Home ಕರಾವಳಿ Archive by category ಮಂಗಳೂರು (Page 14)

ಮಂಗಳೂರು: ಅಶ್ವಿನ್ ಎಲ್ ಶೆಟ್ಟಿ ರಾಜಕೀಯ ಪ್ರವೇಶ

ಸಹಕಾರಿ, ಧುರೀಣ ಸವಣೂರು ಸೀತಾರಾಮ ರೈ ಅವರ ಅಳಿಯ ಅಶ್ವಿನ್ ಎಲ್ ಶೆಟ್ಟಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಇಂದು ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರಿ ಮತ್ತು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ

ಮಂಗಳೂರು : ಶ್ರದ್ಧಾಭಕ್ತಿಗೆ ರಾಜಕೀಯ ಅನಗತ್ಯ : ಪದ್ಮರಾಜ್

ಮಂಗಳೂರು : ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿರುವುದು ನಮ್ಮ ಹೆಮ್ಮೆ. ಇದರ ಉದ್ಘಾಟನೆಯನ್ನು ಶ್ರದ್ಧಾಭಕ್ತಿಯಿಂದ ಮಾಡಬೇಕಾದ್ದು ನಮ್ಮ ಧರ್ಮ. ಇದನ್ನು ರಾಜಕೀಯಗೊಳಿಸುವ ಅಗತ್ಯವೇನು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಹೇಳಿದರು. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಅಯೋಧ್ಯೆ ವಿಚಾರ ವಿವಾದ ಇತ್ತು, ಅದು ಕೋರ್ಟ್ ಇತ್ಯರ್ಥ ಆಗಿದೆ. ಇದರಲ್ಲಿ ರಾಜಕೀಯ ಮಾಡುವ ಔಚಿತ್ಯವೇನು? ಬಿಜೆಪಿ

ಮಂಗಳೂರು: ಎಂಡಿಎಂಎ ಮಾರಾಟ ಆರೋಪ, ಇಬ್ಬರ ಬಂಧನ 

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ಬಳಿ ಸ್ಕೂಟರ್‌ನಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ ಘಟನೆ ವರದಿಯಾಗಿದೆ. ಬಜಾಲ್‌ನ ಅಶ್ಪಾಕ್ ಯಾನೆ ಜುಟ್ಟು ಅಶ್ಪಾಕ್ (27) ಮತ್ತು ಕಾಟಿಪಳ್ಳದ ಉಮರ್‌ ಫಾರೂಕ್ ಇರ್ಫಾನ್ (26) ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ಎಂಡಿಎಂಎ ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಮೊಬೈಲ್ ಫೋನ್ ಸೇರಿದಂತೆ ಒಟ್ಟು ರೂ 1,92,800 ಮೌಲ್ಯದ ಸೊತ್ತುಗಳನ್ನು

ಮಂಗಳೂರು: ಬ್ರಹ್ಮಸಮಾಜ ಕಾಂಪ್ಲೆಕ್ಸ್‌ನಲ್ಲಿ ಹೈಯರ್ ಎಕ್ಸ್‌ಕ್ಲೂಸಿವ್ ಸ್ಟೋರ್ ಶುಭಾರಂಭ

ಮಂಗಳೂರಿನ ನವಭಾರತ್ ವೃತ್ತದಲ್ಲಿರುವ ಬ್ರಹ್ಮ ಸಮಾಜ ಕಾಂಪ್ಲೆಕ್ಸ್‌ನಲ್ಲಿ ಡಿಜಿಟಲ್ ಪ್ಲಾನೆಟ್‌ನವರ ಹೈಯರ್ ಎಕ್ಸ್ ಕ್ಲೂಸಿವ್ ಸ್ಟೋರ್‌ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ವಿಶ್ವದ ನಂಬರ್ ವನ್ ಹೋಮ್ ಅಪ್ಲೈಯನ್ಸಸ್ ಹಾಗೂ ಭಾರತದ ಮೂರನೇ ಅತೀ ದೊಡ್ಡ ಬ್ರ್ಯಾಂಡ್ ಆಗಿರುವ ಹೈಯರ್‌ನ ಎಕ್ಸ್‌ಕ್ಲೂಸಿವ್ ಸ್ಟೋರ್ ಮಂಗಳೂರಿನಲ್ಲಿ ಶುಭಾರಂಭಗೊಂಡಿತು. ನೂತನ ಹೈಯರ್‌ನ ಎಕ್ಸ್‌ಕ್ಲೂಸಿವ್ ಸ್ಟೋರ್‌ನ್ನು ಮೂಡುಬಿದಿರೆಯ ಆಳ್ವಾಸ್ ಸಂಸ್ಥೆಯ ಚೇರ್ಮನ್ ಡಾ. ಎಂ. ಮೋಹನ್ ಆಳ್ವಾ

