ ರಾಜಕೀಯ ಮಾತ್ರ. ಆ ಬಗ್ಗೆ ಸುಪ್ರೀಂ ಕೋರ್ಟ್‍ನಿಂದ ಆದೇಶವಾಗಬೇಕಾಗಿದೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಹೇಳಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಡೀಮ್ಡ್ ಫಾರೆಸ್ಟ್ ಸಮಸ್ಯೆ ಕುರಿತಂತೆ ಮಾತನಾಡಿದ ಅವರು,

ತುಳುನಾಡ ದೈವರಾಧನಾ ರಕ್ಷಣಾ ಚಾವಡಿ ವಾರ್ಷಿಕೋತ್ಸವ

ಮೂಡುಬಿದಿರೆ : ದೈವರಾಧನೆ ತುಳುನಾಡಿನ ಪರಂಪರೆ, ನಾವು ದೈವ-ದೇವರನ್ನು ಆರಾಧಿಸುತ್ತೇವೆ ಇದು ಇಲ್ಲಿನ ಮೂಲ ನಿವಾಸಿಗಳ ಸಂಸ್ಕೃತಿ’ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು. ಅವರು ವಾಲ್ಪಾಡಿ ಮಾಡದಂಗಡಿ ಶಾಲಾ ವಠಾರದಲ್ಲಿ ನಡೆದ ತುಳುನಾಡ ದೈವರಾಧನೆ ರಕ್ಷಣಾ ಚಾವಡಿ ಮೂಡುಬಿದಿರೆ ವಲಯದ 5ನೇ ವಾರ್ಷಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಕನ್ಯಾನ ಕಣಿಯೂರು, ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ ಕಮರ್ಷಿಯಲ್ ದೃಷ್ಟಿಕೋನದಿಂದ

ಮಂಗಳೂರಿನಲ್ಲಿ ಎಲ್‌ ಕೋಡ್ ಟೆಕ್ನಾಲಾಜೀಸ್ ಸಾಫ್ಟ್‌ವೇರ್ ಸಂಸ್ಥೆ ಶುಭಾರಂಭ

ಡಿಜಿಟಲ್ ಕ್ಷೇತ್ರದಲ್ಲಿ ಗ್ರಾಹಕ ಸೇವೆಯಲ್ಲಿ ನಿರತವಾಗಿರುವ ಎಲ್‌ಕೋಡ್ ಟೆಕ್ನಾಲಾಜೀಸ್ ಸಾಫ್ಟ್‌ವೇರ್ ಸಂಸ್ಥೆಯ ನೂತನ ಕಚೇರಿಯನ್ನು ಬಿಜೈ ಕಾಪಿಕಾಡ್‌ನ ಅಜಂತಾ ಬಿಸ್‌ನೆಸ್ ಸೆಂಟರ್‌ನಲ್ಲಿ ಶುಭಾರಂಭಗೊಂಡಿತ್ತು. ನೂತನ ಎಲ್‌ಕೋಡ್ ಟೆಕ್ನಾಲಜೀಸ್ ಸಾಫ್ಟ್‌ವೇರ್ ಸಂಸ್ಥೆಯ ನೂತನ ಕಚೇರಿಯನ್ನು ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್.ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈಗ ಇರುವ ಡಿಜಿಟಲ್ ವ್ಯವಸ್ಥೆಯ ಕುರಿತಂತೆ

ಕುತ್ತಾರು ಕೊರಗಜ್ಜ ಆದಿಸ್ಥಳಕ್ಕೆ ನಟ ಶಿವರಾಜ್‍ಕುಮಾರ್ ಕುಟುಂಬ

ಉಳ್ಳಾಲ: ನಟಿ ರಕ್ಷಿತಾ ಪ್ರೇಮ್ ಸಲಹೆ ಮೇರೆಗೆ ಕರಾವಳಿಯ ಕಾರಣೀಕ ಶಕ್ತಿ ಕೊರಗಜ್ಜ ದೈವದ ಆದಿಸ್ಥಳ ಕುತ್ತಾರಿಗೆ ನಟ ಶಿವರಾಜ್ ಕುಮಾರ್ ಕುಟುಂಬ ಸಮೇತ ಭೇಟಿ ನೀಡಿದರು. ವೇದ ಸಿನಿಮಾದ ಫ್ರೀ ರಿಲೀಸ್ ಇವೆಂಟ್ ಗೆ ಮಂಗಳೂರಿಗೆ ಆಗಮಿಸಿರೋ ಶಿವರಾಜ್ ಕುಮಾರ್ ಇಂದು ಮೊದಲ ಬಾರಿಗೆ ಪತ್ನಿ ಗೀತ ಹಾಗೂ ಕುಟುಂಬಸ್ಥರೊಂದಿಗೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇಂದು ಸಂಜೆ ಪಣಂಬೂರು ಬೀಚ್ ನಲ್ಲಿ ನಡೆಯಲಿರುವ ವೇದ ಸಿನಿಮಾದ ಫ್ರೀ ರಿಲೀಸ್ ಇವೆಂಟ್

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಾಂತಾರ ಸಿನಿಮಾದ ನಿರ್ಮಾಪಕ ವಿಜಯ್ ಕಿರಂದೂರು ಭೇಟಿ

ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಈ ವರ್ಷದ ಸೂಪರ ಹಿಟ್ ಕಾಂತಾರ ಚಲನಚಿತ್ರ ಸಿನಿಮಾ ನಿರ್ಮಾಪಕ ವಿಜಯ್ ಕಿರಂದೂರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಳದ ಅರ್ಚಕ ಹರಿನಾರಾಯಣ ದಾಸ ಅಸ್ರಣ್ಣ ವಿಜಯ್ ಅವರಿಗೆ ದೇವರ ಶೇಷ ವಸ್ತ್ರ ನೀಡಿ ದೇವಳದ ವತಿಯಿಂದ ಕಿರಂದೂರು ಅವರನ್ನು ಗೌರವಿಸಲಾಯಿತು.

ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ವತಿಯಿಂದ : ಶಾಲಾ ಮಕ್ಕಳೊಂದಿಗೆ ಸಂಚಾರ ಜಾಗೃತಿ ಕುರಿತು ರ್‍ಯಾಲಿ

ಮಂಗಳೂರಿನ ಕೊಟ್ಟಾರ ಚೌಕಿಯ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ವತಿಯಿಂದ ಶಾಲಾ ಮಕ್ಕಳೊಂದಿಗೆ ಸಂಚಾರ ಜಾಗೃತಿ ಕುರಿತು ರ್‍ಯಾಲಿಯನ್ನ ನಗರದ ಲಾಲ್‍ಭಾಗ್ ಜಂಕ್ಷನ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆ ನಿಯಮ ಉಲ್ಲಂಘನೆ, ಹೆಲ್ಮೆಟ್ ಧರಿಸದೇ ವಾಹನ ಚಲಾವಣೆ ಮಾಡುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ವತಿಯಿಂದ ಶಾಲಾ ಮಕ್ಕಳಿಂದ ರ್ಯಾಲಿ ನಡೆಸಲಾಯ್ತು. ಶ್ರೀ ಚೈತನ್ಯ