ಮಂಗಳೂರು: ತಮಾಮ್ ಫರ್ನೀಚರ್ ವರ್ಲ್ಡ್ ನೂತನ ಶೋರೂಂ ಉದ್ಘಾಟನೆ

ಪೀಠೋಪಕರಣ ಉದ್ಯಮದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ತಮಾಮ್ ಫರ್ನೀಚರ್ ವರ್ಲ್ಡ್ ನೂತನ ಶೋರೂಂ ನಗರದ ಪಂಪ್‌ವೆಲ್‌ನ ಬಳಿ ಸಿಟಿ ಗೇಟ್ ಬಿಲ್ಡಿಂಗ್‌ನಲ್ಲಿ ಉದ್ಘಾಟನೆಗೊಂಡಿತು. ಹಿಂದುಸ್ತಾನ್ ಬಾವಾ ಬಿಲ್ಡರ್ಸ್‌ನ ಆಡಳಿತ ನಿರ್ದೇಶಕರಾದ ಬಾವಾ ಅಬ್ದುಲ್ ಖಾದರ್ ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಮಂಜೇಶ್ವರ ಶಾಸಕರಾದ ಎ.ಕೆ.ಎಂ ಅಶ್ರಫ್ ಅವರು ಮಾತನಾಡಿ, ತಮಾಮ್ ಸಂಸ್ಥೆಯು ಸಾಮಾನ್ಯ ವರ್ಗದಿಂದ ಶ್ರೀಮಂತನವರೆಗೆ ಕೈಗೆಟಕುವ ದರದಲ್ಲಿ ವಸ್ತುಗಳನ್ನು ಖರೀದಿ

ಮಂಗಳೂರು: ಮನೆ ಮನೆಗೆ ಮಂತ್ರಾಕ್ಷತೆ ವಿತರಣೆ ಅಭಿಯಾನ

ಜನವರಿ 22ರ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಬಂದಂತಹ ಪವಿತ್ರ. ಮಂತ್ರಾಕ್ಷತೆಯನ್ನು. ರಾಜ್ಯದ ಎಲ್ಲಾ. ಗ್ರಾಮಗಳ ಪ್ರತಿ ಮನೆಗಳಿಗೆ ವಿತರಿಸುವ. ಅಭಿಯಾನ ಜನವರಿ 15ರವರೆಗೆ ನಡೆಯಲಿದೆ. ಅಯೋದ್ಯೆಯ ರಾಮಜನ್ಮ ಭೂಮಿಯಲ್ಲಿ ಪ್ರಾಣಪ್ರತಿಷ್ಠಗೊಳ್ಳುವ ಸಂದರ್ಭದಲ್ಲಿ ರಾಜ್ಯದ ಸಾವಿರಾರು ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪೂಜೆ ಹವನ ಸತ್ಸಂಗ,  ಭಜನೆ , ಮುಂತಾದ ಕಾರ್ಯಕ್ರಮ ನಡೆಯಲಿದೆ. ಪ್ರಾಣ ಪ್ರತಿಷ್ಠೆಯ ನೇರಪ್ರಸಾರ ಕೂಡ ಆಯಾಯ

ಮಂಗಳೂರು: ಹೊಸ ವರ್ಷಾಚರಣೆಗೆ ಬಿಗು ಬಂದೋಬಸ್ತ್

ಮಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಬಿಗು ಬಂದೋಬಸ್ತ್‌ನ್ನು ಏರ್ಪಡಿಸಲಾಗಿದೆ. ಬೀಚ್, ಪಾರ್ಕ್ ಸಹಿತ ಹೊರಾಂಗಣಗಳಲ್ಲಿ ರಾತ್ರಿ 10 ಗಂಟೆಯವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷಾಚರಣೆಗೆ ಹೊಟೇಲ್, ಚರ್ಚ್, ರೆಸಾರ್ಟ್ ಮೊದಲಾದ ಒಳಾಂಗಣಗಳಲ್ಲಿ ರಾತ್ರಿ 12.30 ರವರೆಗೆ ಅವಕಾಶವಿದೆ ಎಂದರು. ವ್ಯಾಪಕ ಬಂದೋಬಸ್ತ್ ನಡೆಸಲಾಗುವುದು. ನಿಯಮ

*ಮಂಗಳೂರು: ಮಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ರೈಲಿಗೆ ಚಾಲನೆ

ಮಂಗಳೂರು- ಮಡಗಾಂವ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ವೀಡಿಯೊ ಕಾನ್ಫರೆನ್ಸ್  ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ಮಾಡಿದರು. ಪ್ರಧಾನ ನಗರಗಳನ್ನು ಜೋಡಿಸುವ ಸೆಮಿ ಹೈ ಸ್ಪೀಡ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಮಡಗಾಂವ್‌ಗೆ ಶನಿವಾರ 12.13 ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಪ್ರಥಮ ಪ್ರಯಾಣ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು – ಮಡಗಾಂವ್ ಸೇರಿ 6 ವಂದೇ ಭಾರತ್ ಹಾಗೂ 2

ಮಂಗಳೂರು: ಕೊಟ್ಟಾರದಲ್ಲಿ ಭೀಕರ ಅಪಘಾತ: ಸ್ಕೂಟರ್ ಸವಾರ ಮೃತ್ಯು

ಮಂಗಳೂರಿನ ಕೊಟ್ಟಾರದಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಸ್ಕೂಟರ್‌ಗೆ ಲಾರಿಯೊಂದು ಢಿಕ್ಕಿಯಾಗಿದ್ದು, ರಸ್ತೆಗೆ ಎಸೆಯಲ್ಪಟ್ಟ ಸ್ಕೂಟರ್ ಸವಾರನ ಮೇಲೆ ಲಾರಿ ಹರಿದು ಈ ದುರ್ಘಟನೆ ಸಂಭವಿಸಿದೆ.  

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲಿನದು : ಪಣಂಬೂರು ಬೀಚಿನಲ್ಲಿ ತೇಲು ಸೇತುವೆ

ಪಣಂಬೂರು ಬೀಚಿಗೆ ಹೊಸ ಆಕರ್ಷಣೆ ಆಗಿರುವ ತೇಲುವ ಸೇತುವೆಯನ್ನು ವಿಧಾನಸಭಾಧ್ಯಕ್ಷರಾದ ಯು. ಟಿ. ಖಾದರ್ ಅವರು ಸಾರ್ವಜನಿಕರಿಗೆ ತೆರೆದಿಟ್ಟರು.ಬೀಚ್ ಪ್ರವಾಸೋದ್ಯಮವನ್ನು ಮತ್ತಷ್ಟು ಬಲಪಡಿಸಲು ಪ್ರವಾಸೋದ್ಯಮ ಸಚಿವರ ಜೊತೆಗೆ ಮಾತನಾಡುವುದಾಗಿ ಈ ಸಂದರ್ಭದಲ್ಲಿ ಖಾದರ್ ಹೇಳಿದರು. 150 ಮೀಟರ್ ಉದ್ದ ಇರುವ ಈ ತೇಲು ಸೇತುವೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲನೆಯದಾಗಿದೆ. ಇದರ ಮೇಲೆ ನಿಂತು ಸೂರ್ಯ ಮುಳುಗುವುದನ್ನು ನೋಡಬಹುದು. ಸದಾ 12 ಮಂದಿ ಜೀವ ರಕ್ಷಕರು ಅಲ್ಲಿ